Newsics_Kannada
Subscribe and watch video
ನ್ಯೂಸಿಕ್ಸ್ ಕನ್ನಡ
ಬನ್ನಿ ನಮ್ ಸಂಗಡ
newsics.com
ಪ್ರತಿದಿನ ಮೆಟ್ರೋದಲ್ಲಿ ಪ್ರಯಾಣಿಸುತ್ತಾರೆ ಮತ್ತು ಪ್ರಯಾಣದ ಅಂತ ಬಂದಾಗ ಆಯಾಸಗೊಂಡ ಜನರು ನಿದ್ದೆಗೆ ಜಾರ್ತಾರೆ. 10 ನಿಮಿಷನಾದ್ರೂ ಮಲಗಿ ಹೇಳೋಣ ಅಂತ ಕಣ್ಣು ಮುಚ್ಚುತ್ತಾರೆ. ಆದ್ರೆ ಮೆಟ್ರೋ ಪ್ರಯಾಣದ ಸಮಯದಲ್ಲಿ ಈ ರೀತಿ ನಿದ್ರೆ ಮಾಡಿದ್ರೆ ಭಾರೀ ದಂಡ ಕಟ್ಟಬೇಕಾಗುತ್ತೆ.
ಈ ರೂಲ್ಸ್ ನಮ್ಮ ಮೆಟ್ರೋದಲ್ಲಿ ಅಲ್ಲ ದುಬೈ ಮೆಟ್ರೋಗಳಲ್ಲಿ. ಇಲ್ಲಿ ಮಲಗಲು ಅವಕಾಶವಿಲ್ಲ. ಮಿಸ್ ಆಗಿ ಮಲಗಿದ್ರೆ, ನಿಮಗೆ ದಂಡ ವಿಧಿಸ್ತಾರೆ. ಸಣ್ಣ ಮೊತ್ತವಲ್ಲ, ಭಾರೀ ಫೈನ್ ಕಟ್ಟಬೇಕಾಗುತ್ತೆ ಎಚ್ಚರ.
ಮೆಟ್ರೋದಲ್ಲಿ ಪ್ರಯಾಣಿಸುವಾಗ, ನೆಲದ ಮೇಲೆ ಕುಳಿತುಕೊಳ್ಳುವುದು, ಮಲಗುವುದು, ಗೇಟ್ ಮುಂದೆ ನಿಲ್ಲುವುದು ಅಥವಾ ಕುಳಿತುಕೊಳ್ಳುವುದು, ಸೀಟಿನ ಮೇಲೆ ಪಾದಗಳನ್ನು ಮೇಲಕ್ಕೆತ್ತಿ ಕುಳಿತುಕೊಳ್ಳುವುದು ಅಥವಾ ಸೀಟಿನ ಮೇಲೆ ಕುಳಿತಲ್ಲೇ ಮಲಗುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಈ ನಿಯಮ ದುಬೈ ಮೆಟ್ರೋದಲ್ಲಿಗೆ. ಇತ್ತೀಚೆಗೆ ವೈರಲ್ ಆದ ಪ್ರಯಾಣಿಕರೊಬ್ಬರ ಪೋಸ್ಟ್ ನಂತರ, ದುಬೈ ಮೆಟ್ರೋದ ಈ ನಿಯಮಗಳು ಮತ್ತೆ ಬೆಳಕಿಗೆ ಬಂದಿವೆ.
ದುಬೈ ಮೆಟ್ರೋ ನಿಯಮಗಳ ಪ್ರಕಾರ, ನೀವು ಪ್ರಯಾಣಿಸುವಾಗ ನೆಲದ ಮೇಲೆ ಕುಳಿತುಕೊಂಡರೆ ಅಥವಾ ಮಲಗಿದರೆ, ನಿಮಗೆ 100 ರಿಂದ 300 ದಿರ್ಹಮ್ ಗಳವರೆಗೆ ದಂಡ ವಿಧಿಸಬಹುದು. ಈ ಮೊತ್ತವು ಭಾರತೀಯ ರೂಪಾಯಿಯಲ್ಲಿ ಸುಮಾರು 2,500 ರಿಂದ 7,500 ರೂಪಾಯಿಗಳವರೆಗೆ ಇರುತ್ತದೆ.