newsics.com
ನವದೆಹಲಿ: UPI ಈಗ ದೇಶದಲ್ಲಿ ಅತ್ಯಂತ ಜನಪ್ರಿಯ ಪಾವತಿ ವಿಧಾನವಾಗಿದೆ.ಡಿಜಿಟಲ್ ಪಾವತಿಯ ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಅನುಕೂಲ ಒದಗಿಸಲು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ ಯುಪಿಐ ಪಾವತಿ ಮಿತಿಯನ್ನು ಹೆಚ್ಚಳ ಮಾಡಿದೆ.
ಗ್ರಾಹಕರು ಒಮ್ಮೆಲೆ ಯುಪಿಐ ಮೂಲಕ 5 ಲಕ್ಷ ರೂಪಾಯಿ ಕಳುಹಿಸಬಹುದು. ಒಂದು ದಿನದಲ್ಲಿ 10 ಲಕ್ಷ ರೂಪಾಯಿವರೆಗಿನ ಮೊತ್ತವನ್ನು ಯುಪಿಐ ಮೂಲಕ ಪಾವತಿಸಬಹುದಾಗಿದೆ.ಸೆಪ್ಟೆಂಬರ್ 15 ರಿಂದ ಜಾರಿಗೆ ಬರಲಿರುವ ಈ ನಿಯಮದಡಿಯಲ್ಲಿ, ವ್ಯಕ್ತಿಯಿಂದ ವ್ಯಕ್ತಿಗೆ (ವ್ಯವಹಾರೇತರ ಅಥವಾ ವೈಯಕ್ತಿಕ) ವಹಿವಾಟುಗಳು ದಿನಕ್ಕೆ 1 ಲಕ್ಷ ರೂಪಾಯಿಗಳಿಗೆ ಸೀಮಿತವಾಗಿರುತ್ತದೆ.
ಇದು ವ್ಯಕ್ತಿಯಿಂದ ವರ್ತಕರು ಅಥವಾ ಕಂಪನಿಗಳು ಮಾಡುವ ಪಾವತಿಗಳಿಗೆ ನಿರ್ಧಿಷ್ಟ 12 ವ್ಯವಹಾರಗಳಿಗೆ ಮಾತ್ರ ಅನ್ವಯವಾಗಲಿದೆ. ವ್ಯಕ್ತಿಯಿಂದ ವ್ಯಕ್ತಿಗೆ ಕಳುಹಿಸುವ ಹಣಕ್ಕೆ ಪ್ರತಿದಿನ ಗರಿಷ್ಠ ಒಂದು ಲಕ್ಷ ರೂಪಾಯಿ ಮಿತಿ ಮುಂದುವರೆಯಲಿದೆ. ವಿಮೆ, ಷೇರು ಮಾರುಕಟ್ಟೆ, ಸರ್ಕಾರಿ ಇ- ಮಾರ್ಕೆಟ್ ಪ್ಲೇಸ್, ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಸೇರಿ ಒಟ್ಟು 12 ವ್ಯವಹಾರಗಳಿಗೆ ಹೆಚ್ಚುವರಿ ಪಾವತಿ ಮಿತಿ ಅನ್ವಯವಾಗಲಿದೆ.