Newsics_Kannada
Subscribe and watch video
ನ್ಯೂಸಿಕ್ಸ್ ಕನ್ನಡ
ಬನ್ನಿ ನಮ್ ಸಂಗಡ
newsics.com
ಧರ್ಮಸ್ಥಳ ಕೇಸ್ ತನಿಖೆಯ ನಡುವೆಯೇ ಅನನ್ಯಾ ಭಟ್ ಕೇಸ್ ಕೂಡ ಸದ್ದು ಮಾಡಿತ್ತು. ಎಸ್ಐಟಿ ಟೀಮ್ ಸುಜಾತಾ ಹಿಸ್ಟರಿಯನ್ನ ಜಾಲಾಡ್ತಿದ್ದಂತೆ ಮಾಧ್ಯಮಗಳ ಮುಂದೆ ಬಂದ ಸುಜಾತಾ ನಾನು ಹೇಳಿದ್ದೆಲ್ಲಾ ಕಟ್ಟು ಕಥೆ ಅಂತ ಕಣ್ಣೀರಿಟ್ರು. ಈಗ ಕ್ಷಮೆ ಕೇಳುವ ಬಗ್ಗೆ ಮಾತಾಡ್ತಿದ್ದಾರೆ.
ಧರ್ಮಾಧಿಕಾರಿ ವೀರೇಂದ್ರ ಹೆಗ್ಡೆ ಅವರ ಬಳಿ ಕ್ಷಮೆ ಕೇಳುವೆ ಎಂದು ಸುಜಾತಾ ಭಟ್ ಹೇಳಿದ್ದಾರೆ. ಅವ್ರ ನನ್ನನ್ನು ಕ್ಷಮಿಸ್ತಾರೆ ಎಂಬ ಭರವಸೆ ಇದೆ. ಧರ್ಮಸ್ಥಳಕ್ಕೆ ಕಲ್ಲು ಎಸೆಯುತ್ತೇನೆ ಎಂದಿದ್ದೆ. ಹಾಗೆ ಹೇಳ್ಬಾರ್ದಿತ್ತು ಎಂದು ಸುಜಾತಾ ಭಟ್ ಕಣ್ಣೀರು ಹಾಕುತ್ತಾ ಕ್ಷಮೆ ಕೇಳಿದ್ದಾರೆ.
ಆ ಒಂದು ಗಿಲ್ಟ್ ನನ್ನನ್ನು ಕಾಡ್ತಿದೆ. ಮಗಳು ಅಂತ ಕಥೆ ಕಟ್ಟಿದೆ. ಸುಳ್ಳಿನ ಮೇಲೆ ಸುಳ್ಳನ್ನೇ ಸೃಷ್ಠಿಸಿದೆ. ಶಿವಶಂಕರ್ ಎಂಬುವರು ಹೇಳಿದ್ರು. ನನ್ನದು ಸ್ವಲ್ಪ ಜಮೀನಿನ ವಿಚಾರವಿತ್ತು. ಹೀಗಾಗಿ ನಾನು ತಪ್ಪು ಮಾಡ್ಬಿಟ್ಟೆ. ಬುರುಡೆ ಗ್ಯಾಂಗ್ಗೂ, ನನಗೂ ಸಂಬಂಧವಿಲ್ಲ. ಅವ್ರ ಮಾತು ಕೇಳಿಯೇ ನಾನು ಕೆಟ್ಟೆ. ಇನ್ನು ನನ್ನ ಮನೆ ಬಾಗಿಲಿಗೆ ಅವ್ರು ಬಂದ್ರೂ ನಾನು ಒಳಗೆ ಬಿಡಲ್ಲ ಎಂದು ಸುಜಾತಾ ಭಟ್ ಹೇಳಿದ್ದಾರೆ.