Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಆಂಧ್ರಪ್ರದೇಶ: ತಿರುಪತಿ ದೇವಸ್ಥಾನವು ಪ್ರಪಂಚದಲ್ಲೇ ಅತ್ಯಂತ ಪ್ರಸಿದ್ಧ ಮತ್ತು ಶ್ರೀಮಂತ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ನಿತ್ಯ ಕೋಟ್ಯಂತರ ರೂಪಾಯಿ ಕಾಣಿಕೆ ರೂಪದಲ್ಲಿ ಹರಿದು ಬರುತ್ತದೆ. ಇದೀಗ11 ತಿಂಗಳಲ್ಲಿ 918 ಕೋಟಿ ರೂಪಾಯಿ ದೇಣಿಗೆ ಸಲ್ಲಿಕೆಯಾಗಿದೆ.
ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಮಾಹಿತಿ ನೀಡಿ, 2024ರ ನವೆಂಬರ್ ನಿಂದ 2025 ರ ಅಕ್ಟೋಬರ್ ವೇಳೆಗೆ ಆನ್ಲೈನ್ ಮೂಲಕ 579.38 ಕೋಟಿ ರೂ., ಆಫ್ ಲೈನ್ ಮೂಲಕ 339.20 ಕೋಟಿ ರೂ. ಹಣವನ್ನು ಭಕ್ತರು ದೇಣಿಗೆ ರೂಪದಲ್ಲಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಅನ್ನದಾಸೋಹ ಟ್ರಸ್ಟಿಗೆ ಅತಿ ಹೆಚ್ಚು 339 ಕೋಟಿ ರೂ., ಶ್ರೀವಾರಿ ಟ್ರಸ್ಟ್ ಗೆ 252 ಕೋಟಿ ರೂ., ಶ್ರೀ ಬಾಲಾಜಿ ಆರೋಗ್ಯ ವರಪ್ರಸಾದಿನಿ ಟ್ರಸ್ಟಿಗೆ 98 ಕೋಟಿ ರೂಪಾಯಿ ಸೇರಿ ವಿವಿಧೆಡೆ ದೇಣಿಗೆ ನೀಡಲಾಗಿದೆ.
ತಿರುಪತಿ ದೇವಾಲಯದ ಒಟ್ಟು ಆಸ್ತಿ ಅಂದಾಜು 2.5 ಲಕ್ಷ ಕೋಟಿ ರೂ.ಗೂ ಹೆಚ್ಚಾಗಿದೆ. ಇದರಲ್ಲಿ ವಿವಿಧ ಬ್ಯಾಂಕುಗಳಲ್ಲಿ 18,817 ಕೋಟಿ ರೂ. ಠೇವಣಿ ಇಡಲಾಗಿದೆ. 10.25 ಟನ್ ಚಿನ್ನ, 2.5 ಟನ್ ಚಿನ್ನದ ಆಭರಣ, 7123 ಎಕರೆ ಭೂಮಿ, 960 ಇತರೆ ಆಸ್ತಿಗಳಿವೆ. ದೇವಾಲಯದ ವಾರ್ಷಿಕ ಆದಾಯ 4300 ಕೋಟಿ ರೂ.ಗೂ ಹೆಚ್ಚಾಗಿದೆ ಎಂದು ಹೇಳಲಾಗಿದೆ.