newsics.com
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ FIR ದಾಖಲಿಸಬೇಕೆಂದು ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ್ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿರುವುದು ಇದೀಗ ದೊಡ್ಡ ಕಾನೂನು ಚರ್ಚೆಗೆ ಕಾರಣವಾಗಿದೆ.
ಜೂನ್ 6, 2025 ರಂದು ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಸಮಾವೇಶದಲ್ಲಿ ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ಖಂಡಿಸಲಾಗುತ್ತಿತ್ತು.
ಅಂದಿನ ಧಾರವಾಡ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಭರಮನಿ ಕರ್ತವ್ಯದಲ್ಲಿದ್ದರು. ಸಮವಸ್ತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿಯ ಮೇಲೆಯೇ ಸಿಎಂ ಸಿದ್ದರಾಮಯ್ಯ ಕೈ ಎತ್ತಿದ ಘಟನೆ ನಡೆದಿದೆ ಎಂಬುದು ದೂರುದಾರರ ಆರೋಪ.
ಘಟನೆಯ ಕುರಿತು ಭೀಮಪ್ಪ ಗಡಾದ್ ಅವರು ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಲು ಮುಂದಾದರೂ, ಪೊಲೀಸರು ‘ಮೂರನೇ ವ್ಯಕ್ತಿ ನೀಡಿದ ದೂರು’ ಎಂದು ಕಾರಣ ಹೇಳಿ FIR ದಾಖಲಿಸಲು ನಿರಾಕರಿಸಿದ್ದರು.
ಆದರೆ, ಭೀಮಪ್ಪ ಗಡಾದ ಅವರು ಪೊಲೀಸರ ನಿರಾಕರಣೆಯ ನಂತರ ಈಗ ನ್ಯಾಯಾಲಯದ ಬಾಗಿಲು ತಟ್ಟಿದ್ದಾರೆ.
ಅವರು BNS ಕಲಂ 132 ಅಡಿಯಲ್ಲಿ FIR ದಾಖಲಿಸಲು ನಿರ್ದೇಶನ ನೀಡುವಂತೆ ಮನವಿ ಮಾಡಿ ಖಾಸಗಿ ದೂರು ಸಲ್ಲಿಸಿದ್ದಾರೆ. ಅರ್ಜಿಯೊಂದಿಗೆ ಸಂಬಂಧಿತ ವೀಡಿಯೋ ದೃಶ್ಯಗಳು, ಫೋಟೋಗಳು ಹಾಗೂ ಮಾಧ್ಯಮ ವರದಿಗಳನ್ನು ದಾಖಲೆಯಾಗಿ ಸೇರಿಸಲಾಗಿದೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಈ ದೂರು ಸ್ವೀಕರಿಸಿದ್ದು, ವಿಚಾರಣೆಗೆ ಅಕ್ಟೋಬರ್ 6, 2025ರಂದು ದಿನಾಂಕ ನಿಗದಿಪಡಿಸಿದೆ. ಈಗ FIR ದಾಖಲಿಸಬೇಕೇ ಅಥವಾ ಬೇಡವೇ ಎಂಬುದರ ಕುರಿತು ನ್ಯಾಯಾಲಯ ತೀರ್ಮಾನ ಕೈಗೊಳ್ಳಲಿದೆ.
Viral ಮಹಿಳೆಯನ್ನ ಎತ್ತಿಕೊಂಡು ಕೆಂಡ ಹಾರಲು ಹೋದ ವೃದ್ಧ – ಮುಂದೇನಾಯ್ತು? ವೈರಲ್ ವಿಡಿಯೋ ನೋಡಿ
Gmail Tips: ಜಿಮೇಲ್ ಸ್ಟೋರೇಜ್ ಫುಲ್ ಆಯ್ತಾ… ಹಾಗಾದ್ರೆ ಮೇಲ್ ಡಿಲೀಟ್ ಮಾಡಲು ಹೀಗೆ ಮಾಡಿ
Actress Rashmika Mandanna ನಟಿ ರಶ್ಮಿಕಾ ಮಂದಣ್ಣ ನಟನೆಯ ಥಮ ಚಿತ್ರದ ಟ್ರೇಲರ್ ರಿಲೀಸ್