Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ನಸುಕಿನಲ್ಲೇ ನೀರೆಯರ ಕ್ಯೂ;ಸಿಲ್ಕ್ ಸೀರೆಗಾಗಿ ಮುಗಿಬಿದ್ದ ನಾರಿಯರು
ಕರ್ನಾಟಕಪ್ರಮುಖ

ನಸುಕಿನಲ್ಲೇ ನೀರೆಯರ ಕ್ಯೂ;ಸಿಲ್ಕ್ ಸೀರೆಗಾಗಿ ಮುಗಿಬಿದ್ದ ನಾರಿಯರು

Share
3 Min Read
SHARE

Subscribe ನ್ಯೂಸಿಕ್ಸ್ ಕನ್ನಡ

NewsicsKannada/ YouTube

newsics.com

ರಾಮನಗರ: ಮೈಸೂರು ಸಿಲ್ಕ್ ಸೀರೆಗೆ ದುಬಾರಿ ಹಣ ತೆತ್ತರೂ ಸಿಗದಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಪ್ರತಿವಾರ ಮಾರುಕಟ್ಟೆಗೆ ಬರುವ ಕೆಎಸ್‌ಐಸಿ ಹೊಸ ರೇಷ್ಮೆ ಸೀರೆಗಾಗಿ, ನೀರೆಯರು ಹರಸಾಹಸ ಪಡುತ್ತಿದ್ದಾರೆ.

