Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಇತ್ತೀಚೆಗೆ, ಅದರಲ್ಲೂ ಮುಖ್ಯವಾಗಿ ಭಾರತದಲ್ಲಿ ಹದಿಹರೆಯದ ಹುಡುಗರು ಮಧ್ಯವಯಸ್ಕ ಆಂಟಿಯರ ಆಕರ್ಷಣೆಗೆ ಒಳಗಾಗುತ್ತಿದ್ದಾರೆ. ಈ ಮೊದಲು ಇಂಥವರ ಸಂಖ್ಯೆ ತುಂಬಾ ಕಡಿಮೆ ಇರುತ್ತಿತ್ತು. ಆದರೆ, ಈಗ ಇಂತಹ ಹುಡುಗರ ಸಂಖ್ಯೆಯಲ್ಲಿ ಗಣನೀಯವಾಗಿ ಏರುತ್ತಿದೆ ಎನ್ನಲಾಗುತ್ತಿದೆ.
ಮೊಟ್ಟಮೊದಲನೆಯದಾಗಿ, ಈ ಟೀನೇಜ್ ಹುಡುಗರಲ್ಲಿ ಒಂದು ವಿಚಿತ್ರ ಕ್ರೇಜ್ ಇರುತ್ತದೆ, ‘ಅದು ತಮ್ಮ ಪುರುಷತ್ವ ಪರೀಕ್ಷೆ ಮಾಡಿಕೊಳ್ಳುವುದು’ ಎಂಬ ಯೋಚನೆ. ಅದನ್ನು ಯೋಚನೆ, ಕ್ರೇಜ್ ಅನ್ನೋದಕ್ಕಿಂತ ‘ಗೀಳು’ ಎನ್ನಬಹುದು. ಅದಕ್ಕೆ ಕಾರಣ ಸರಿಯಾದ ತಿಳಿವಳಿಕೆ ಕೊರತೆ ಹಾಗೂ ಲೈಂಗಿಕ ಅಜ್ಞಾನ. ಅಂಥ ಹುಡುಗರು ಹುಡುಗಿಯರಿಗಿಂತ ಹೆಚ್ಚಾಗಿ ಆಂಟಿಯರ ಸಂಪರ್ಕ ಮಾಡಲು ಬಯಸುತ್ತಾರೆ. ಅವರ ಪ್ರಕಾರ, ಈಗಾಗಲೇ ಅನುಭವವಿರುವ ಆಂಟಿಯರು ಈ ವಿಷಯದಲ್ಲಿ ಹದಿಹರೆಯದ ಹುಡುಗರಿಗೆ, ಫ್ರೆಶರ್‌ಗಳಿಗೆ ‘ಪುರುಷತ್ವದ ಸರ್ಟಿಫಿಕೇಟ್’ ಕೊಡಲು ಯೋಗ್ಯ ಹಾಗೂ ಅರ್ಹತೆಯುಳ್ಳ ವ್ಯಕ್ತಿಗಳು ಎಂದು ಟೀನೇಜ್ ಬಾಯ್ಸ್ ಭಾವಿಸುತ್ತಾರೆ ಎನ್ನುತ್ತದೆ ವರದಿ. ಆದರೆ, ಇದು ಸೂಕ್ತವಲ್ಲ.
ಇನ್ನೊಂದು ವಿಷಯ ಎಂದರೆ, ಆಂಟಿಯರಿಗೆ ಈಗಾಗಲೇ ಮದುವೆ ಅಗಿರುತ್ತದೆ. ಅವರು ತಮ್ಮನ್ನು ಮದುವೆಯಾಗಲು ಒತ್ತಾಯಿಸಿ ಗಂಟುಬೀಳೋದಿಲ್ಲ ಎನ್ನುವುದು ಟೀನೇಜ್ ಹುಡುಗರ ಭಾವನೆ. ಹೇಗೂ ಅಂಡರ್‌ಸ್ಟ್ಯಾಂಡಿಂಗ್ ಮೇಲೆ ಆ ಅನುಭವಕ್ಕೆ ಹೋಗೋದು, ಏನೂ ಸಮಸ್ಯೆ ಆಗಲ್ಲ’ ಎಂದುಕೊಳ್ಳುತ್ತಾರೆ . ಆದರೆ, ಅವರಿಗೆ ಆ ಕ್ಷಣದಲ್ಲಿ ಮುಂದೆ ಇಬ್ಬರ ಭವಿಷ್ಯಕ್ಕೂ ಇದು ಮಾರಕ ಆಗಬಲ್ಲದು ಎಂಬ ಅರಿವು ಇರೋದಿಲ್ಲ. ಬಟ್, ಅಂದುಕೊಂಡಂತೆ ಆಗದೇ ಬಹಳಷ್ಟು ಹುಡುಗರು ಒದ್ದಾಡಿದ್ದೂ ಇದೆ, ಪ್ರಾಣ ಕಳೆದುಕೊಂಡಿದ್ದು ಇದೆ. ಆದರೆ, ಅಂತಹ ಸತ್ಯ ಸಂಗತಿಗಳು ಹಾಗೆಯೇ ಹೊರಜಗತ್ತಿಗೆ ಅನಾವರಣ ಆಗೋದಿಲ್ಲ, ಬೇರೆ ಕಾರಣಗಳ ಮೂಲಕ ಮುಚ್ಚಿಹೋಗುತ್ತವೆ. ಆದರೆ, ಅನುಭವಿಸಿದ ಹುಡುಗರು ಮತ್ತೆಂದೂ ಅಂತಹ ಸಾಹಸಕ್ಕೆ ಕೈಹಾಕುವುದು ಕಡಿಮೆ.
