Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > KN Rajanna ವಜಾ ಹಿಂದಿದೆ ದೊಡ್ಡ ಷಡ್ಯಂತ್ರ: ಮಾಜಿ ಸಚಿವ ರಾಜಣ್ಣ ಹೇಳಿಕೆ
ಕರ್ನಾಟಕದೇಶಪ್ರಮುಖ

KN Rajanna ವಜಾ ಹಿಂದಿದೆ ದೊಡ್ಡ ಷಡ್ಯಂತ್ರ: ಮಾಜಿ ಸಚಿವ ರಾಜಣ್ಣ ಹೇಳಿಕೆ

Share
1 Min Read
SHARE

newsics.com

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಸಂಪುಟದಿಂದ ಕೆಎನ್ ರಾಜಣ್ಣ ವಜಾಗೊಂಡ ಬಳಿಕ ಮೊದಲ ಪ್ರತಿಕ್ರಿಯೆ ನೀಡಿದ್ದು, ತಮ್ಮ ವಜಾ ಹಿಂದೆ ದೊಡ್ಡ ಷಡ್ಯಂತ್ರ ಆಗಿದೆ ಎಂದು ಹೇಳಿದ್ದಾರೆ.

ಮತಕಳವು ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಭಿಯಾನದ ವಿರುದ್ಧ ಹೇಳಿಕೆ ಕೊಟ್ಟ ಕೆಎನ್ ರಾಜಣ್ಣ ತಲೆ ದಂಡ ಆಗಿದ್ದು, ಸಂಪುಟದಿಂದ ಕೆಎನ್ ರಾಜಣ್ಣ ಅವರನ್ನು ವಜಾ ಮಾಡಲಾಗಿದೆ. ಈ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದು ವ್ಯಾಪಕ ರಾಜಕೀಯ ಚರ್ಚೆಗೆ ಕಾರಣವಾಗಿದೆ.

ಇನ್ನು ತಮ್ಮ ವಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕೆಎನ್ ರಾಜಣ್ಣ ಪ್ರತಿಕ್ರಿಯೆ ನೀಡಿದ್ದು, ‘ನಿಮ್ಮ ಮುಂದೆ ಮಾಜಿ ಸಚಿವನಾಗಿ ಮಾತಾಡುತ್ತಿದ್ದೇನೆ. ಆದರೆ ನನ್ನ ವಜಾ ಹಿಂದೆ ಅತೀ ದೊಡ್ಡ ಷಡ್ಯಂತ್ರ ಅಡಗಿದೆ. ಈ ಪಿತೂರಿ, ಷಡ್ಯಂತ್ರದ ಹಿಂದೆ ಯಾರೆಲ್ಲಾ ಇದ್ದಾರೆ, ಏನು ಮಾಡಿದ್ದಾರೆ ಅನ್ನೋದು ಗೊತ್ತು‌. ನನ್ನ ಬಳಿ ಇರುವ ಈ ಷಡ್ಯಂತ್ರ ವಿವರಗಳನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ. ರಾಜ್ಯಪಾಲರ ಕಚೇರಿಯಿಂದ ವಜಾಗೊಳಿಸಿರುವ ಡ್ರಾಫ್ಟ್ ಬಂದಿರುವ ಮಾಹಿತಿ ಇದೆ. ಇದು ಹೈಕಮಾಂಡ್ ನಿರ್ಧಾರವಾಗಿದೆ. ಪಕ್ಷ ತೆಗೆದುಕೊಂಡ ನಿರ್ಧಾರಕ್ಕೆ ಬದ್ಧನಾಗಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ.
ಮಾಜಿ ಸಚಿವ ಎಂದು ಕರೆಸಿಕೊಳ್ಳುವುದಕ್ಕೆ ನನಗೆ ಸಂತೋಷವಾಗುತ್ತಿದೆ. ನನಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವಕಾಶ ಕೊಟ್ಟಿದ್ದರು ಎಂದು ಕೆಎನ್ ರಾಜಣ್ಣ ಹೇಳಿದ್ದಾರೆ.
ನನ್ನ ಹೇಳಿಕೆ, ನನ್ನ ಬಗ್ಗೆ ರಾಹುಲ್ ಗಾಂಧಿಗೆ ತಪ್ಪು ಗ್ರಹಿಕೆ ಆಗಿದೆ. ಆಗಿರುವ ತಪ್ಪು ಗ್ರಹಿಕೆಯನ್ನು ನಿವಾರಿಸುವ ಪ್ರಯತ್ನ ಮಾಡುತ್ತೇನೆ. ನಾನೇ ಖುದ್ದು ದೆಹಲಿಗೆ ತೆರಳಿ ರಾಹುಲ್ ಗಾಂಧಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡುತ್ತೇನೆ. ಸದ್ಯ ಏನೇ ಮಾತನಾಡಿದರೂ ತಪ್ಪು ಸಂದೇಶ ಹೋಗಬಾರದು. ನಾವು ಪಕ್ಷಕ್ಕೆ ಬದ್ಧರಾಗಿದ್ದೇವೆ. ರಾಹುಲ್ ಗಾಂಧಿ ನಮ್ಮ ನಾಯಕರು ಎಂದು ಕೆಎನ್ ರಾಜಣ್ಣ ಹೇಳಿದ್ದಾರೆ.

ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಗೋ ಶಾಲೆಯಲ್ಲಿ ಬೆಂಕಿ ಅವಘಡ

TAGGED:There is a big conspiracy behind the dismissal: Former Minister Rajanna's statement
Share This Article
Facebook Twitter Copy Link Print
Previous Article ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಗೋ ಶಾಲೆಯಲ್ಲಿ ಬೆಂಕಿ ಅವಘಡ
Next Article Selfie with elephant ಕಾಡಾನೆ ಜತೆ ಸೆಲ್ಫಿ: ಪಾರಾದ ವ್ಯಕ್ತಿಗೆ 25 ಸಾವಿರ ರೂ. ದಂಡ!

Popular Posts

ಬೆಂಗಳೂರಿನ ನಿರ್ಜನ ಹೆದ್ದಾರಿಯಲ್ಲಿ ಅರ್ಧರಾತ್ರಿ ಪ್ರತ್ಯಕ್ಷವಾದ ಆ ಮಗು! ಮುಂದೇನಾಯ್ತು?

2 Min Read

ಸುಲಭ ಹಣದ ಆಸೆಗೆ ಬಿದ್ದು ನಿಮ್ಮ ಬ್ಯಾಂಕ್ ಖಾತೆಯನ್ನು ಇತರರಿಗೆ ನೀಡುತ್ತಿದ್ದೀರಾ? ಹಾಗಾದರೆ ಎಚ್ಚರ!

1 Min Read

ಹೆಲ್ತಿ ಜಾಹೀರಾತುಗಳಿಗೆ ಬ್ರೇಕ್: 8 ಪ್ರಮುಖ ಫುಡ್ ಬ್ರ್ಯಾಂಡ್‌ಗಳಿಗೆ ಎಫ್‌ಎಸ್‌ಎಸ್‌ಎಐ ಶಾಕ್!

2 Min Read

ಗುಟ್ಟಾಗಿಯೇ ಮದ್ವೆ, ಸಂಸಾರ… ಆದ್ರೂ ಯುವತಿ ಹೆಣ ಉರುಳಿಸಿದ ಪ್ರಿಯಕರ! ಏನು ಕಾರಣ?

2 Min Read

You Might Also Like

ಕರ್ನಾಟಕಪ್ರಮುಖ

Gruhalakshmi Scheme ಗೃಹಲಕ್ಷ್ಮಿ, ಗೃಹಜ್ಯೋತಿಗೆ ಹೊಸ ಅರ್ಜಿ ಸಲ್ಲಿಸೋದು ಹೇಗೆ? ಯಾವ ದಾಖಲೆಗಳನ್ನ ಕೊಡ್ಬೇಕು?

2 Min Read
ಕರ್ನಾಟಕಪ್ರಮುಖ

ಮೂರು ತಿಂಗಳ ಮಗು, ಪತ್ನಿಗೆ ವಿಷ ಕುಡಿಸಿ ವ್ಯಕ್ತಿ ಆತ್ಮಹ*ತ್ಯೆ

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Tanisha Kuppanda ಬಿಗ್‌ ಬಾಸ್‌ನ ತನಿಷಾ‌ ಕುಪ್ಪಂಡಗೆ ಬಾಡಿ ಶೇಮಿಂಗ್

1 Min Read
ಕರ್ನಾಟಕದೇಶಪ್ರಮುಖ

Sexual assault on a girl! ಈ ಯುವತಿಗೆ ಪುರುಷರಾರೂ ಸಿಗಲಿಲ್ವಾ? 12ರ ಬಾಲಕಿ‌ಗೆ ಲೈಂಗಿಕ ದೌರ್ಜನ್ಯ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?