Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > Cleaning Hacks: ಈ ಹಣ್ಣು ಒಂದಿದ್ರೆ ಸಾಕು ಅಡುಗೆಮನೆ ಪಳಪಳ ಹೊಳೆಯುತ್ತೆ
ಲೈಫ್‌ಸ್ಟೈಲ್

Cleaning Hacks: ಈ ಹಣ್ಣು ಒಂದಿದ್ರೆ ಸಾಕು ಅಡುಗೆಮನೆ ಪಳಪಳ ಹೊಳೆಯುತ್ತೆ

Share
2 Min Read
SHARE

Newsics_Kannada
Subscribe and watch video
ನ್ಯೂಸಿಕ್ಸ್ ಕನ್ನಡ
ಬನ್ನಿ ನಮ್ ಸಂಗಡ
newsics.com

ಆಹಾರ ಖಾದ್ಯಗಳಿಗೆ ಹುಳಿ ರುಚಿ ನೀಡುವ ನಿಂಬೆಹಣ್ಣು ಅಡುಗೆಯ ಘಮವನ್ನೂ ಹೆಚ್ಚಿಸುತ್ತದೆ. ನಿಂಬೆಹಣ್ಣಿನಿಂದ ಅಡುಗೆಮನೆಯನ್ನು ಪಳ ಪಳ ಹೊಳೆಯುವಂತೆ ಮಾಡಬಹುದು. ಇದು ಅಡುಗೆಮನೆ ಸ್ವಚ್ಛ ಮಾಡಲು ಇರುವ ಪರಿಣಾಮಕಾರಿ ವಿಧಾನ. ನಿಂಬೆಹಣ್ಣಿನ ಬಳಕೆಯಿಂದ ಅಡುಗೆಮನೆಯನ್ನು ಹೊಳೆಯುವಂತೆ ಹಾಗೂ ತಾಜಾವಾಗಿ ಇರುವಂತೆ ಮಾಡಬಹುದು. ನಿಂಬೆರಸವು ಅಡುಗೆಮನೆಯಲ್ಲಿರುವ ಮೊಂಡುತನ ಕಲೆಯನ್ನು ನಿವಾರಿಸುತ್ತದೆ. ಅಹಿತಕರ ವಾಸನೆಯನ್ನು ಇದರಿಂದ ತೊಡೆದು ಹಾಕಬಹುದು. ಲೋಹದ ವಸ್ತುಗಳಿಗೆ ಇದು ಹೊಳಪು ನೀಡುತ್ತದೆ. ಒಟ್ಟಾರೆ ಅಡುಗೆಮನೆಯ ಸ್ವಚ್ಛವಾಗಿಸಲು ನಿಂಬೆಹಣ್ಣನ್ನು ಹೇಗೆಲ್ಲಾ ಬಳಸಬಹುದು ನೋಡಿ.

 

ಅಡುಗೆ ಮಾಡುವಾಗ ನಿರಂತರವಾಗಿ ಸ್ಟೀಲ್ ಪಾತ್ರೆಗಳನ್ನು ಬಳಸುವುದರಿಂದ ಇದರ ನೈಸರ್ಗಿಕ ಹೊಳಪು ಕಳೆದು ಹೋಗಬಹುದು. ಆದರೆ ಪಾತ್ರೆ ತೊಳೆಯುವಾಗ ಒಂದೆರಡು ಹನಿ ನಿಂಬೆರಸವನ್ನು ಬಳಸುವುದರಿಂದ ಸ್ಟೀಲ್‌ ಪಾತ್ರೆಯ ಹೊಳಪು ಮರಳುತ್ತದೆ.

ನಿತ್ಯ ಅಡುಗೆ ಮಾಡುವುದರಿಂದ ಸ್ಟೌವ್ ಮೇಲೆ ಎಣ್ಣೆ ಹಾಗೂ ಜಿಡ್ಡಿನ ಅಂಶ ಶೇಖರಣೆಯಾಗುವುದು ಸಹಜ. ಕೆಲವೊಮ್ಮೆ ಇದನ್ನು ಸ್ವಚ್ಛ ಮಾಡುವುದು ಹರಸಾಹಸ ಎನ್ನಿಸಿಕೊಳ್ಳುತ್ತದೆ. ಅಂತಹ ಸಂದರ್ಭದಲ್ಲಿ ನಿಂಬೆರಸದಿಂದ ಇಂತಹ ಮೊಂಡುಕಲೆಗಳನ್ನು ಸುಲಭವಾಗಿ ತೆಗೆದುಹಾಕಬಹುದು

ಬಾರಾಕ್ಸ್ ಪುಡಿಯನ್ನು ನಿಂಬೆರಸದ ಜೊತೆ ಬೆರೆಸಿ, ಇದನ್ನು ಅಡುಗೆ ಮನೆಯ ಗೋಡೆ, ನೆಲ, ರ್ಯಾಕ್ಸ್‌ ಮೇಲೆ ಚೆನ್ನಾಗಿ ಉಜ್ಜಿ. ಈ ಪೇಸ್ಟ್ ಮೂಲೆ ಮೂಲೆಯಲ್ಲಿರುವ ಕಲೆಗಳನ್ನು ನಿವಾರಿಸಲು ಕೂಡ ಪರಿಣಾಮಕಾರಿ. ಟೈಲ್ಸ್ ಮೇಲೆ ಜಿಡ್ಡು ಹಿಡಿದಂತಾಗಿದ್ದರೆ ಬೋರಾಕ್ ಪುಡಿ ಹಾಗೂ ನಿಂಬೆರಸ ಮಿಶ್ರಣ ಪೇಸ್ಟ್ ಅನ್ನು ಚೆನ್ನಾಗಿ ಉಜ್ಜಿ. ಇದರಿಂದ ಅಡುಗೆಮನೆಯ ಅಂದ ಬದಲಾಗುತ್ತದೆ.