ಇಂತಹ ಟ್ರೆಂಡ್ ಭಾರತಕ್ಕೆ ಬಂದಿದ್ದು ಹೇಗೆ? ಇದಕ್ಕೆ ಒಂದೇ ವಾಕ್ಯದಲ್ಲಿ ಹೇಳಬೇಕು ಎಂದರೆ, ವಿದಶಿ ಸಂಸ್ಕೃತಿ ವ್ಯಾಮೋಹ. ನಮ್ಮ ಸನಾತನ ಧರ್ಮದಲ್ಲಿ ಮದುವೆ, ಸಂಸಾರ, ಮಕ್ಕಳು ಇಂಥವುಗಳಿಗೆ ಅದರದೇ ಆದ ಶುದ್ಧತೆ, ನಂಬಿಕೆ, ಪ್ರಾಮಾಣಿಕತೆ, ಪ್ರಾಮುಖ್ಯತೆ, ಸಾಮಾಜಿಕ ಮನ್ನಣೆ ಎಲ್ಲವೂ ಇದೆ. ಆದರೆ, ವಿದೇಶಿ ಜೀವನಶೈಲಿಯಲ್ಲಿ ಮದುವೆ, ಸಂಸಾರ, ಸಂಬಂಧ ಇವೆಲ್ಲಾ ಜಸ್ಟ್ ಅವರಿಷ್ಟ ಅನ್ನೋ ಕಾನ್ಸೆಪ್ಟ್. ಆದರೆ, ನಮ್ಮ ಭಾರತೀಯ ಸಮಾಜದಲ್ಲಿ ಅಂತಹ ಸಂಬಂಧಗಳಿಗೆ ಮನ್ನಣೆ ತೀರಾ ಕಡಿಮೆ.
ಭಾರತೀಯ ಸಮಾಜದ ತಿಳುವಳಿಕೆ ಇಲ್ಲಿನ ಟೀನ್ ಏಜ್ ಹುಡುಗರಿಗೆ ಇರಲೇಬೇಕು. ಆದರೆ, ಇತ್ತೀಚೆಗೆ ಅದು ಕಡಿಮೆಯಾಗುತ್ತಿದೆ ಎನ್ನುತ್ತವೆ ಸಾಕಷ್ಟು ಸಮೀಕ್ಷೆಗಳು. ಈ ಕಾರಣಕ್ಕೇ ಟೀನೇಜ್ ಹುಡುಗರು-ಆಂಟಿಯರ ಅನೈತಿಕ ಸಂಬಂಧಗಳು ಕಾನೂನು ಹಾಗೂ ಸಮಾಜದಲ್ಲಿ ಅಪರಾಧ ಎನ್ನಿಸಿಕೊಂಡು ದುರಂತಮಯವಾಗುತ್ತದೆ. ಎಲ್ಲೆಲ್ಲಿ ಹೇಗಿರಬೇಕೋ ಹಾಗೆ ಇರದಿದ್ದರೆ ಅದು ಅಪರಾಧವಷ್ಟೇ ಅಲ್ಲ, ಬದುಕು ವಿನಾಶಕ್ಕೆ ಗುರಿಯಾಗುತ್ತದೆ.
ದುರಂತ ಆಗುವರೆಗೂ ಎಚ್ಚೆತ್ತುಕೊಳ್ಳದ ಹದಿಹರೆಯದ ಹುಡುಗರು!
ಆದರೆ, ದುರಂತ ಆಗುವರೆಗೂ ಎಚ್ಚೆತ್ತುಕೊಳ್ಳದ ಹದಿಹರೆಯದ ಹುಡುಗರು ತಮ್ಮದಷ್ಟೇ ಅಲ್ಲ, ಆಂಟಿಯರ, ಆ ಸಂಸಾರದ, ತಮ್ಮದೇ ಕುಟುಂಬದ ಹಳಿತಪ್ಪಿದ ಬದುಕಿಗೆ, ಸಮಾಜದ ಅವಹೇಳನಕ್ಕೆ ಗುರಿಯಾಗಿ ನರಕಯಾತನೆ ಅನುಭವಿಸುತ್ತಾರೆ. ಸಮಾಜದಲ್ಲಿ ದಿನನಿತ್ಯ ಸುದ್ದಿಯಾಗುವ, ಸುದ್ದಿಯಾಗದ ಇಂತಹ ಸಂಗತಿಗಳ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನವೇ ನಮ್ಮಲ್ಲಿ ಕಡಿಮೆ.
ಕಾರಣ, ನಮ್ಮಲ್ಲಿ ಅಂತಹದು ನಡೆಯುತ್ತಿದೆ ಎನ್ನುವ ಜ್ಞಾನವೇ ಹಲವರಲ್ಲಿ ಇಲ್ಲದಿರುವುದು. ಜೊತೆಗೆ, ಆ ಬಗ್ಗೆ ಮಾತುಕತೆ, ಅರಿವು ಹೊಂದುವ ಅಭ್ಯಾಸ ಕೂಡ ಕಡಿಮೆ ಇರೋದು. ಒಟ್ಟಿನಲ್ಲಿ, ಆಂಟಿಯರ ಹಿಂದೆ ಬೀಳುವ ಹುಡುಗರ ಸಂಖ್ಯೆ ಹೀಗೇ ಮುಂದುವರಿದಲ್ಲಿ ಮುಂದೊಂದು ದಿನ ಮದುವೆ ಎಂಬ ಪದ್ಧತಿ, ಸಂಸಾರವೆಂಬ ಪದ ಅರ್ಥ ಕಳೆದುಕೊಳ್ಳಬಹುದು, ಈಗಲೇ ಎಚ್ಚರಗೊಂಡರೆ ಒಳ್ಳೆಯದು ಎನ್ನುತ್ತವೆ ಈ ಬಗೆಗಿನ ವರದಿ!