ಕೆಎಸ್‌ ಐಸಿ ಮಳಿಗೆಗಳಿಗೆ ಪ್ರತಿ ಬುಧವಾರ ಮತ್ತು ಶುಕ್ರವಾರ ಹೊಸ ಸೀರೆಗಳನ್ನು ಸರಬರಾಜು ಮಾಡಲಾಗುತ್ತದೆ. ತಮ್ಮ ಇಷ್ಟದ ಸೀರೆಯನ್ನು ಖರೀದಿಮಾಡಬೇಕು ಎಂಬಕಾರಣಕ್ಕೆ ಮಹಿಳೆಯರು ಪ್ರತಿ ಶುಕ್ರವಾರ ಬೆಳ್ಳಂ ಬೆಳಿಗ್ಗೆ 4 ಗಂಟೆಗೆ ಕೆಎಸ್‌ಐಸಿ ಮಳಿಗೆಯ ಮುಂಭಾಗ ಸಾಲು ಗಟ್ಟಿ ನಿಲ್ಲುತ್ತಾರೆ. 10 ಗಂಟೆಗೆ ಕೆಎಸ್‌ಐಸಿ ಶೋರೂಂ ಪ್ರಾರಂಭವಾಗುತ್ತದೆ ಯಾದರೂ, ತಡವಾಗಿ ಹೋದರೆ ನಮಗೆ ಎಲ್ಲಿ ಸೀರೆ ಸಿಗುವುದಿಲ್ಲವೋ ಎಂದು ಬೇಗನೆ ಎದ್ದು ಬಂದು ಸಾಲಿನಲ್ಲಿ ನಿಂತು ಟೋಕನ್‌ ಪಡೆಯುತ್ತಾರೆ. ಕಾಪಿ ತಿಂಡಿ ಎಲ್ಲವನ್ನೂ ಬಿಟ್ಟು ಮಹಿಳೆಯರು ಸೀರೆಗಾಗಿ ಸಾಲಿನಲ್ಲಿ ನಿಲ್ಲು ತ್ತಿದ್ದು, ಹೀಗೆ ನಿಂತರೂ ಸೀರೆ ಸಿಗದೆ ನಿರಾಸೆಯಿಂದ ಹಿಂದಿರುಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಚನ್ನಪಟ್ಟಣದಲ್ಲಿರುವ ಕೆಎಸ್‌ಐಸಿ ಮಾರಾಟ ಮಳಿಗೆಗೆ ಪ್ರತಿ ಶುಕ್ರವಾರ 40 ರಿಂದ 50 ರೇಷ್ಮೆ ಸೀರೆ ಬಂದರೆ ಹೆಚ್ಚು ಎಂಬಅತಾಗಿದೆ. ಆದರೆ, ಹೊಸದಾಗಿ ಬರುವ ಸೀರೆಗೆ 400 ರಿಂದ 500 ಮಂದಿ ಸಾಲುಗಟ್ಟಿ ನಿಲ್ಲುತ್ತಾರೆ. ಸೀರೆ ಸಿಗದ ನೂರಾರು ಮಹಿಳೆಯರು ಬೇಸರದಿಂದ ಮನೆಗೆ ಹಿಂದಿರುಗಿ ಮತ್ತೆ ಮುಂದಿನ ವಾರ ಬೆಳ್ಳಂಬೆಳಿಗ್ಗೆ ಸರತಿ ಸಾಲಿನಲ್ಲಿ ಬಂದು ನಿಲ್ಲುತ್ತಾರೆ, ಕೆಎಸ್‌ಐಸಿ ಸೀರೆ ಉಡಲೇ ಬೇಕು ಎಂದು ತಿಂಗಳು ಗಟ್ಟಲೆ ಕಾಯ್ದು ನಿಲ್ಲುವವರ ಸಂಖ್ಯೆ ದೊಡ್ಡದಿದೆ. ಇದು ಚನ್ನಪಟ್ಟಣ ಶೋ ರೂಂ ಕಥೆ ಮಾತ್ರವಲ್ಲ, ರಾಜ್ಯ ಮತ್ತು ಹೊರರಾಜ್ಯದಲ್ಲಿರುವ ಕೆಎಸ್‌ಐಸಿಯ 17 ಮಾರಾಟ ಮಳಿಗೆಗಳಲ್ಲೂ ಇದೇ ಪರಿಸ್ಥಿತಿ ಇದೆ ಎಂಬುದು ಕೆಎಸ್‌ ಐಸಿ ಸಿಬ್ಬಂದಿಯ ವಿವರಣೆಯಾಗಿದೆ. ಕೆಎಸ್‌ಐಸಿ ತನ್ನ 17 ಮಾರಾಟ ಮಳಿಗೆಗಳಿಗೆ ವಾರದಲ್ಲಿ ಎರಡು ದಿನ ಸೀರೆ ಪೂರೈಕೆ ಮಾಡುತ್ತಿದ್ದು, ಬುಧವಾರ 50 ಸೀರೆ, ಶುಕ್ರವಾರ 50 ಸೀರೆಯನ್ನು ಪೂರೈಕೆ ಮಾಡುತ್ತದೆ. ಆದರೆ, ಪ್ರತಿ ಕೆಎಸ್‌ಐಸಿ ಶೋರೂಂ ಮುಂಭಾಗ ಸೀರೆಗಾಗಿ 400ಕ್ಕೂ ಹೆಚ್ಚು ಮಂದಿ ಸಾಲುಗಟ್ಟಿ ನಿಂತಿರುತ್ತಾರೆ.
ರಾಜ್ಯದಲ್ಲಿದೆ 17 ಮಾರಾಟ ಮಳಿಗೆ: 1912ರಲ್ಲಿ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಕಾಲದಲ್ಲಿ ಆರಂಭವಾದ ಮೈಸೂರು ಸಿಲ್ಕ್ ರೇಷ್ಮೆ ಸೀರೆ ತಯಾರಿಕಾ ಕಾರ್ಖಾನೆ, ಶುದ್ಧ ರೇಷ್ಮೆ ಹಾಗೂ ಸೀರೆಯ ಅಂಚಿ ನಲ್ಲಿರುವ ಝರಿಗೆ ಶುದ್ಧ ಚಿನ್ನವನ್ನು ಬಳಸು ವುದ ರಿಂದ ಗ್ರಾಹಕರ ವಿಶ್ವಾಸಾರ್ಹತೆಯ ಪ್ರತೀಕವಾಗಿದೆ. ಎಷ್ಟು ವರ್ಷ ಹಳೆಯದಾದರೂ ಸೀರೆಯ ಬೆಲೆ ಮಾತ್ರ ಕಡಿಮೆಯಾಗುವುದಿಲ್ಲ. ಪರಿಶುದ್ಧತೆಗೆ ಹೆಸ ರಾಗಿರುವ ಮೈಸೂರು ಸಿಲ್ಕ್ ಸೀರೆ ನಮ್ಮ ರಾಜ್ಯದಲ್ಲಿ ಮಾತ್ರವಲ್ಲ ಹೊರರಾಜ್ಯ ಹಾಗೂ ವಿದೇಶಗಳಲ್ಲೂ ಸಾಕಷ್ಟು ಬೇಡಿಕೆ ಇದೆ.

