newsics.com
ಬೆಂಗಳೂರು : ಪೆಹಲ್ಗಾಮ್ ದಾಳಿ ಭಾರತದ ಹಾಗೂ ಪಾಕಿಸ್ತಾನದ ನಡುವೆ ದೊಡ್ಡ ಅಂತರವನ್ನೇ ಸೃಷ್ಟಿಸಿದೆ. ವ್ಯಾಪಾರ-ವಹಿವಾಟು ಬಂದ್ ಆಗಿದೆ. ಸಂಪರ್ಕದಕೊಂಡಿ ಕಳಚಿದೆ. ಗಡಿಯಲ್ಲಿ ಯುದ್ಧ ಭೀತಿಯ ಕಿಡಿ ಸಂಪೂರ್ಣವಾಗಿ ಹಾರಿಲ್ಲ.
ಇಂಥಹ ಸಮಯದಲ್ಲಿ ಭಾರತ-ಪಾಕಿಸ್ತಾನ ನಡುವೆ ಕ್ರಿಕೆಟ್ ಪಂದ್ಯ ನಡೀತಿದೆ. ಇದು ಉತ್ತಮ ಬೆಳವಣಿಗೆಯಲ್ಲ ಎಂದು ಬೆಂಗಳೂರಿನ ಸಾರ್ವಜನಿಕರು ಪಂದ್ಯಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಭಾರತ ಯಾವುದೇ ಕಾರಣಕ್ಕೂ ಪಾಕಿಸ್ತಾನದ ಜೊತೆ ಕ್ರಿಕೆಟ್ ಮ್ಯಾಚ್ ಆಡಬಾರದು. ಅವರಿಗೆ ತಕ್ಕ ಪಾಠ ಕಲಿಸ್ಬೇಕು. ಪಾಕಿಸ್ತಾನದಿಂದ ಉಗ್ರರನ್ನ ಹೊರ ಹಾಕುವವರೆಗೆ ಅವರ ಜೊತೆ ಯಾವುದೇ ವ್ಯವಹಾರ ಮಾಡಬಾರದು. ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತೀಯ ಕ್ರಿಕೆಟ್ ತಂಡವು ಇಂದು ಪಾಕಿಸ್ತಾನ ಟೀಮ್ ಎದುರಿಸಲು ಸಿದ್ಧವಾಗಿದೆ. ಈ ಭಾರತ-ಪಾಕ್ ಪಂದ್ಯವನ್ನು ನಾವು ನೋಡಲ್ಲ ಎಂದು ಬೆಂಗಳೂರಿಗರು ಹೇಳ್ತಿದ್ದಾರೆ. ಜೊತೆಗೆ ಇವತ್ತು ಯಾರು ಕೂಡ ಮ್ಯಾಚ್ ನೋಡಬೇಡಿ, ಇದೇ ನಾವು ಅವ್ರಿಗೆ ನೀಡುವ ಗೌರವ. ಇಲ್ಲಿ ಪಂದ್ಯಕ್ಕಿಂತ ದೇಶ ಮತ್ತು ದೇಶದ ಗೌರವ ಮುಖ್ಯ. ಈ ಮ್ಯಾಚ್ ಆಡೋದು ಬೇಡ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.