newsics.com
ಮಗಳನ್ನು ನಿನಗೆ ಮದುವೆ ಮಾಡಿಕೊಡುವುದಿಲ್ಲ ಎಂದು ಹೇಳಿದ್ದಕ್ಕೆ ಯುವತಿಯ ಪೋಷಕರನ್ನು ಚಾಕುವಿನಿಂದ ಇರಿದು ವ್ಯಕ್ತಿಯೊಬ್ಬ ಕೊಲೆ ಮಾಡಿರುವ ಘಟನೆ ಡುಮ್ಕಾದ ಶಿಕಾರಿಪರಾ ಪೊಲೀಸ್ ಠಾಣೆ ಪ್ರದೇಶದ ಸುಂದರಪ್ಲಾನ್ ಗ್ರಾಮದಲ್ಲಿ ನಡೆದಿದೆ.
ದಂಪತಿಗಳಾದ ಸಾಹೇಬ್ ಹೆಂಬ್ರಾಮ್ (63) ಮತ್ತು ಅವರ ಪತ್ನಿ ಮಂಗಲಿ ಕಿಸ್ಕು (60) ಅವರನ್ನು ಇರಿದು ಕೊಲ್ಲಲಾಗಿದೆ. ಅವರ ಇಬ್ಬರು ಹೆಣ್ಣುಮಕ್ಕಳಾದ 25 ವರ್ಷದ ಹಿರಾಮುನಿ ಹೆಂಬ್ರಾಮ್ ಮತ್ತು 17 ವರ್ಷದ ಬೆನಿ ಹೆಂಬ್ರಾಮ್ ಕೂಡ ಗಾಯಗೊಂಡಿದ್ದಾರೆ.
ಹಿರಿಯ ಮಗಳು ಹಿರಾಮುನಿ ಫೇಸ್‌ಬುಕ್‌ನಲ್ಲಿ ಪಾಕೂರ್ ನಿವಾಸಿ ಲೋಕೇಶ್ ಜೊತೆ ಸ್ನೇಹ ಬೆಳೆಸಿದ್ದಾಗಿ ಹೇಳಿದ್ದಾಳೆ. ಲೋಕೇಶ್ ದಿವ್ಯಾಂಗನಾಗಿದ್ದು ಒಂದು ಕೈ ಸ್ವಾದೀನವಿರಲಿಲ್ಲ. ಸ್ನೇಹ ಬೆಳೆದ ನಂತರ ಆತ ನಿರಂತರವಾಗಿ ಮದುವೆಗೆ ಒತ್ತಡ ಹೇರುತ್ತಿದ್ದನು, ಆದರೆ ಕುಟುಂಬ ಸದಸ್ಯರು ಇದಕ್ಕೆ ಸಿದ್ಧರಿರಲಿಲ್ಲ.
ಕಳೆದ ಮೂರು ದಿನಗಳಿಂದ, ಆತ ನಿರಂತರವಾಗಿ ಅವಳನ್ನು ಫೋನ್‌ನಲ್ಲಿ ಸಂಪರ್ಕಿಸಲು ಪ್ರಯತ್ನಿಸುತ್ತಿದ್ದ, ಆದರೆ ಅವಳ ತಂದೆಯ ಸೂಚನೆಯಂತೆ ಅವಳು ಅವನೊಂದಿಗೆ ಮಾತನಾಡಲಿಲ್ಲ. ಇದರಿಂದ ಕೋಪಗೊಂಡ ಲೋಕೇಶ್, ಭಾರೀ ಮಳೆ ಬರುತ್ತಿದ್ದಾಗ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಚಾಕು ಸಹಿತ ಮನೆಗೆ ಬಂದಿದ್ದಾನೆ. ಪೊಲೀಸ್ ಠಾಣೆಯ ಉಸ್ತುವಾರಿ ಅಮಿತ್ ಕುಮಾರ್ ಲಾಕ್ರಾ ತಮ್ಮ ತಂಡದೊಂದಿಗೆ ಸ್ಥಳಕ್ಕೆ ತಲುಪಿ ಗಾಯಾಳುಗಳನ್ನು ಡುಮ್ಕಾ ಫೂಲ್ ಜಾನೋ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಿದ್ದಾರೆ.