Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Trump- Putin ಮಾತುಕತೆ ವೇಳೆಯೇ ಟ್ರಂಪ್- ಪುಟಿನ್ ತಲೆ‌ ಮೇಲೆ ಹಾರಾಡಿದ ಅಮೆರಿಕ ಫೈಟರ್ ಜೆಟ್ B-2 bomber!
ಪ್ರಮುಖವಿದೇಶವೈರಲ್

Trump- Putin ಮಾತುಕತೆ ವೇಳೆಯೇ ಟ್ರಂಪ್- ಪುಟಿನ್ ತಲೆ‌ ಮೇಲೆ ಹಾರಾಡಿದ ಅಮೆರಿಕ ಫೈಟರ್ ಜೆಟ್ B-2 bomber!

Share
2 Min Read
SHARE

newsics.com

ಅಲಸ್ಕಾದಲ್ಲಿ ನಡೆದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವಿನ ದ್ವಿಪಕ್ಷೀಯ ಮಾತುಕತೆ ಹಲವು ನಾಟಕೀಯ ಘಟನೆಗಳಿಗೆ ಸಾಕ್ಷಿಯಾಯಿತು.

ಪ್ರಮುಖವಾಗಿ B-2 bomber ಪ್ರಹಸನ ಇದೀಗ ಜಗತ್ತಿನಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ.

ಉಕ್ರೇನ್‌-ರಷ್ಯಾ ಸಂಘರ್ಷಕ್ಕೆ ಅಂತ್ಯ ಹಾಡಿ, ಶಾಂತಿ ಸ್ಥಾಪಿಸುವ ಉದ್ದೇಶದಿಂದ ಶನಿವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ನಡುವೆ ಅಮೆರಿಕದ ಅಲಾಸ್ಕಾದಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಯಿತು.

ಆದರೆ, ಅಮೆರಿಕದ ಅಲಾಸ್ಕಾದಲ್ಲಿ ನಡೆದ ದ್ವಿಪಕ್ಷೀಯ ಮಾತುಕತೆ ಯಾವುದೇ ಫಲಿತಾಂಶವಿಲ್ಲದೇ ಅಂತ್ಯವಾಗಿದೆ ಎಂದು ಹೇಳಲಾಗಿದೆ.

1945ರ ನಂತರದ ಯುರೋಪಿನ ಅತಿದೊಡ್ಡ ಭೂ ಯುದ್ಧವಾದ ರಷ್ಯಾ ಮತ್ತು ಉಕ್ರೇನ್ ನಡುವಿನ ಕ್ರೂರ ಸಂಘರ್ಷವನ್ನು ಕೊನೆಗೊಳಿಸಲು ಅಥವಾ ವಿರಾಮಗೊಳಿಸಲು ಸೇರಿದ್ದ ಅಲಸ್ಕಾ ಶೃಂಗಸಭೆ ಯಾವುದೇ ಒಪ್ಪಂದವಿಲ್ಲದೆ ಅಂತ್ಯಗೊಂಡಿದೆ.

ಸುಮಾರು ಮೂರು ಗಂಟೆ ಸುದೀರ್ಘ ಸಮಾಲೋಚನೆ ನಡೆದಿದ್ದು, ಮಾತುಕತೆ ಬಳಿಕ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾದ ವ್ಲಾಡಿಮಿರ್ ಪುಟಿನ್ ಮಾತನಾಡಿ, ಮಾತುಕತೆಯಲ್ಲಿ ಮಹತ್ವದ ಪ್ರಗತಿ ಕಂಡು ಬಂದಿದೆ ಎಂದು ಘೋಷಣೆ ಮಾಡಿದರು.

ಮಾತುಕತೆ ಸಂಬಂಧ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಮ್ಮ ನಿಯೋಗದೊಂದಿಗೆ ಅಲಸ್ಕಾದ ವಿಶೇಷ ವಾಯುನೆಲೆಯಲ್ಲಿ ಬಂದಿಳಿದರು.

