Newsics_Kannada
Subscribe and watch video
ನ್ಯೂಸಿಕ್ಸ್ ಕನ್ನಡ
ಬನ್ನಿ ನಮ್ ಸಂಗಡ
newsics.com
ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ದಾಂಪತ್ಯ ಜೀವನ ಮುಕ್ತಾಯವಾಗಿ ಒಂದೂವರೆ ವರ್ಷಗಳಾಗಿವೆ.ಗೌರವಯುತವಾಗಿ ದೂರವಾದ ಇಬ್ಬರು ಈ ಒಂದೂವರೆ ವರ್ಷದಲ್ಲಿ ಬೇರೆ ಬೇರೆ ದಾರಿಯಲ್ಲಿ ನಡೆಯುತ್ತಿದ್ದಾರೆ. ತಮ್ಮ ತಮ್ಮ ಕೆಲಸಗಳ ಮೂಲಕ ಸದ್ದು ಮಾಡಿದ್ದಾರೆ.
ನಿವೇದಿತಾ ಗೌಡ ತೆಲುಗು ಚಿತ್ರರಂಗದ ಬಾಗಿಲು ಬಡೆದು ಬಂದಿದ್ಧಾರೆ. ”ವಾಲು ಕಳ್ಳತಾ” ಹೆಸರಿನ ಆಲ್ಬಂನಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡದಲ್ಲಿ ”ಐ ಆಮ್ ಗಾಡ್” ಚಿತ್ರದಲ್ಲಿ ದಿಗಂತ್ ಜೊತೆ ವಿಶೇಷ ಹಾಡೊಂದರಲ್ಲಿ ಹೆಜ್ಜೆ ಹಾಕಿದ್ದಾರೆ. ಇದರ ಜೊತೆ ಎಂದಿನಂತೆ ರೀಲ್ಸ್‌ಗಳನ್ನು ಮಾಡುತ್ತಾ ಪಡ್ಡೆ ಹುಡುಗರ ಕಣ್ಮನ ಸೆಳೆಯುತ್ತಿರುವ ನಿವೇದಿತಾ ದೇಶ ಸುತ್ತುವ ಕೆಲಸವನ್ನು ಕೂಡ ಮಾಡುತ್ತಿದ್ದಾರೆ.
ಇದೀಗ ನಟಿ ನಿವೇದಿತಾ ಗೌಡ ಅವರು ಇದೇ ಮೊದಲ ಬಾರಿಗೆ ತಮ್ಮ ಎರಡನೇ ಮದುವೆ ಕುರಿತು ಮಾತನಾಡಿದ್ದಾರೆ. ಮದುವೆ ಎಂದರೆ ಭಯ ಆಗುತ್ತಿದೆ ಎಂದು ಹೇಳಿದ್ದಾರೆ.
ನಟಿ ನಿವೇದಿತಾ ಗೌಡ ಅವರು, ಈಗ ಮದುವೆ ಎಂದರೆ ಭಯ ಆಗುತ್ತಿದೆ. ಮನೆಯಲ್ಲಿ ನನ್ನ ಮೇಲೆ ಏನು ಒತ್ತಡ ಹಾಕುತ್ತಿಲ್ಲ. ಎರಡನೇ ಮದುವೆ ಆಗಬೇಕು ಅನಿಸಿದಾಗ ಆಗುತ್ತೇನೆ. ಆದರೂ ಮದುವೆ ಎಂದರೆ ಭಯ ಇದೆ. ನನಗೆ ಸರಿ ಅನಿಸಿದ ಹುಡುಗ ಸಿಗುವ ತನಕ ಮದುವೆ ಆಗಲ್ಲ. ಒಳ್ಳೆಯ ಹುಡುಗ ಸಿಕ್ಕರೇ ಖಂಡಿತ ಮದುವೆ ಆಗುತ್ತೇನೆ ಎಂದು ಹೇಳಿದ್ದಾರೆ.
ಒಳ್ಳೆಯ ಹುಡುಗ ಆಗಿರಬೇಕು, ನನಗೆ ಅವರು ಗೌರವ ಕೊಟ್ಟರೆ, ನಾನು ಅವರಿಗೆ ಗೌರವ ಕೊಡಬೇಕು. ಅಂದರೆ ಪರಸ್ಪರ ಗೌರವ ಕೊಡುವಂತಹ ಹುಡುಗ ಬೇಕು. ಜೀವನ ಖುಷಿಯಾಗಿ ಇರಬೇಕು. ಅಂತಹ ಟೈಂ ಬಂದಾಗ ಮದುವೆ ಆಗುತ್ತೇನೆ. ಆದರೆ ಈಗ ಸಿನಿಮಾ ಕಡೆಗೆ ಮಾತ್ರ ನನ್ನ ಗಮನ ಹರಿಸುತ್ತೇನೆ. ಚಂದನ್ ಶೆಟ್ಟಿ ಜೊತೆ ಸಂಪರ್ಕ ಇಲ್ಲ. ಯಾವುದು ಮಾತುಕತೆಗಳು ಕೂಡ ಇಲ್ಲ ಎಂದು ನಿವೇದಿತಾ ಹೇಳಿದ್ದಾರೆ.