newsics.com
ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದಡಿ ಬಂಧನದಲ್ಲಿರುವ ನಟ ದರ್ಶನ್, ಜೈಲಿನಲ್ಲಿ ಕನಿಷ್ಠ ಸೌಲಭ್ಯಗಳನ್ನು ನೀಡದಿರುವ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಅವರು ಬೆಂಗಳೂರಿನ 64ನೇ ಸೆಷನ್ಸ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಸೆಷನ್ಸ್ ಕೋರ್ಟ್ನ ಆದೇಶದ ನಂತರವೂ ಜೈಲಾಧಿಕಾರಿಗಳು ಕನಿಷ್ಠ ಸೌಲಭ್ಯಗಳನ್ನು ಒದಗಿಸಿಲ್ಲ ಎಂದು ದರ್ಶನ್ ಆರೋಪಿಸಿದ್ದಾರೆ.
ಜೈಲಿನಲ್ಲಿ ಕನಿಷ್ಠ ಸೌಲಭ್ಯವೂ ನೀಡುತ್ತಿಲ್ಲ:
ಜೈಲಿನಲ್ಲಿ ಕನಿಷ್ಠ ಸೌಲಭ್ಯಗಳಾದ ಹಾಸಿಗೆ, ದಿಂಬು ಸೇರಿದಂತೆ ಜೈಲು ಮ್ಯಾನ್ಯುಯಲ್ನಲ್ಲಿ ಉಲ್ಲೇಖಿಸಿರುವ ಯಾವುದೇ ಸೌಕರ್ಯವನ್ನು ಒದಗಿಸಿಲ್ಲ. ಕೇವಲ ಕಾರಿಡಾರ್ನಲ್ಲಿ ವಾಕ್ ಮಾಡಲು ಮಾತ್ರ ಅನುಮತಿ ನೀಡಲಾಗಿದೆ. ಕೋರ್ಟ್ನ ಆದೇಶವನ್ನು ಜೈಲಾಧಿಕಾರಿಗಳು ಪಾಲಿಸದಿರುವುದರಿಂದ ನ್ಯಾಯಾಂಗ ನಿಂದನೆಗೆ ಶಿಫಾರಸು ಮಾಡುವಂತೆ ದರ್ಶನ್ ಪರ ವಕೀಲ ಎಸ್. ಸುನೀಲ್ ಕುಮಾರ್ ಹೈಕೋರ್ಟ್ಗೆ ಮನವಿ ಮಾಡಿದ್ದಾರೆ.
ಜೈಲಾಧಿಕಾರಿಗಳ ವಿರುದ್ಧ ಆಕ್ಷೇಪ
ಕನಿಷ್ಠ ಸೌಲಭ್ಯ ನೀಡಿ ಎಂಬ ಕೋರ್ಟ್ ಆದೇಶ ಸ್ವೀಕರಿಸಲಿಲ್ವಾ ಅಧಿಕಾರಿಗಳು? ಜೈಲಾಧಿಕಾರಿಗಳಿಗೆ ಸೆಷನ್ಸ್ ಕೋರ್ಟ್ ಆದೇಶ ನೀಡಲು ಹೋಗಿದ್ದ ದರ್ಶನ್ ಪರ ವಕೀಲರು. ಈ ವೇಳೆ ವಕೀಲರೊಂದಿಗೆ ಜೈಲಾಧಿಕಾರಿಗಳ ಸರಿಯಾಗಿ ಸ್ಪಂದಿಸಿಲ್ಲ. ಕೋರ್ಟ್ನ ಸ್ಪಷ್ಟ ಆದೇಶದ ನಂತರವೂ ಜೈಲಾಧಿಕಾರಿಗಳು ಕನಿಷ್ಠ ಸೌಲಭ್ಯಗಳನ್ನು ಒದಗಿಸಿಲ್ಲ. ಇದು ಕೋರ್ಟ್ ಆದೇಶದ ಉಲ್ಲಂಘನೆಯಾಗಿದೆ ದರ್ಶನ್ ಪರ ವಕೀಲರು ಆರೋಪಿಸಿದ್ದಾರೆ.
No water, no power ಬೆಂಗಳೂರಲ್ಲಿ ಇನ್ನೂ 60 ಗಂಟೆ ನೀರಿಲ್ಲ, ಹಲವೆಡೆ ವಿದ್ಯುತ್ ಕೂಡ ಇಲ್ಲ