Newsics_Kannada
Subscribe and watch video
ನ್ಯೂಸಿಕ್ಸ್ ಕನ್ನಡ
ಬನ್ನಿ ನಮ್ ಸಂಗಡ
newsics.com
ಬಿಗ್‌ಬಾಸ್ ಕನ್ನಡ ಸೀಸನ್ 12 ಆರಂಭಕ್ಕೆ ಒಂದೇ ದಿನ ಬಾಕಿ ಇದೆ. ಸೆಪ್ಟೆಂಬರ್ 28ರಂದು ಭಾನುವಾರ ಸಂಜೆ ಬಿಗ್‌ಬಾಸ್‌ನ ಗ್ರ್ಯಾಂಡ್ ಓಪನಿಂಗ್‌ಗೆ ವೇದಿಕೆ ಸಜ್ಜಾಗಿದೆ. ಯಾರು ಈ ಸೀಸನ್‌ನ ಸ್ಪರ್ಧಿಗಳು ಎಂಬ ಕುತೂಹಲಕ್ಕೆ ಭಾನುವಾರವೇ ತೆರೆ ಬೀಳಲಿದೆ. ಬಿಗ್‌ಬಾಸ್ ಮನೆಯಲ್ಲಿ ಯಾರೆಲ್ಲ ಕಾಣಿಸಿಕೊಳ್ಳಲಿದ್ದಾರೆ ಎಂಬ ಕಾತುರ ಪ್ರೇಕ್ಷಕರಲ್ಲಿ ಮನೆ ಮಾಡಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಸೀಸನ್ ಬಿಗ್‌ಬಾಸ್ ಸ್ಪರ್ಧಿಗಳ ಹೊಸ ಲಿಸ್ಟ್ ಲೀಕ್ ಆಗಿದ್ದು, ಇವರೇ ಕನ್ಫರ್ಮ್ ಸ್ಪರ್ಧಿಗಳು ಎಂದು ಹೇಳಲಾಗುತ್ತಿದೆ.
ಕಲರ್ಸ್ ಕನ್ನಡ ಚಾನಲ್ ಬಿಗ್ ಬಾಸ್ ನ ಸೆಟ್ ವಿಡಿಯೋ ಬಿಡುಗಡೆ ಮಾಡಿದೆ.
ಕರುನಾಡನ್ನು ಬಿಂಬಿಸುವ ಬಿಗ್ ಬಾಸ್ ಅರಮನೆಗೆ ಅಧಿಪತಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಂತ ಟೈಟಲ್ ಕೊಟ್ಟು ವಿಡಿಯೋ ಒಂದು ಅನ್ನು ಕಲರ್ಸ್ ಕನ್ನಡ ಇನ್ಸಾಟಾಗ್ರಾಮ್ ಸೇರಿದಂತೆ ಸೋಷಿಯಲ್ ಮೀಡಿಯಾಗಳಲ್ಲಿ ಬಿಡುಗಡೆ ಮಾಡಿದೆ.
ಈ ಭಾರಿಯ ಬಿಗ್ ಬಾಸ್ ಸೆಟ್ ಅನ್ನು ಮೈಸೂರು ಅರಮನೆಯ ಥೀಮ್ ನಲ್ಲಿ ನಿರ್ಮಾಣ ಮಾಡಿರುವುದು ವಿಶೇಷ. ಮೈಸೂರು ದಸರಾ ನಡೆಯುವಾಗ ಬಿಗ್ ಬಾಸ್ ಷೋ ಆರಂಭವಾಗುತ್ತಿರುವುದಕ್ಕೋ ಏನೋ ಮೈಸೂರು ಅರಮನೆಯ ಥೀಮ್ ನಲ್ಲೇ ಸೆಟ್ ನಿರ್ಮಾಣ ಮಾಡಲಾಗಿದೆ.
ನಮ್ಮ ಶ್ರೀಮಂತವಾಗಿರುವ ಕರ್ನಾಟಕವನ್ನು ಒಂದೇ ಜಾಗದಲ್ಲಿ ಸ್ಕೆಚ್ ಮಾಡಿದ್ರೇ, ನೋಡಲಿಕ್ಕೆ ಹೇಗಿರುತ್ತೆ, ಅಂತ ನೋಡಬೇಕು ಅಂದ್ರೆ, ಈಗಿರುತ್ತೆ. ಹೀಗೆ ಅರಮನೆಯನ್ನು ಉಳಿಸಿಕೊಳ್ಳಲಿಕ್ಕೆ ಎಷ್ಟೋ ಯುದ್ದಗಳು ನಡೆದು ಹೋಗಿವೆ. ಈ ಅರಮನೆಯಲ್ಲಿ ತಮ್ಮನ್ನು ತಾವು ಉಳಿಸಿಕೊಳ್ಳಲಿಕ್ಕೆ ಬಹಳ ಯುದ್ಧಗಳು ನಡೆಯಲಿವೆ. ನಮ್ಮ ನಾಡಿಗೆ ದಸರಾ ಹಬ್ಬ ಶುರುವಾಗಿ ಒಂದು ವಾರ ಆಯ್ತು. ನಮ್ಮ ಬಿಗ್ ಬಾಯ್ ಮನೆಯಲ್ಲಿ ಮಸ್ತಿ ಹಬ್ಬ ಈಗ ಶುರು ಎಂದು ನಿರೂಪಕ ಕಿಚ್ಚ ಸುದೀಪ್ ಹೇಳಿದ್ದಾರೆ.
https://www.instagram.com/reel/DPGI3MAjvOF/?igsh=MXdxNm1xemd2OGMxaA==