Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಭಾರತದಲ್ಲಿ ಕೇವಲ ವಿಜಯದಶಮಿ ದಿನ ಮಾತ್ರ ರಾವಣ ದರ್ಶನವಾಗುತ್ತೆ; ಎಲ್ಲಿ?
ದೇಶಪ್ರಮುಖ

ಭಾರತದಲ್ಲಿ ಕೇವಲ ವಿಜಯದಶಮಿ ದಿನ ಮಾತ್ರ ರಾವಣ ದರ್ಶನವಾಗುತ್ತೆ; ಎಲ್ಲಿ?

Share
1 Min Read
SHARE

Subscribe NewsicsKannada/YouTube

newsics.com

ಭಾರತದ ಈ ಗ್ರಾಮದಲ್ಲಿ ರಾವಣನಿಗೆ ದೇಗುಲವಿದೆ. ಇಲ್ಲಿ ರಾವಣನ ಪ್ರತಿಕೃತಿ ದಹನ ಆಚರಣೆ ಇಲ್ಲ. ಈ ದೇವಸ್ಥಾನದಲ್ಲಿ ರಾವಣನ ಪೂಜೆ ನಡೆಯುತ್ತಿದೆ. ಮತ್ತೊಂದು ವಿಶೇಷ ಅಂದರೆ ವರ್ಷದಲ್ಲಿ ಕೇವಲ ವಿಜಯದಶಮಿ ದಿನ ಮಾತ್ರ ಈ ದೇಗುಲ ತೆರೆಯಲಾಗುತ್ತದೆ.

ಈ ದೇಗುಲ ಉತ್ತರ ಪ್ರದೇಶದ ಕಾನ್ಪುರದ ಶಿವಾಲದಲ್ಲಿದೆ. ಶಿವಾಲದಲ್ಲಿರುವ ರಾವಣ ಮಂದಿರ ವರ್ಷದಲ್ಲಿ ಒಂದು ದಿನ ಮಾತ್ರ ತೆರೆಯಲಿದೆ. ಇಡೀ ದೇಶವೇ ರಾವಣನ ಪ್ರತಿಕೃತಿ ದಹಿಸಿ ವಿಜಯದಶಮಿ ಹಬ್ಬ ಆಚರಿಸುತ್ತಿದ್ದರೆ, ಈ ದೇಗುಲದಲ್ಲಿ ರಾವಣನ ಪೂಜೆ ನಡೆಯಲಿದೆ. ವಿಜಯದಶಮಿ ದಿನ ಬೆಳಗ್ಗೆ 6.30 ರಿಂದ ರಾತ್ರಿ 8.30ರವರೆಗೆ ಈ ದೇಗುಲ ತೆರೆಯುತ್ತದೆ. ಈ ವೇಳೆ ರಾವಣನ ದರ್ಶನ ಸಿಗಲಿದೆ. 8.30ರ ಸುಮಾರಿಗೆ ದೇಶದೆಲ್ಲೆಡೆ ರಾವಣನ ಪ್ರತಿಕೃತಿ ದಹಿಸಿ ವಿಜಯದಶಮಿ ಹಬ್ಬ ಆಚರಿಸಲಾಗುತ್ತದೆ. ಇ ವೇಳೆ ಈ ರಾವಣನ ಮಂದಿರದ ಬಾಗಿಲು ಮುಚ್ಚಲಾಗುತ್ತದೆ.

