newsics.com
ವೀಳ್ಯದೆಲೆಯು ಪ್ರಾಚೀನ ಭಾರತೀಯ ಗಿಡಮೂಲಿಕೆಗಳಲ್ಲಿ ಒಂದಾಗಿದೆ. ಭಾರತೀಯ ರಾಜರು ಮತ್ತು ಶ್ರೀಮಂತರು ಹೆಚ್ಚಾಗಿ ವೀಳ್ಯದ ಎಲೆಗಳನ್ನು ಅಗಿಯುತ್ತಿದ್ದರು ಎಂದು ಯುರೋಪಿಯನ್ ಪರಿಶೋಧಕ ಮಾರ್ಕೊ ಪೋಲೊ ವರದಿ ಮಾಡಿದ್ದಾರೆ. ಈ ವೀಳ್ಯದೆಲೆ ಉತ್ತಮ ಔಷಧಿಗುಣಗಳನ್ನು ಹೊಂದಿದೆ.
ವೀಳ್ಯದೆಲೆ ನೋವು ನಿವಾರಕ ಅಂತ ಅನೇಕರಿಗೆ ಗೊತ್ತಿಲ್ಲ. ಆಯುರ್ವೇದದಲ್ಲಿ ವೀಳ್ಯದೆಲೆನಿಂದ ಎಣ್ಣೆ ತಯಾರಿಸ್ತಾರೆ. ಸಣ್ಣಪುಟ್ಟ ಗಾಯ, ಊತಗಳಿಗೆ ತಮಲಪಾಕು ರಸ ಹಚ್ಚಿದ್ರೆ ಬೇಗ ರಿಲೀಫ್ ಸಿಗುತ್ತೆ.
ಪುಡಿಮಾಡಿದ ವೀಳ್ಯದೆಲೆಯ ಪೇಸ್ಟ್ ಅನ್ನು ಹಚ್ಚುವುದರಿಂದ ಶಿಲೀಂಧ್ರಗಳ ಸೋಂಕಿನಿಂದ ತ್ವರಿತ ಪರಿಹಾರ ದೊರೆಯುತ್ತದೆ.ವೀಳ್ಯದೆಲೆಗಳು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಕೂದಲು ಉದುರುವಿಕೆಯಂತಹ ಸಮಸ್ಯೆಗಳಿಗೆ ವೀಳ್ಯದ ಎಲೆ ಬಳಸಲು ಆಯುರ್ವೇದ ಕೂಡ ಶಿಫಾರಸ್ಸು ಮಾಡುತ್ತದೆ. ಎಳ್ಳು ಅಥವಾ ತೆಂಗಿನ ಎಣ್ಣೆಯಿಂದ ವೀಳ್ಯದ ಎಲೆಯನ್ನು ರುಬ್ಬಿ, ಆ ಪೇಸ್ಟ್ ಅನ್ನು ನೆತ್ತಿಗೆ, ಕೂದಲಿನ ಬುಡಕ್ಕೆ ಹಚ್ಚಿ. ಕನಿಷ್ಠ ಒಂದು ಗಂಟೆಯಾದರೂ ಬಿಡಿ. ನಂತರ ಶಾಂಪೂವಿನಿಂದ ತೊಳೆಯಿರಿ.
ವೀಳ್ಯದ ಎಲೆಗಳು ನೋವು ನಿವಾರಕ ಮತ್ತು ತಂಪಾಗಿಸುವ ಪರಿಣಾಮವನ್ನು ಹೊಂದಿವೆ. ವಿಶೇಷವಾಗಿ ತಲೆನೋವನ್ನು ಕಡಿಮೆ ಮಾಡಲು ಇದನ್ನು ಬಳಸಬಹುದು. ನೀವು ವೀಳ್ಯದ ಎಲೆಯನ್ನು ಪುಡಿಮಾಡಿ, ರಸವನ್ನು ಹೊರತೆಗೆದು, ತಲೆನೋವು ಇರುವ ಪ್ರದೇಶಕ್ಕೆ ಹಚ್ಚಬಹುದು.
ಮುಖದ ಮೇಲಿರುವ ಮೊಡವೆಗಳನ್ನು ಸುಲಭವಾಗಿ ತೆಗೆದುಹಾಕಲು ವೀಳ್ಯದ ಎಲೆ ಬಳಸಲಾಗುತ್ತದೆ. ಮುಖವನ್ನು ವೀಳ್ಯದ ಎಲೆ ಕಷಾಯದಿಂದ ತೊಳೆಯುವುದರಿಂದ ಅಥವಾ ವೀಳ್ಯದ ಎಲೆಗಳು ಮತ್ತು ಅರಿಶಿನದ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿಕೊಂಡು ಒಣಗಿದ ನಂತರ ತೊಳೆಯುವುದರಿಂದ ತ್ವಚೆ ಕಲೆ ಮುಕ್ತವಾಗುವುದಲ್ಲದೆ, ಮೊಡವೆಗಳು ನಿವಾರಣೆಯಾಗುತ್ತವೆ
ವೀಳ್ಯದೆಲೆಗಳನ್ನು ಅಗಿಯುವುದರಿಂದ ಬಾಯಿಯ ದುರ್ವಾಸನೆ ಕಡಿಮೆಯಾಗುತ್ತದೆ. ಇದು ಬಾಯಿಯಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುತ್ತದೆ.
https://www.newsics.com/2025/07/31/collision-between-autorickshaw-and-truck/