Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಕಲಬುರ್ಗಿ :ಸರ್ಕಾರಿ ನೌಕರರು ಕೂಡ RSS ಚಟುವಟಿಕೆಗಳಲ್ಲಿ ಭಾಗವಹಿಸುವಂತಿಲ್ಲ ಎಂದು ಸರ್ಕಾರ ಖಡಕ್ ಆದೇಶ ನೀಡಿದ್ರು, ಕಲಬುರಗಿಯಲ್ಲಿ ಸರ್ಕಾರಿ ನೌಕರರು RSS ಪಥಸಂಚಲನದಲ್ಲಿ ಭಾಗಿಯಾಗುವ ಮೂಲಕ ಸರ್ಕಾರದ ಆದೇಶಕ್ಕೆ ಸೆಡ್ಡು ಹೊಡೆದಿದ್ದಾರೆ.
ಸರ್ಕಾರಿ ನೌಕರರು RSS ಪಥ ಸಂಚಲನದಲ್ಲಿ ಭಾಗಿ ಆಗದಂತೆ ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರ ಆದೇಶ ಮಾಡಿದ್ರು ಸರ್ಕಾರಿ ವೈದ್ಯ ಗಣವೇಷ ಧಾರಣೆ ಮಾಡಿದ್ದಾರೆ. ಸೇಡಂ ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ನಾಗರಾಜ್ ಮನ್ನೆ ರಸ್ತೆ ಪಥ ಸಂಚಲನದಲ್ಲಿ ಭಾಗಿಯಾಗಿದ್ರು.
ನಿನ್ನೆ ಸೇಡಂನಲ್ಲಿ ನಡೆದ ರೆಸ್ತೆ ಪಥ ಸಂಚಲನದಲ್ಲಿ ಸರ್ಕಾರಿ ವೈದ್ಯ ಕೂಡ ಭಾಗಿಯಾಗಿದ್ದರು. RSSಗೆ ನೂರು ವರ್ಷ ಹಿನ್ನಲೆ ಪಥ ಸಂಚಲನ ಆಯೋಜನೆ ಮಾಡಿದ್ರು.