Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Insta love ಇನ್‌ಸ್ಟಾ ಫಿಲ್ಟರ್‌ ಮಹಿಮೆ: ಯುವತಿ ಲವ್ ಮಾಡಿದ ಯುವಕ, ಭೇಟಿ ವೇಳೆ ಗೊತ್ತಾದ ಸತ್ಯ ಏನು? ಮುಂದೇನಾಯ್ತು?
ದೇಶಪ್ರಮುಖವೈರಲ್

Insta love ಇನ್‌ಸ್ಟಾ ಫಿಲ್ಟರ್‌ ಮಹಿಮೆ: ಯುವತಿ ಲವ್ ಮಾಡಿದ ಯುವಕ, ಭೇಟಿ ವೇಳೆ ಗೊತ್ತಾದ ಸತ್ಯ ಏನು? ಮುಂದೇನಾಯ್ತು?

Share
2 Min Read
SHARE

newsics.com

ಸೋಶಿಯಲ್ ಮೀಡಿಯಾದಲ್ಲಿನ ಫೋಟೋ ನೋಡಿ ಪ್ರೀತಿ ಮಾಡಿ ಮೋಸ ಹೋದ ಹಲವರಿದ್ದಾರೆ. ಇದೀಗ ಇದೇ ರೀತಿ ಇನ್‌ಸ್ಟಾಗ್ರಾಂ ಫೋಟೋ ನೋಡಿ ಪ್ರೀತಿ ಹುಟ್ಟಿ ಕೊಲೆಯಲ್ಲಿ ಅಂತ್ಯವಾಗಿದೆ.

ಇನ್‌ಸ್ಟಾಗ್ರಾಂ ಫಿಲ್ಟರ್ ಬಳಸಿ 52ರ ಮಹಿಳೆ ಫೋಟೋ ಪೋಸ್ಟ್ ಮಾಡಿದ್ದಾಳೆ. ಈ ಫೋಟೋ ನೋಡಿ 26ರ ಯುವಕನಿಗೆ ಪ್ರೀತಿ ಶುರುವಾಗಿದೆ. ಮೆಸೇಜ್ ಬಳಿಕ ಫೋನ್ ಮೂಲಕ ಚಾಟಿಂಗ್ ಶುರುವಾಗಿದೆ. ಆದರೆ ಈ ಪ್ರೀತಿ ಕೊಲೆಯಲ್ಲಿ ಅಂತ್ಯವಾದ ಘಟನೆ ಉತ್ತರ ಪ್ರದೇಶದ ಮೈನ್‌ಪುರದಲ್ಲಿ ನಡೆದಿದೆ.

26ರ ಹರೆಯದ ಅರುಣ್ ರಜಪೂತ್ ಹೆಚ್ಚು ಸಮಯ ಸೋಶಿಯಲ್ ಮೀಡಿಯಾದಲ್ಲೇ ಇರುತ್ತಿದ್ದ. ಸುಂದರ ಹುಡುಗಿಯರ ಫೋಟೋ ಇರುವ ಪ್ರೊಫೈಲ್ ಇದ್ದರೆ ಸಾಕು ಮೆಸೇಜ್ ಮಾಡುತ್ತಿದ್ದ. ಹೀಗೆ ಪಿಯುಸಿ ಹುಡುಗಿಯಂತೆ ಕಾಣುತ್ತಿದ್ದ 52ರ ಹರೆಯದ ರಾಣಿಗೂ ಮೆಸೇಜ್ ಹಾಕಿದ್ದಾನೆ. ಕೆಲ ದಿನಗಳ ಬಳಿಕ ರಾಣಿಯಿಂದ ಪ್ರತಿಕ್ರಿಯೆ ಬಂದಿದೆ. ಅರುಣ್ ರಜಪೂತ್‌ಗೆ ಖುಷಿಗೆ ಪಾರವೇ ಇರಲಿಲ್ಲ. ಈತನೂ ಮೆಸೇಜ್ ಮಾಡಿದ್ದ. ಅಲ್ಲಿಗೆ ಅರುಣ್ ರಜಪೂತ್ ಹಾಗೂ ರಾಣಿ ನಡುವೆ ಸ್ನೇಹ ಆರಂಭಗೊಂಡಿತ್ತು.

ಫಿಲ್ಟರ್ ಬಳಸಿ ಫೋಟೋ ಎಡಿಟ್ ಮಾಡಿ ಪೋಸ್ಟ್ ಮಾಡಿದ್ದ ಕಾರಣ 52ರ ಹರೆಯದ ರಾಣಿ ಹುಡುಗಿಯಂತೆ ಕಾಣುತ್ತಿದ್ದಳು. ಬಳಿಕ ಇವರಿಬ್ಬರ ಸ್ನೇಹ ಗಾಢವಾಗಿದೆ. ಫೋನ್ ನಂಬರ್ ವಿನಿಮಯ ಮಾಡಿದ್ದಾರೆ. ಫೋನ್ ಮೂಲಕ ಮಾತುಕತೆ ಶುರುವಾಗಿದೆ. ಆಕೆಯೂ ತನ್ನ ವಯಸ್ಸು ಹೇಳಲಿಲ್ಲ. ಈತ ಕೂಡ ಕೇಳಲಿಲ್ಲ. ಮಾತುಗಳು ಕೊನೆಗೆ ರೋಮ್ಯಾಂಟಿಕ್ ಮೂಡ್‌ಗೆ ತಲುಪಿದೆ. ಇದರ ನಡುವೆ ಯುವಕನ ಆರ್ಥಿಕ ಸಂಕಷ್ಟಕ್ಕೂ ಆಕೆ ನೆರವು ನೀಡಿದ್ದಾಳೆ. ಒಂದಿಷ್ಟು ಹಣ ನೀಡುತ್ತಾ ಬಂದಿದ್ದಾಳೆ.

