Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಹಾವೇರಿ : ದೀಪಾವಳಿ ಹಬ್ಬದ ಸಂಭ್ರಮಾಚರಣೆಯಲ್ಲಿ ಹಾವೇರಿ ಜಿಲ್ಲೆಯಲ್ಲಿ ಹೋರಿ ಬೆದರಿಸುವ ಸ್ಪರ್ಧೆ ನಡೆಯುತ್ತದೆ.
ದೀಪಾವಳಿ ಹಬ್ಬದ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ಹೋರಿ ಬೆದರಿಸುವ ಸ್ಪರ್ಧೆ ಹಾಗೂ ಹೋರಿಗಳ ಮೆರವಣಿಗೆ ಸಂದರ್ಭದಲ್ಲಿ ಹೋರಿ ಗುದ್ದಿ ಮೂವರು ಮೃತಪಟ್ಟಿದ್ದಾರೆ. ಮೊದಲ ದಿನವೇ ಪ್ರತ್ಯೇಕ ಘಟನೆಗಳಲ್ಲಿ ಮೂವರು ಬಲಿಯಾಗಿದ್ದಾರೆ.
ಹಾವೇರಿ ನಗರದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಹೋರಿಯೊಂದು ತಪ್ಪಿಸಿಕೊಂಡು ಬಂದು ರಸ್ತೆ ಬದಿ ಸಾಗುತ್ತಿದ್ದ ಚಂದ್ರಶೇಖರ (70) ಎಂಬುವರಿಗೆ ತಿವಿದಿದೆ. ತಾಲೂಕಿನ ದೇವಿಹೊಸೂರಿನಲ್ಲಿ ಮೆರವಣಿಗೆ ವೇಳೆ ಒಂದು ಎತ್ತು ಮನೆಯ ಮುಂದೆ ಕುಳಿತಿದ್ದ ವ್ಯಕ್ತಿಗೆ ತಿವಿದಿದೆ. ಹಾನಗಲ್ ನ ತಿಳವಳ್ಳಿಯ ವ್ಯಕ್ತಿಯೊಬ್ಬರು ಹೋರಿ ತಿವಿತಕ್ಕೆ ಬಲಿಯಾಗಿದ್ದಾರೆ.