newsics.com
ಕನ್ನಡದ ಬಹುಮುಖ್ಯ ಲೇಖಕರಲ್ಲಿ ಒಬ್ಬರಾದ ಹಿರಿಯ ಸಾಹಿತಿ, ಚಿಂತಕ ಡಾ. ಮೊಗಳ್ಳಿ ಗಣೇಶ್ (Dr. Mogalli Ganesh) ಭಾನುವಾರ ಕೊನೆಯುಸಿರೆಳೆದರು.
ಅವರಿಗೆ 62 ವರ್ಷ ವಯಸ್ಸಾಗಿತ್ತು. ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಅಸ್ವಸ್ಥರಾಗಿದ್ದರು. ಅವರು ಕಥೆಗಾರ, ಕಾದಂಬರಿಕಾರ, ಪ್ರಬಂಧಕಾರ, ವೈಚಾರಿಕ ವಿಮರ್ಶಕರಾಗಿ ಗುರುತಿಸಿಕೊಂಡಿದ್ದರು. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಜಾನಪದ ವಿಭಾಗದ ಮುಖ್ಯಸ್ಥರಾಗಿಯೂ ಕಾರ್ಯನಿರ್ವಹಿಸಿದ್ದರು.
ಸೂರ್ಯನನ್ನು ಬಚ್ಚಿಡಬಹುದೆ ಕವನ ಸಂಕಲನ, ಬುಗುರಿ, ಭೂಮಿ, ದೇವರದಾರಿ ಕಥಾ ಸಂಕಲನಗಳು, ತೊಟ್ಟಿಲು ಕಾದಂಬರಿ, ಕಥನ ಪ್ರಬಂಧ ಸಂಕಲನ, ಸೊಲ್ಲು ಸಾಂಸ್ಕೃತಿಕ ವಿಮರ್ಶೆ ಮೊದಲಾದವು ಗಣೇಶ್ ಅವರ ಪ್ರಮುಖ ಕೃತಿಗಳು.
ಬೆಂಗಳೂರು ದಕ್ಷಿಣ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಸಂತೆಮೊಗೇನಹಳ್ಳಿಯಲ್ಲಿ 1963ರ ಜುಲೈ 1 ರಂದು ಜನಿಸಿದ ಗಣೇಶ್ ಅವರು ಮೈಸೂರು ಮಹಾರಾಜ ಕಾಲೇಜಿನಲ್ಲಿ ಅರ್ಥಶಾಸ್ತ್ರ ಪದವಿ ಪಡೆದಿದ್ದರು. ಅತ್ಯುತ್ತಮ ಸಣ್ಣ ಕಥೆಗಾರರಾಗಿ ಗುರುತಿಸಿಕೊಂಡಿದ್ದರು.
ಕನ್ನಡ ಕಥನ ಪರಂಪರೆಗೆ ಹೊಸತನ ನೀಡಿದ್ದ ಮೊಗಳ್ಳಿ ಗಣೇಶ್ ಅವರ ಆದಿಮ ಎಂಬ ಸಂಶೋಧನಾ ಕೃತಿಗೆ ಡಾಕ್ಟರೇಟ್ ನೀಡಿ ಗೌರವಿಸಲಾಗಿತ್ತು. ಅವರ ದೇವರ ದಾರಿ ಕೃತಿ ಡಾ. ಪಂಚಾಕ್ಷರ ಗವಾಯಿ ಪ್ರಶಸ್ತಿಗೆ ಭಾಜನವಾಗಿದೆ.
ರಾಜ್ಯದಲ್ಲಿ ಮತ್ತೆ ಪವರ್ ಶೇರಿಂಗ್ ವಿಚಾರ ಸದ್ದು – ದಿಢೀರ್ ಡೆಲ್ಲಿಗೆ ಹಾರಿದ ಡಿಸಿಎಂ ಡಿಕೆ ಶಿವಕುಮಾರ್!