newsics.com
ಬೆಂಗಳೂರು: ಜಾಮೀನು ರದ್ದಾದ ಹಿನ್ನೆಲೆ ನಟ ದರ್ಶನ್ ಮತ್ತೆ ಜೈಲು ಸೇರುವಂತಾಗಿದೆ. ಜೈಲಲ್ಲಿರುವ ದಾಸನಿಗೆ ಅವರಿಗೆ ಸಂಕಷ್ಟ ಹೆಚ್ಚಾಗಿದೆ. ಈ ಮೊದಲ ಜೈಲಿನ ನಿಯಮಗಳನ್ನು ಉಲ್ಲಂಘನೆ ಮಾಡಿದ್ದ ಅವರು ಈಗ ಪರದಾಡುತ್ತಿದ್ದಾರೆ. ಜೈಲು ಕೊಠಡಿಯಿಂದ ಹೊರಗೆ ಬರಲು ಕೂಡ ಸಾಧ್ಯವಾಗುತ್ತಿಲ್ಲ. ಎಲ್ಲ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ.
ದಿನದ 24 ಗಂಟೆ ಕೂಡ ನಾಲ್ಕು ಗೋಡೆ ಮಧ್ಯೆಯೇ ಕಾಲ ಕಳೆಯಬೇಕಿದೆ. ಕಾರಿಡಾರ್ನಲ್ಲಿ ವಾಕ್ ಮಾಡಲು ಕೂಡ ಅನುಮತಿ ಇಲ್ಲ. ದರ್ಶನ್ ಇರುವ ಕೊಠಡಿಗೆ ಸಿಬ್ಬಂದಿ ಊಟ, ತಿಂಡಿ ಪೂರೈಸುತ್ತಿದ್ದಾರೆ. ದರ್ಶನ್ ಇರುವ ಕೋಣೆಯಲ್ಲಿ ಟಿವಿ ಕೂಡ ಇಲ್ಲ. ಖಾಲಿ ಕೂರಬೇಕು ಇಲ್ಲವೇ ಪುಸ್ತಕ ಓದಲು ಮಾತ್ರ ಅವಕಾಶ ಇದೆ. ದಿನದ 24 ಗಂಟೆ ಕೂಡ ಜೈಲು ಸಿಬ್ಬಂದಿಗಳಿಂದ ಹದ್ದಿನ ಕಣ್ಣು ಇಡಲಾಗಿದೆ.
ದರ್ಶನ್ ಕೊಠಡಿಯೊಳಗೆ ವಾಕಿಂಗ್ ಮಾಡುತ್ತಾ, ಅಲ್ಲಿಯೇ ಮಲಗುತ್ತಿದ್ದಾರೆ. ಭದ್ರತೆಗೆ ನಿಯೋಜನೆಗೊಂಡ ಸಿಬ್ಬಂದಿಯ ಬಾಡಿವೋರ್ನ್ ಕ್ಯಾಮೆರಾವನ್ನು ಹಿರಿಯ ಅಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಕೊಠಡಿಯಲ್ಲಿ ವಾಕ್ ಮಾಡುತ್ತಿರುವುದು, ಮಲಗಿರೋದಷ್ಟೇ ವಿಡಿಯೋದಲ್ಲಿದೆ ಎಂಬುದು ತಿಳಿದುಬಂದಿದೆ. ಒಟ್ಟಿನಲ್ಲಿ ದರ್ಶನ್ ಅವರಿಗೆ ಈ ಬಾರಿ ಜೈಲಿನ ನಿಯಮಗಳು ಬಹಳ ಕಠಿಣವಾಗಿವೆ.
ತೆಳುವಾದ ಬೆಡ್ ಮೇಲೆಯೇ ಮಲಗಿ ದರ್ಶನ್ ಅವರು ನಿದ್ದೆಗೆ ಜಾರಿದ್ದಾರೆ. ಕಳೆದ ಬಾರಿ ಜೈಲಿಗೆ ಬಂದಿದ್ದಾಗ ಸಹ ಖೈದಿಗಳ ಬೆಡ್ಗಳನ್ನು ಕೂಡ ದರ್ಶನ್ ತೆಗೆದುಕೊಂಡಿದ್ದರು. ಎರಡು ಬೆಡ್ಗಳನ್ನು ಜೋಡಿಸಿ ಮಲಗಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಎಲ್ಲದಕ್ಕೂ ಜೈಲು ಸಿಬ್ಬಂದಿ ಕಡಿವಾಣ ಹಾಕಿದ್ದಾರೆ. ಬೇರೆ ಸಿಬ್ಬಂದಿ ಬರದಂತೆ ದರ್ಶನ್ ಕೊಠಡಿ ಮುಂದೆ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದೆ.