Newsics_Kannada
Subscribe and watch video
ನ್ಯೂಸಿಕ್ಸ್ ಕನ್ನಡ
ಬನ್ನಿ ನಮ್ ಸಂಗಡ
newsics.com
ಬೆಂಗಳೂರು: ಕನ್ನಡದ ಸ್ಟಾರ್ ನಟ ಕಿಚ್ಚ ಸುದೀಪ್ ದಕ್ಷಿಣ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಅಥವಾ ʼಸೈಮಾʼದ ಪೋಸ್ಟ್‌ಗೆ ತಮಾಷೆಯಾಗಿ ಟೀಕಿಸಿದ್ದಾರೆ. ನೀವೇನಾದರೂ ಅತ್ಯುತ್ತಮ ಸುಳ್ಳು ಸುದ್ದಿ ಪ್ರಶಸ್ತಿಯನ್ನು ಪರಿಚಯುಸುತ್ತಿದ್ದೀರಾ ಎಂದು ಕೇಳಿ ಸೈಮಾಗೆ ತಿರುಗೇಟು ನೀಡಿದ್ದಾರೆ.
ಸೈಮಾ ಟ್ವಿಟರ್ ಖಾತೆಯಲ್ಲಿ, ಕಿಚ್ಚ ಸುದೀಪ್ ಹಾಗೂ ಉಪೇಂದ್ರ ಅವರ ಫೋಟೋ ಹಾಕಿ ಒಂದು ಪೋಸ್ಟ್ ಶೇರ್ ಮಾಡಿತ್ತು. ಈಗ ಆ ಟ್ವೀಟ್ ಡಿಲೀಟ್ ಮಾಡಲಾಗಿದೆ. ಇತ್ತೀಚಿನ ವರದಿಗಳ ಪ್ರಕಾರ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಅವರು ಸಿಂಬು ಅವರ ಬಹುನಿರೀಕ್ಷಿತ ಸಿನಿಮಾ ಅರಸನ್ನಲ್ಲಿ ವಿಲನ್ ಪಾತ್ರಗಳನ್ನು ಮಾಡಲಿದ್ದಾರೆ. ಇಬ್ಬರಲ್ಲಿ ಒಬ್ಬರು ವಿಲನ್ ಆಗಿ ನಟಿಸಲಿದ್ದಾರೆ ಎಂದು ಸೈಮಾ ಟ್ವೀಟ್ ಮಾಡಿತ್ತು.
ನಿಮ್ಮ ಅವಾರ್ಡ್ಸ್ ಸಂಜೆಯಲ್ಲಿ ನೀವು ಮಾಡುತ್ತಿರುವುದಕ್ಕೆ ದೊಡ್ಡ ಗೌರವ. ಈ ಎಲ್ಲ ನ್ಯೂಸ್ಗೆ ಸಂಬಂಧಿಸಿ ನನಗೆ ಒಂದು ಸಲಹೆ ಇದೆ. ಗುಟ್ಟಾಗಿ ಹೇಳ್ತೀನಿ, ನಿಮ್ಮ ಸುದ್ದಿ ಮೂಲಗಳನ್ನು ಬದಲಾಯಿಸಿ.
ಮುಂದಿನ ಸೈಮಾ ಆವಾರ್ಡ್ನಲ್ಲಿ ಬೆಸ್ಟ್ ಫೇಕ್ ನ್ಯೂಸ್ ಅವಾರ್ಡ್ ಇದೆಯಾ ಎಂದು ತಿಳಿಯಬೇಕಿದೆ ಎಂದು ಬರೆದು ನಗುವ ಎಮೋಜಿ ಹಾಕಿದ್ದಾರೆ.