ದೀಪ ಹಚ್ಚಿ ಹೀರೆಕಾಯಿ ಅರ್ಪಣೆ
ವಿಜಯದಶಮಿ ದಿನ ಮಹಿಳೆಯರು ರಾವಣ ದೇಗುಲಕ್ಕೆ ತೆರಳಿ ಸಾಸಿವೆ ಎಣ್ಣೆಯಲ್ಲಿ ದೀಪ ಹಚ್ಚುತ್ತಾರೆ. ಬಳಿಕ ಹೀರೆಕಾಯಿಯನ್ನು ಕಾಣಿಕೆಯಾಗಿ ಅರ್ಪಿಸುತ್ತಾರೆ. ಬೆಳಗ್ಗೆ ರಾವಣನ ಹುಟ್ಟುಹಬ್ಬವನ್ನು ಆಚರಿಸುತ್ತಾರೆ. ಸಂಜೆ ಇದೇ ಗ್ರಾಮದ ಅಕ್ಕ ಪಕ್ಕ ರಾವಣ ದಹನ ಮಾಡಿ ವಿಜಯದಶಮಿ ಆಚರಿಸುತ್ತಾರೆ. ವಿಜಯ ದಶಮಿ ದಿನ ಸಾವಿರಕ್ಕೂ ಹೆಚ್ಚು ಭಕ್ತರು ಈ ದೇಗುಲಕ್ಕೆ ಭೇಟಿ ನೀಡುತ್ತಾರೆ. ರಾವಣನನ್ನು ಗ್ರಾಮ ದೇವರಾಗಿ ಪೂಜಿಸುತ್ತಾರೆ ಎಂದು ಸ್ಥಳೀಯರು ಹೇಳುತ್ತಾರೆ.
ಈ ಗ್ರಾಮದ ಜನರಿಗೆ ರಾವಣನ ಶಕ್ತಿ ಹಾಗೂ ಸಾಮರ್ಥ್ಯದ ಬಗ್ಗೆ ಗೌರವವಿದೆ. ಆದರೆ ರಾವಣ ತನ್ನ ಶಕ್ತಿ ಸಾಮರ್ಥ್ಯವನ್ನು ದುರುಪಯೋಗ ಪಡಿಸಿಕೊಂಡ ಕಾರಣ ಶ್ರೀರಾಮನ ಜೊತೆಗಿನ ಯುದ್ಧದಲ್ಲಿ ಸೋಲು ಅನುಭವಿಸಬೇಕಾಯಿತು. ಸತ್ಯ,ನ್ಯಾಯದ ಮಾರ್ಗದಲ್ಲಿ ನಡೆದ ಶ್ರೀರಾಮ, ಸೀತಾ ದೇವಿಯನ್ನು ಮರಳಿ ಕರೆತಂದ ಸುದಿನ ಎಂದು ಗ್ರಾಮಸ್ಥರು ಪುರಾಣ ಕತೆಯನ್ನು ಬಿಚ್ಚಿಡುತ್ತಾರೆ.

ಭಾರತದಲ್ಲಿ ರಾವಣನಿಗೆ ಇದೊಂದೇ ದೇವಸ್ಥಾನವಲ್ಲ. ಹಲವೆಡೆ ರಾವಣನ ದೇವಸ್ಥಾನಗಳಿವೆ. ಆದರೆ ಶಿವಾಲದ ರಾವಣನ ದೇಗಲು ವರ್ಷದಲ್ಲಿ ಒಂದೇ ದಿನ ತೆರೆಯುವ ಕಾರಣ ವಿಶೇಷವಾಗಿದೆ.

2 ವರ್ಷದ ಮಗು ಈಗ ನೇಪಾಳಕ್ಕೆ ಜೀವಂತ ದೇವಿ!

TAGGED:In IndiaRavana is seen only on Vijayadashami.
Share This Article
Facebook Twitter Copy Link Print
Previous Article 2 ವರ್ಷದ ಮಗು ಈಗ ನೇಪಾಳಕ್ಕೆ ಜೀವಂತ ದೇವಿ!
Next Article ಕಾಂತಾರ: ಚಾಪ್ಟರ್ 1′ ಸಿನಿಮಾ ನೋಡಿದ ಬಳಿಕ ದೈವ ಬಂದಂತೆ ಆಡಿದ ಪ್ರೇಕ್ಷಕ

Popular Posts

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

You Might Also Like

ಕರ್ನಾಟಕಪ್ರಮುಖ

Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!

2 Min Read
ಕರ್ನಾಟಕಪ್ರಮುಖ

Heart attack ಹೃದಯಾಘಾತದಿಂದ ಶಾಲೆಯಲ್ಲೇ ಉಸಿರು ಚೆಲ್ಲಿದ ಒಂದನೇ ತರಗತಿ ಬಾಲಕ!

2 Min Read
ದೇಶಪ್ರಮುಖ

ಎಥೆನಾಲ್‌ ಬಳಕೆಗೆ ಕೇಂದ್ರ ಅನುಮೋದನೆ, ಇನ್ಮುಂದೆ ಪೆಟ್ರೋಲ್ ಸಿಗಲ್ವಾ?

1 Min Read
ಪ್ರಮುಖಲೈಫ್‌ಸ್ಟೈಲ್

Kitchen Tips 5 ಆಹಾರಗಳನ್ನು ಎಂದಿಗೂ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬೇಡಿ; ಬೇಯಿಸಿದರೆ ಕಷ್ಟವೋ ಕಷ್ಟ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?