ಪ್ರತಿದಿನ ಅಡುಗೆ ಮಾಡುವಾಗ ತರಕಾರಿ ಹೆಚ್ಚುವ ಬೋರ್ಡ್‌ ಬಳಕೆ ಸಾಮಾನ್ಯ. ನಿರಂತರ ಬಳಕೆಯಿಂದ ಈ ಬೋರ್ಡ್ ಮೇಲೆ ಜಿಡ್ಡುಗಟ್ಟಿದಂತೆ ಕಲೆಯಾಗಿರುತ್ತದೆ. ಇದನ್ನು ಸ್ವಚ್ಛ ಮಾಡಲು ನೀವು ನಿಂಬೆ ರಸ ಬಳಸಬಹುದು. ನಿಂಬೆಹಣ್ಣು ಕತ್ತರಿಸಿ, ಅದರ ರಸವನ್ನು ಚಾಪಿಂಗ್ ಬೋರ್ಡ್ ಅನ್ನು ಹಚ್ಚಿ, ನಂತರ ನಿಂಬೆ ತುಂಡಿನಿಂದ ಚೆನ್ನಾಗಿ ಉಜ್ಜಿ. ಕೆಲವು ನಿಮಿಷಗಳ ಕಾಲ ಹಾಗೇ ಬಿಡಿ. ನಿಂಬೆಹಣ್ಣಿನಲ್ಲಿರುವ ನೈಸರ್ಗಿಕ ಆಮ್ಲೀಯ ಗುಣವು ಕಲೆಗಳನ್ನು ತೆಗೆದುಹಾಕಿ ವಾಸನೆಯನ್ನು ಹೋಗಲಾಡಿಸುತ್ತದೆ. ಸ್ವಲ್ಪ ಹೊತ್ತಿನ ನಂತರ ನೀವು ತರಕಾರಿ ಹೆಚ್ಚುವ ಬೋರ್ಡ್ ಅನ್ನು ಬ್ರಷ್‌ ಹಾಗೂ ನೀರಿನಿಂದ ಚೆನ್ನಾಗಿ ಉಜ್ಜಿ ತೊಳೆಯಿರಿ. ಇದರಿಂದ ತರಕಾರಿ ಹೆಚ್ಚುವ ಬೋರ್ಡ್ ಹೊಸರಂತಾಗುತ್ತದೆ.

TAGGED:#Cleaning #Hacks #kitchen #lemon #lifestyle
Share This Article
Facebook Twitter Copy Link Print
Previous Article Rain Alert ರಾಜ್ಯದಲ್ಲಿ ಅಕ್ಟೋಬರ್ 5ರವರೆಗೆ ಭಾರೀ ಮಳೆಯ ಮುನ್ಸೂಚನೆ
Next Article ಗಿಲ್ಲಿ ನಟ ಆಯ್ತು..ಈಗ ಧನುಷ್‌ ಜೊತೆ ಕೂಗಾಡಿದ ಹೋರಾಟಗಾರ್ತಿ; ಜಗಳ ಮಾಡೋಕೆ ಅಂತಲೇ ಬಿಗ್‌ಬಾಸ್‌ ಮನೆಗೆ ಬಂದಂತಿದೆ ಅಶ್ವಿನಿ ಗೌಡ!

Popular Posts

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read

You Might Also Like

ಪ್ರಮುಖಆರೋಗ್ಯ

40 ವರ್ಷಕ್ಕಿಂತ ಮೊದಲೇ ಮುಟ್ಟು ನಿಂತ್ರೆ ಈ ಅಪಾಯ ಹೆಚ್ಚು

2 Min Read
ಕರ್ನಾಟಕಆರೋಗ್ಯದೇಶಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

Personal Health ಕಡಿಮೆ, ಕಳಪೆ ನಿದ್ದೆಯಿಂದ ಬೇಗ ಮುದುಕರಾಗ್ತೀರಿ! ಲೈಂಗಿಕತೆ ಮೇಲೆ ನೇರ ಪರಿಣಾಮ, ಮಕ್ಕಳಾಗದಿರಬಹುದು

3 Min Read
ದೇಶಆರೋಗ್ಯಪ್ರಮುಖಲೈಫ್‌ಸ್ಟೈಲ್

Mental health ಮಾನಸಿಕ ಆರೋಗ್ಯ ಹದಗೆಡಿಸುತ್ತಿದೆಯಾ ವರ್ಕ್ ಫ್ರಂ ಹೋಮ್? ಹೊಸ ಅಧ್ಯಯನ ಹೇಳ್ತಿರೋದೇನು?

2 Min Read
ಪ್ರಮುಖಲೈಫ್‌ಸ್ಟೈಲ್

Numerology ನಿಮ್ಮ ಮೊಬೈಲ್ ನಂಬರ್​​ನ ಕೊನೆಯ ಎರಡು ಸಂಖ್ಯೆ ಯಾವುದಿರಬೇಕು?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?