ಯುವಕ ಕೂಡ ಮದುವೆಯಾಗುವುದಾಗಿ ಮಾತು ಕೊಟ್ಟಿದ್ದಾನೆ. ಬಳಿಕ ಇವರಿಬ್ಬರು ಭೇಟಿಯಾಗಲು ನಿರ್ಧರಿಸಿದ್ದಾರೆ. ಟಿಪ್ ಟಾಪ್ ಆಗಿ ರೆಡಿಯಾಗಿ ತನ್ನ ಲವರ್ ಭೇಟಿಯಾಗಲು ಅರುಣ್ ರಜಪೂತ್ ತೆರಳಿದ್ದಾನೆ. ತನ್ನ ಆಪ್ತ ಗೆಳೆಯರ ಬಳಿ ಗೆಳತಿ ಭೇಟಿಯಾಗುತ್ತಿರುವ ಸಂತೋಷವನ್ನು ಹಂಚಿಕೊಂಡಿದ್ದ. ಎಲ್ಲಾ ತಯಾರಿಯೊಂದಿಗೆ ಲವರ್ ಭೇಟಿಯಾದ ಅರುಣ್ ರಜಪೂತ್‌ಗೆ ಭಾರೀ ನಿರಾಸೆಯಾಗಿದೆ. ಆಕೆ ಹುಡುಗಿ, ಯವತಿ ಅಲ್ಲ ಮುದುಕಿ ಎಂದು ಆಕ್ರೋಶಗೊಂಡಿದ್ದಾನೆ.

1 ರಿಂದ 1.5 ಲಕ್ಷ ರೂಪಾಯಿ ಆಕೆಯಿಂದ ಅರುಣ್ ರಜಪೂತ್ ಪಡೆದುಕೊಂಡಿದ್ದ. ಮದುವೆಯಾಗುವುದಾಗಿ ಮಾತು ಕೊಟ್ಟಿದ್ದ. ಇದರ ಜತೆಗೆ ರೊಮ್ಯಾಂಟಿಕ್ ಮಾತುಕತೆಗಳು ನಡೆದಿವೆ. ಮೊದಲ ಭೇಟಿಯಲ್ಲೇ ರಾಣಿ ತನ್ನ ಮದುವೆಯಾಗುವಂತೆ ಅರುಣ್ ರಜಪೂತ್‌ಗೆ ಒತ್ತಾಯ ಮಾಡಿದ್ದಾಳೆ. ಆದರೆ ಇದನ್ನು ಯುವಕ ನಿರಾಕರಿಸಿದ್ದಾನೆ. ಫಿಲ್ಟರ್ ಫೋಟೋ ನೋಡಿ ಇಷ್ಚಪಟ್ಟೆ. ಆದರೆ ವಯಸ್ಸು ಇಷ್ಟಾಗಿದೆ. ಹೇಗೆ ಮದುವೆಯಾಗಲಿ, ಸಾಧ್ಯವಿಲ್ಲ ಎಂದಿದ್ದಾನೆ. ಅಲ್ಲಿಗೆ ಇಬ್ಬರಿಗೂ ಜಗಳ ಶುರುವಾಗಿದೆ. ತನ್ನಿಂದ ಪಡೆದುಕೊಂಡಿರವ ಹಣ ವಾಪಸ್ ನೀಡುವಂತೆ ಸೂಚಿಸಿದ್ದಾಳೆ. ಇಷ್ಟೇ ಅಲ್ಲ, ಪ್ರೀತಿಸಿ ವಂಚಿಸಿದ ಅರುಣ್ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾಳೆ.

ಮದುವೆಯಾಗುವಂತೆ ಒತ್ತಾಯ, ಹಣ ವಾಪಸ್ ನೀಡುವಂತೆ ಎಚ್ಚರಿಕೆಯಿಂದ ಅರುಣ್ ರಜಪೂತ್ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ. ಈ ಕುರಿತು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳೋಣ ಎಂದು ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾನೆ. ಬಳಿಕ ಆಕೆಯ ದುಪ್ಪಟದಿಂದ ಬಿಗಿದು ಲವರ್ ಹತ್ಯೆ ಮಾಡಿದ್ದಾನೆ. ನಿರ್ಜನ ಪ್ರದೇಶದಲ್ಲೇ ಆಕೆಯ ಮೃತದೇಹ ಎಸೆದು ಪರಾರಿಯಾಗಿದ್ದಾನೆ. ತನಿಖೆ ನಡೆಸಿದ ಪೊಲೀಸರು ಅರುಣ್ ರಜಪೂತ್ ಬಂಧಿಸಿ ವಿಚಾರಣೆ ನಡೆಸಿದಾಗ ನಡೆ ಘಟನೆ ಬಯಲಾಗಿದೆ.