ಕೆಎಸ್‌ಐಸಿ 17 ಮಾರಾಟ ಮಳಿಗೆಗಳನ್ನು ತೆರೆ ದಿದ್ದು, ಮೈಸೂರಿನಲ್ಲಿ 5, ಬೆಂಗಳೂರಿನಲ್ಲಿ 8, ಚನ್ನ ಪಟ್ಟಣ ಮತ್ತು ದಾವಣಗೆರೆಯಲ್ಲಿ ತಲಾ ಒಂದೊಂ ದು ಶೋ ರೂಂ ಇದೆ. ಇದಲ್ಲದೆ ಹೈದರಾಬಾದ್‌ ಮತ್ತು ಚೆನೈನಲ್ಲಿ ಸಹ ಕೆಎಸ್‌ಐಸಿ ಶೋರೂಂ ಇದೆ. ಕೆಎಸ್‌ಐಸಿ ರೇಷ್ಮೆ ಸೀರೆಯ ಬೆಲೆ 18500 ರೂ. ನಿಂದ 1.50 ಲಕ್ಷ ರೂ. ವರೆಗೆ ಇದ್ದು, ಚಿನ್ನದ ಬೆಲೆಯ ಆಧಾ ರದ ಮೇಲೆ ಸೀರೆಯ ಬೆಲೆ ಸಹ ವ್ಯತ್ಯಾಸವಾಗುತ್ತದೆ.

ಕೆಎಸ್‌ಐಸಿ ಗ್ರಾಹಕರ ಬೇಡಿಕೆಗೆ ತಕ್ಕಂತೆ ರೇಷ್ಮೆ ಸೀರೆಯನ್ನು ಉತ್ಪಾದನೆ ಮಾಡಲು ಸಾಧ್ಯವಾಗುತ್ತಿಲ್ಲ. ಕೆಎಸ್‌ ಐಸಿ ರೇಷ್ಮೆ ಸೀರೆಗಳನ್ನು ಮೈಸೂರು ಮತ್ತು ಚನ್ನಪಟ್ಟಣದ ಕಾರ್ಖಾನೆಗಳಲ್ಲಿ ತಯಾರಿಸಲಾಗುತ್ತಿದೆ. ಮೈಸೂರಿನಲ್ಲಿ 152 ವಿದ್ಯುತ್‌ ಚಾಲಿತ ಸೀರೆ ನೇಯುವ ಮಗ್ಗಗಳಿದ್ದು, ಚನ್ನಪಟ್ಟಣದಲ್ಲಿ 30 ಮಗ್ಗಗಳಿವೆ. ಇನ್ನು ಟಿ.ನರಸೀಪುರದಲ್ಲಿ ನೂಲು ಬಿಚ್ಚುವ ಘಟಕವಿದೆ. ಪ್ರತಿ ದಿನ ಚನ್ನಪಟ್ಟಣದಲ್ಲಿ 50 ಸೀರೆ ಉತ್ಪಾದನೆ ಮಾಡಿದರೆ, ಮೈಸೂರಿನಲ್ಲಿ 300 ಸೀರೆ ಉತ್ಪಾದನೆ ಮಾಡಲಾಗುತ್ತದೆ. ಗ್ರಾಹಕರ ಬೇಡಿಕೆಯನ್ನು ನೋಡಿದರೆ ಇದಕ್ಕೆ 5 ಪಟ್ಟು ಹೆಚ್ಚು ಉತ್ಪಾದನೆ ಮಾಡಬೇಕು ಎನ್ನಲಾಗುತ್ತದೆ.

