Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬೆಂಗಳೂರು : ಮದುವೆಯಾಗೋದಾಗಿ ನಂಬಿಸಿ ಹಿಂದೂ ಯುವತಿಗೆ ಮುಸ್ಲಿಂ ಯುವಕ ಮೋಸ ಮಾಡಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ. ನಿನ್ನನ್ನೇ ಮದುವೆಯಾಗ್ತೀನಿ ಎಂದು ಹಿಂದೂ ಯುವತಿ ಜೊತೆ ಪ್ರೀತಿಯ ನಾಟಕವಾಡಿದ ಮುಸ್ಲಿಂ ಯುವಕ, ಬಳಿಕ ಮತ್ತೊಬ್ಬಳ ಜೊತೆ ಎಂಗೇಜ್ ಆಗಿದ್ದಾನೆ.
ನೊಂದ ಯುವತಿ ಮೊಹಮದ್ ಇಶಾಕ್ ವಿರುದ್ಧ ದೂರು ನೀಡಿದ್ದಾಳೆ. HSR ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇನ್ಸ್ಟಾ ಮೂಲಕ ಪರಿಚಯವಾಗಿದ್ದ ಇಬ್ಬರ ನಡುವಿನ ಸ್ನೇಹ ಬಳಿಕ ಪ್ರೀತಿಯಾಗಿ ಅರಳಿದೆ. 2024ರ ಅಕ್ಟೋಬರ್ 17ರಂದು ಮೊಹಮದ್ ಇಶಾಕ್ ಪರಿಚಯವಾಗಿದ್ದನಂತೆ. ಪ್ರೀತಿ, ಪ್ರೇಮದ ಮೆಸೇಜ್ ಮಾಡಿ ಯುವತಿಯನ್ನ ನಂಬಿಸಿ ಮೋಸ ಮಾಡಿದ್ದಾನೆ ಎನ್ನಲಾಗ್ತಿದೆ.
ದಾಸರಹಳ್ಳಿಯ ಖಾಸಗಿ ಹೋಟೆಲ್ನಲ್ಲಿ ರೂಮ್ ಬುಕ್ ಮಾಡಿದ್ದ. ಮದುವೆ ಆಗ್ತೇನೆ ಎಂದು ನಂಬಿಸಿ ಪದೇ ಪದೇ ಲೈಂಗಿಕ ಕ್ರಿಯೆ ನಡೆಸಿದ್ದ ಎಂದು ಸಂತ್ರಸ್ತ ಯುವತಿ ಆರೋಪ ಮಾಡಿದ್ದಾಳೆ.
ಮೋಸ ಹೋದ ಯುವತಿ ಇದೀಗ ಮೊಹಮದ್ ಇಶಾಕ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ. ಈ ಸಂಬಂಧ ಸದ್ಯ HSR ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.