ರೇಣುಕಾಸ್ವಾಮಿ ಕೊಲೆ ಕೇಸ್ : ನಟ ದರ್ಶನ್ ಅರ್ಜಿ ವಿಚಾರಣೆ ವೇಳೆ ಕೋರ್ಟ್ ಗೆ ನುಗ್ಗಿದ ಅಪರಿಚಿತ ವ್ಯಕ್ತಿ.!

ರಾಜ್ಯಾದ್ಯಂತ 3-4 ದಿನ ಭಾರಿ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ

TAGGED:Insta Filter effect: A young man fell in love with a young womanwhat was the truth he learned during the meeting? What happened next?
Share This Article
Facebook Twitter Copy Link Print
Previous Article ರೇಣುಕಾಸ್ವಾಮಿ ಕೊಲೆ ಕೇಸ್ : ನಟ ದರ್ಶನ್ ಅರ್ಜಿ ವಿಚಾರಣೆ ವೇಳೆ ಕೋರ್ಟ್ ಗೆ ನುಗ್ಗಿದ ಅಪರಿಚಿತ ವ್ಯಕ್ತಿ.!
Next Article ಲವರ್ ಫೋನ್ ಬ್ಯುಸಿ : ಗ್ರಾಮದ `ಕರೆಂಟ್ ಲೈನ್’ ಕತ್ತರಿಸಿದ ಪ್ರೇಮಿ.!

Popular Posts

Lalabhag Flower Show | ಲಾಲ್‌ಬಾಗ್ ಪುಷ್ಪ ಪ್ರದರ್ಶನ 2026: ಗಂಗರ ವೈಭವ ಅನಾವರಣಗೊಳಿಸುವ 220ನೇ ಹೂವಿನ ಉತ್ಸವ

2 Min Read

Don’t Ignore These Wrist Symptoms ಮಣಿಕಟ್ಟಿನ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ: ಗಂಭೀರ ಆರೋಗ್ಯ ಸಮಸ್ಯೆಯ ಸೂಚನೆಯಾಗಿರಬಹುದು!

2 Min Read

These Zodiac Signs Should Avoid Wearing Silver ಈ ರಾಶಿಯವರು ಬೆಳ್ಳಿ ಧರಿಸಲೇ ಬಾರದು! ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ?

1 Min Read

Sonum Wangchuk Hunger Protest | ಸೋನಂ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ಅಂತ್ಯಕ್ಕೆ ಮೂರು ಷರತ್ತುಗಳು ?

2 Min Read

You Might Also Like

ಕರ್ನಾಟಕಪ್ರಮುಖ

Rain Rain ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ವ್ಯಾಪಕ ಮಳೆ: ಈ ಜಿಲ್ಲೆಯಲ್ಲಿಂದು ಶಾಲಾ ಕಾಲೇಜಿಗೆ ರಜೆ ಘೋಷಣೆ

2 Min Read
ಕರ್ನಾಟಕಕೃಷಿದೇಶಪ್ರಮುಖವೈರಲ್

AI and Agri ಹೊಲ- ಗದ್ದೆಗಳಲ್ಲೂ ರೋಬೋಟ್‌ಗಳದ್ದೇ ದರ್ಬಾರಾಗುತ್ತಾ? ಎಕ್ಸ್‌ನಲ್ಲಿ ಟ್ರೆಂಡ್ ಆಗ್ತಿದೆ ಎಐ ಕೃಷಿ ಯಂತ್ರ!

1 Min Read
ದೇಶಪ್ರಮುಖಮನರಂಜನೆವಿದೇಶ

Ind vs Zim ಟೀಮ್ ಇಂಡಿಯಾದಲ್ಲಿ ಭಾರೀ ಸರ್ಜರಿ! 6 ಮಂದಿ ಔಟ್‌, ಯಾರೆಲ್ಲ ಸೇರಿದ್ರು?

2 Min Read
ದೇಶಆರೋಗ್ಯಪ್ರಮುಖರಿಲೇಷನ್‌ಶಿಪ್ವಿದೇಶ

Relationship- Personal Health ಗಂಡಸರಲ್ಲಿ ಪುರುಷತ್ವ ತೀವ್ರ ಕುಸಿತ! ಟೆಸ್ಟೋಸ್ಟೆರಾನ್ ಥೆರಪಿಗೆ ಹೆಚ್ಚುತ್ತಿದೆ ಬೇಡಿಕೆ, ಯಾಕೆ ಹೀಗೆ?

3 Min Read

Social Networks

Facebook-f Instagram Twitter
Welcome Back!

Sign in to your account

Lost your password?