Newsics_Kannada
Subscribe and watch video
ನ್ಯೂಸಿಕ್ಸ್ ಕನ್ನಡ
ಬನ್ನಿ ನಮ್ ಸಂಗಡ
newsics.com
ದಕ್ಷಿಣ ಕನ್ನಡ : ಧರ್ಮಸ್ಥಳ ಶವಹೂತಿಟ್ಟ ಪ್ರಕರಣದ ತನಿಖೆ ತೀವ್ರಗತಿಯಲ್ಲಿ ಸಾಗಿದೆ. ಕೇಸ್ ಕುರಿತು ಹಲವು ವಿಚಾರಗಳು ಬಯಲಾಗ್ತಿದೆ. ದೂರುದಾರ ಚಿನ್ನಯ್ಯನನ್ನು ಎಸ್ಐಟಿ ಬಂಧಿಸಿ ಸುದೀರ್ಘ ವಿಚಾರಣೆ ನಡೆಸಿತು. ಇದೀಗ ಚಿನ್ನಯ್ಯ ಶಿವಮೊಗ್ಗ ಜೈಲಿನಲ್ಲಿದ್ದಾನೆ
ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಳ್ತಂಗಡಿ ನ್ಯಾಯಾಲಯದಲ್ಲಿ BNSS 183 ಅಡಿಯಲ್ಲಿ ಸ್ವ-ಇಚ್ಛಾ ಹೇಳಿಕೆ ನೀಡಲು ಬಂದಿದ್ದ ಚಿನ್ನಯ್ಯ, ನ್ಯಾಯಾಧೀಶರ ಮುಂದೆ ಗಳಗಳನೆ ಕಣ್ಣೀರಿಟ್ಟಿದ್ದಾನೆ.
ನನ್ನದೇನೂ ತಪ್ಪಿಲ್ಲ ಎಂದು ಗೋಳಾಡಿದ್ದಾನೆ. ಸುಮಾರು ಮೂರು ಗಂಟೆಗಳ ಕಾಲ ಹೇಳಿಕೆ ದಾಖಲಿಸಿದರೂ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ, ಸೆಪ್ಟೆಂಬರ್ 25ಕ್ಕೆ ಮತ್ತೆ ಹಾಜರಾಗಲು ಕೋರ್ಟ್ ಆದೇಶಿಸಿದ್ದು, ಸದ್ಯ ಚಿನ್ನಯ್ಯನನ್ನು ಶಿವಮೊಗ್ಗ ಜೈಲಿಗೆ ಅಧಿಕಾರಿಗಳು ಶಿಪ್ಟ್ ಮಾಡಿದ್ದಾರೆ.
ಒಟ್ಟಾರೆ.. ಧರ್ಮಸ್ಥಳ ವಿರುದ್ಧ ಬುರುಡೆ ಬಿಟ್ಟ ಗ್ಯಾಂಗ್ ದಿಕ್ಕಾಪಾಲಾಗಿದೆ. ತಿಮರೋಡಿ ಗಡಿಪಾರಾಗಿದ್ರೆ, ಮಾಸ್ಕ್ ಮ್ಯಾನ್ ಚಿನ್ನಯ್ಯ ಜೈಲು ಪಾಲಾಗಿದ್ದಾನೆ. ಸದ್ಯ ಚಿನ್ನಯ್ಯನ ಸ್ವಇಚ್ಛಾ ಹೇಳಿಕೆಯು ತನಿಖೆಯ ದಿಕ್ಕನ್ನೇ ಬದಲಿಸುವ ಸಾಧ್ಯತೆಯಿದೆ.