newsics.com
ಮಂಗಳೂರು: ಧರ್ಮಸ್ಥಳದಲ್ಲಿ ರಹಸ್ಯವಾಗಿ ಹೂತಿಟ್ಟಿದ್ದಾರೆ ಎನ್ನಲಾದ ತಲೆ ಬುರುಡೆ ಕೇಸ್‌ನ ತನಿಖೆ ಚುರುಕಾಗಿದೆ. ನೇತ್ರಾವತಿ ಘಾಟ್ ಬಳಿಯ ಕಾಡುಪ್ರದೇಶದಲ್ಲಿ ದೂರುದಾರ ತೋರಿಸಿದ ಪಾಯಿಂಟ್‌ಗಳಲ್ಲಿ ವಿಶೇಷ ತನಿಖಾ ತಂಡ (SIT) ಹುಡುಕಾಟ ಚುರುಕುಗೊಳಿಸಿದೆ. ಈಗಾಗಲೇ ದೂರುದಾರ ತೋರಿಸಿದ 13 ಪಾಯಿಂಟ್‌ಗಳ ಪೈಕಿ 10 ಪಾಯಿಂಟ್‌ಗಳಲ್ಲಿ ಎಸ್‌ಐಟಿ ತಂಡ ಉತ್ಖನನ ಕಾರ್ಯ ನಡೆಸಿದೆ. ಇದರಲ್ಲಿ ಪಾಯಿಂಟ್ ನಂಬರ್ 6 ರಲ್ಲಿ ಮಾನವನ ಮೂಳೆ ರೀತಿಯ ವಸ್ತುವನ್ನು ಪತ್ತೆ ಮಾಡಲಾಗಿದೆ.
ಐದು ದಿನಗಳಿಂದ ನಡೆದ ಈ ಕಾರ್ಯಾಚರಣೆಗೆ ಎಸ್‌ಐಟಿ ಎಷ್ಟು ರೂಪಾಯಿ ಖರ್ಚು ಮಾಡ್ತಿದೆ ಎಂಬ ಪ್ರಶ್ನೆ ಸದ್ಯ ಹುಟ್ಟಿಕೊಂಡಿದೆ. SIT ದಿನದ ಅಂದಾಜು ಖರ್ಚು ಬರೋಬ್ಬರಿ 1.50 ಲಕ್ಷ ರೂಪಾಯಿ ಆಗಿದೆ.
ಯಾವುದಕ್ಕೆ ಎಷ್ಟು ಖರ್ಚು..?
ಅಧಿಕಾರಿಗಳ ಊಟ, ತಿಂಡಿ, ವಿಶ್ರಾಂತಿಗಾಗಿ ಲಾಡ್ಜ್ ವೆಚ್ಚ (ದಿನಕ್ಕೆ 10 ಸಾವಿರ)
ಗುಂಡಿ ಅಗೆಯುವವರಿಗೆ ಒಬ್ಬೊಬ್ಬರಿಗೂ ದಿನಗೂಲಿ 2 ಸಾವಿರ ರೂ. (15 ಜನ) ದಿನಕ್ಕೆ 30 ಸಾವಿರ
ಪೊಲೀಸ್, ವೈದ್ಯರ ಓಡಾಟಕ್ಕೆ ವಾಹನ, ಪೆಟ್ರೋಲ್ ಬಳಕೆ ಖರ್ಚು (20 ಸಾವಿರ)
SIT ಕಚೇರಿಗೆ ಹೊಸ ಕಂಪ್ಯೂಟರ್, ಕುರ್ಚಿ, ಪ್ರಿಂಟರ್.. ಇತ್ಯಾದಿ ವೆಚ್ಚ
( 3 ಪ್ರಿಂಟರ್, 5 ಕಂಪ್ಯೂಟರ್, 20 ಕುರ್ಚಿ, ಇತ್ಯಾದಿ ಸೇರಿ 40 ಸಾವಿರ)
ಫೊರೆನ್ಸಿಕ್ ವೈದ್ಯರ ತಂಡಕ್ಕಾಗಿ ವಿಶೇಷ ಉಪಕರಣಗಳ ಬಳಕೆ ವೆಚ್ಚ (ದಿನಕ್ಕೆ 3 ರಿಂದ 4 ಸಾವಿರ)
SIT ಟೀಂ ಜೊತೆ ಇರುವ ಒಟ್ಟಾರೆ ತಂಡಕ್ಕೆ 3 ಹೊತ್ತು ಊಟ, ತಿಂಡಿ (10 ಸಾವಿರ)
ಗುಂಡಿ ಸಿಕ್ಕ ಕಡೆ ನಿರ್ಮಿಸುವ ತಾತ್ಕಾಲಿಕ ಟೆಂಟ್ಗಳ ವೆಚ್ಚ (ದಿನಕ್ಕೆ 3 ರಿಂದ 4 ಸಾವಿರ)
ಒಟ್ಟು ಅಂದಾಜು ದಿನದ ಖರ್ಚು ಒಂದು ಲಕ್ಷದ ಐವತ್ತು ಸಾವಿರ ರೂಪಾಯಿ