ಈ ವೇಳೆ ಸ್ವತಃ ಡೊನಾಲ್ಡ್ ಟ್ರಂಪ್ ವ್ಲಾಡಿಮಿರ್ ಪುಟಿನ್ ರನ್ನು ಸ್ವಾಗತಿಸಿ ವೇದಿಕೆಯತ್ತ ಕರೆತಂದರು. ಇದೇ ಸಂದರ್ಭದಲ್ಲಿ ಉಭಯ ನಾಯಕರ ತಲೆ ಮೇಲೆ ಅಮೆರಿಕ ಸೇನೆಯ ವಿಧ್ವಂಸಕ ಬಾಂಬರ್ ಫೈಟರ್ ಜೆಟ್ B-2 bomber ಹಾರಾಡಿದ್ದು, ಅದಕ್ಕೆಅಮೆರಿಕದ F-22 ರಾಪ್ಟರ್ ಫೈಟರ್‌ ಜೆಟ್‌ಗಳು ಸಾಥ್ ನೀಡಿದವು. ಇದು ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ರಷ್ಯಾ ಅಧ್ಯಕ್ಷರ ಆಗಮನದ ವೇಳೆ ಯುದ್ಧ ವಿಮಾನಗಳು ಹಾರಾಡಿರುವ ಕುರಿತು ಮಾಹಿತಿ ನೀಡಿರುವ ಅಮೆರಿಕ ಇದು ಅತಿಥಿಗಳಿಗೆ ಅಮೆರಿಕದ ಸೇನಾ ಗೌರವ ಎಂದು ಹೇಳಿಕೊಂಡಿದೆ.

ಅಮೆರಿಕದ ಈ ನಡೆ ಜಗತ್ತಿನಾದ್ಯಂತ ವ್ಯಾಪಕ ಪರ-ವಿರೋಧ ಟೀಕೆಗಳಿಗೆ ಕಾರಣವಾಗಿದೆ. ಅಮೆರಿಕದ ಈ ನಡೆಯನ್ನು ಟೀಕಿಸಿರುವ ನೆಟ್ಟಿಗರು ಸದಾಕಾಲ ಆತಂಕದಲ್ಲೇ ಸಮಯ ಕಳೆಯುವ ಅಮೆರಿಕ ಪುಟಿನ್ ಭೇಟಿ ಸಂದರ್ಭದಲ್ಲೂ ತನ್ನ ಭಯವನ್ನು ಜಗಜ್ಜಾಹೀರು ಮಾಡಿದೆ.

ಬಿ2 ಬಾಂಬರ್ ಹಾರಿಸುವ ಮೂಲಕ ತಾನೆಷ್ಟು ಅಸುರಕ್ಷತೆ ಅನುಭವಿಸುತ್ತಿದೆ ಎಂಬುದನ್ನು ತೋರಿಸಿದೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

Gold Rate ಬಂಗಾರ ಪ್ರಿಯರಿಗೆ ಹಬ್ಬ: ಚಿನ್ನದ ಬೆಲೆ ಕುಸಿತ – ಖರೀದಿಗಿದು ಒಳ್ಳೆ ಸಮಯ!

TAGGED:American fighter jet B-2 bomber flies over Trump-Putin during talks!
Share This Article
Facebook Twitter Copy Link Print
Previous Article Pavithra Gowda: ಪ್ರತಿ ಕಥೆಯ ಸತ್ಯ ತಿಳಿಯುತ್ತದೆ – ಪವಿತ್ರಾ ಗೌಡ ಅರೆಸ್ಟ್ ಬೆನ್ನಲ್ಲೇ ಮಗಳ ಮೊದಲ ಪೋಸ್ಟ್
Next Article ಬೆಳಗಾವಿಯಲ್ಲಿ ಸ್ಟಾರ್ ಏರ್ ವಿಮಾನ ತುರ್ತು ಭೂ ಸ್ಪರ್ಶ!

Popular Posts

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

You Might Also Like

ಕರ್ನಾಟಕಪ್ರಮುಖ

Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!

2 Min Read
ಕರ್ನಾಟಕಪ್ರಮುಖ

Heart attack ಹೃದಯಾಘಾತದಿಂದ ಶಾಲೆಯಲ್ಲೇ ಉಸಿರು ಚೆಲ್ಲಿದ ಒಂದನೇ ತರಗತಿ ಬಾಲಕ!

2 Min Read
ದೇಶಪ್ರಮುಖ

ಎಥೆನಾಲ್‌ ಬಳಕೆಗೆ ಕೇಂದ್ರ ಅನುಮೋದನೆ, ಇನ್ಮುಂದೆ ಪೆಟ್ರೋಲ್ ಸಿಗಲ್ವಾ?

1 Min Read
ಪ್ರಮುಖಲೈಫ್‌ಸ್ಟೈಲ್

Kitchen Tips 5 ಆಹಾರಗಳನ್ನು ಎಂದಿಗೂ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬೇಡಿ; ಬೇಯಿಸಿದರೆ ಕಷ್ಟವೋ ಕಷ್ಟ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?