newsics.com
ಬೆಂಗಳೂರು : ಬೆಂಗಳೂರಲ್ಲಿ ರಾತ್ರಿಯಿಡಿ ವರುಣ ಅಬ್ಬರಿಸಿದ್ದಾರೆ. ಮಧ್ಯರಾತ್ರಿ 2 ಗಂಟೆಗಳ ಭಾರೀ ಮಳೆಯಾಗಿದ್ದು , ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದೆ. ಒಂದು ರಾತ್ರಿ ಮಳೆ ನಗರದ ಹಲವೆಡೆ ನಾನಾ ಅವಾಂತರ ಸೃಷ್ಟಿಸಿದೆ.
ಲಾಲ್ ಬಾಗ್ ಮುಖ್ಯ ರಸ್ತೆಯಲ್ಲಿ ಬೃಹತ್ ಮರವೊಂದು ಧರೆಗುರುಳಿದ ಪರಿಣಾಮ ಟ್ರಾಫಿಕ್ ಜಾಮ್ ಉಂಟಾಗಿದ್ದು, ಸವಾರರು ಹೈರಾಣಾಗಿದ್ದರು. ಮರ ಬಿದ್ದು ಗಂಟೆಗಳೇ ಕಳೆದರೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸರಿಲಿಲ್ಲ. ಮರಬಿದ್ದ ರಭಸಕ್ಕೆ ವಿದ್ಯುತ್ ಕೇಬಲ್ ಕೂಡ ತುಂಡಾಗಿ ಕರೆಂಟ್ ಕೂಡ ಸ್ಥಗಿತಗೊಳಿಸಿರ್ಲಿಲ್ಲ ಅನ್ನೋ ಆರೋಪ ಕೇಳಿ ಬಂದಿದೆ.
ಇಂದು ಕೂಡ ಮಳೆಯ ಆರ್ಭಟ ಮುಂದುವರಿಯವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಇಂದು (ಸೆಪ್ಟೆಂಬರ್ 18) ರಾಜ್ಯ ರಾಜಧಾನಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
https://www.instagram.com/reel/DOsoEIwkSyl/?igsh=M3JqZXI4ejd3Mzg3