Newsics_ಕನ್ನಡ
Subscribe and watch video
ನ್ಯೂಸಿಕ್ಸ್ ಕನ್ನಡ
ಬನ್ನಿ ನಮ್ ಸಂಗಡ
newsics.com
ಟಿವಿಕೆ ಸಂಸ್ಥಾಪಕ ನಟ ವಿಜಯ್ ಅವರ ಕರೂರ ಱಲಿಯಲ್ಲಿ ನಡೆಸ ಕಾಲ್ತುಳಿತ ದುರಂತ ತಮಿಳುನಾಡು ರಾಜಕೀಯದಲ್ಲಿ ದೊಡ್ಡ ತಲ್ಲಣವನ್ನೇ ಸೃಷ್ಟಿಸಿದೆ.ಶನಿವಾರ ನಡೆಸಿದ ರ‍್ಯಾಲಿಯಲ್ಲಿ 39 ಮಂದಿ ಸಾವನ್ನಪ್ಪಿದ್ದಾರೆ.
ನಟ ವಿಜಯ್ ನೋಡಲು ರಾಜ್ಯದ ಮೂಲೆ ಮೂಲೆಗಳಿಂದ ಬಂದ ಅಭಿಮಾನಿಗಳು ಜನರ ನಡುವೆ ಸಿಲುಕಿ ಪ್ರಾಣ ಬಿಟ್ಟಿದ್ದಾರೆ. ಬಸ್ನ ವೇದಿಕೆ ಮೇಲೆ ವಿಜಯ್ ಅಬ್ಬರದ ಭಾಷಣ ಮಾಡ್ತಿದ್ರು. ಇತ್ತ ಪಕ್ಕದಲ್ಲೇ ಜನರು ಉಸಿರುಗಟ್ಟಿ ಸತ್ತಿದ್ದಾರೆ. ಈ ಶಾಕಿಂಗ್ ವಿಡಿಯೋ ರಿಲೀಸ್ ಆಗಿದೆ.
ಕರೂರ್ ಘಟನೆಗೆ ಸಂಬಂಧಿಸಿದಂತೆ ಆಘಾತಕಾರಿ ವಿಡಿಯೋಗಳು ಬಿಡುಗಡೆಯಾಗುತ್ತಿವೆ. ಒಂದು ವಿಡಿಯೋದಲ್ಲಿ, ವಿಜಯ್ ತಮ್ಮ ವಾಹನದಲ್ಲಿ ನಿಂತು ಮಾತಾಡುತ್ತಿದ್ದು, ಪಕ್ಕದಲ್ಲೇ ಜನರು ಮಾತನಾಡಲು ಆಗದೇ, ಉಸಿರಾಡಲು ಸಾಧ್ಯವಾಗದೆ ಅವರ ವಾಹನದ ಬಳಿಯೇ ನೆಲಕ್ಕೆ ಬಿದ್ದು ಪ್ರಾಣಕಳೆದುಕೊಂಡಿದ್ದಾರೆ.
ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ಕರೂರ್ ನಗರ ಪೊಲೀಸ್ ಠಾಣೆ ನಾಲ್ಕು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದೆ ಎಂದು ತಿಳಿದು ಬಂದಿದೆ. ತಾವೇಕಾ ಕರೂರ್ ಪಶ್ಚಿಮ ಜಿಲ್ಲಾ ಕಾರ್ಯದರ್ಶಿ ವಿ.ಪಿ. ಮಥಿಯಜಗನ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.