Sky Stadium ಏನಿದು ಸ್ಕೈ ಸ್ಟೇಡಿಯಂ? ಸೌದಿಯ ಆಲೋಚನೆ ಏನು?

TAGGED:Women flock to buy silk sarees; queues form at dawn
Share This Article
Facebook Twitter Copy Link Print
Previous Article UPS Layoffs: ಬರೋಬ್ಬರಿ 48,000 ಮಂದಿಯನ್ನು ಕೆಲಸದಿಂದ ವಜಾ ಮಾಡಿದ ಯುಪಿಎಸ್
Next Article ನೆಲ ಒರೆಸಲು ಹಳೆಯ ಬಟ್ಟೆ ಬಳಸುತ್ತಿದ್ದೀರಾ? ಹಾಗಾದ್ರೆ ಎಚ್ಚರವಹಿಸಿ, ಈ ಸಮಸ್ಯೆ ತಪ್ಪಿದ್ದಲ್ಲ!

Popular Posts

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

ಅಸ್ಸಾಂನ ಜೋರ್ಹತ್‌ನಲ್ಲಿ ವಾಯುಪಡೆಯ ವಿಮಾನ ಪತನ; ಐವರು ಸಿಬ್ಬಂದಿ ಸಾವು

1 Min Read

ಕೊಟ್ಟ ಸಾಲ ವಾಪಾಸ್ ಬಾರದೇ ಕಾಲೇಜು ಶುಲ್ಕ ಕಟ್ಟಲಾಗದೇ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

1 Min Read

You Might Also Like

ಕರ್ನಾಟಕಪ್ರಮುಖ

Dharmasthala Case ಎಸ್ಐಟಿ ರಚನೆಯಾದಾಗ ವೀರೇಂದ್ರ ಹೆಗ್ಗಡೆ ಜೈಲಿಗೆ ಹೋಗ್ತಾರೆಂದು ಬುರುಡೆ ಗ್ಯಾಂಗ್ ಸಂಭ್ರಮಿಸಿತ್ತು: ಚಿನ್ನಯ್ಯ

1 Min Read
ಕರ್ನಾಟಕಪ್ರಮುಖ

ಧರ್ಮದ ಕಾರಣಕ್ಕೆ ಜಾಬ್ ರಿಜೆಕ್ಟ್: ಸೋಷಿಯಲ್ ಮೀಡಿಯಾದಲ್ಲಿ ಭಯಂಕರ ಚರ್ಚೆ!

1 Min Read
ಕರ್ನಾಟಕಪ್ರಮುಖಮನರಂಜನೆ

ಆರು ವರ್ಷದ ಪ್ರೀತಿ : ಗಗನಸಖಿಗೆ ಮನಸು ಕೊಟ್ಟ ಖ್ಯಾತ ನಟನ ಲೈಫ್ ಬರ್ಬಾದ್ ಮಾಡಿದಳಾ ಆ ಚೆಲುವೆ?

3 Min Read
ಕರ್ನಾಟಕಪ್ರಮುಖ

ಇಬ್ಬರು ಪುಟ್ಟ ಮಕ್ಕಳನ್ನು ನೇಣು ಬಿಗಿದು ಹತ್ಯೆಗೈದು ತಾಯಿ ಆತ್ಮಹತ್ಯೆಗೆ ಯತ್ನ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?