newsics.com
ಧರ್ಮಸ್ಥಳ: ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ ಸಂಬಂಧ ಸತತ ನಾಲ್ಕನೆ ದಿನವೂ ಶೋಧ ಕಾರ್ಯ ಮುಂದುವರಿದಿದೆ.
ಬುಧವಾರ ಸೈಟ್ ನಂ.1ರಲ್ಲಿ ಮಹತ್ವದ ಕುರುಹುಗಳು ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.
ಧರ್ಮಸ್ಥಳದ ಸೈಟ್ ನಂ.1ರಲ್ಲಿ ಶೋಧ ಕಾರ್ಯವನ್ನು ಎಸ್‌ಐಟಿ ಅಧಿಕಾರಿಗಳ ತಂಡ ಮುಂದುವರಿಸಿದೆ.
ಸೈಟ್ ನಂ.1ರಲ್ಲಿ 2.5 ಅಡಿ ಆಳದಲ್ಲಿ ಹರಿದ ಕೆಂಪು ರವಿಕೆ, ಪಾನ್ ಕಾರ್ಡ್, ಎಟಿಎಂ ಕಾರ್ಡ್ ಪತ್ತೆಯಾಗಿವೆ.
ಸೈಟ್ ನಂ.1ರಲ್ಲಿ ಪತ್ತೆಯಾಗಿರುವ ಎಟಿಎಂ ಕಾರ್ಡ್ ನಲ್ಲಿ ಪುರುಷನ ಹೆಸರು ನಮೂದಾಗಿದ್ದರೆ, ಲಕ್ಷ್ಮೀ ಎಂಬ ಹೆಸರಿನ ಮಹಿಳೆಯ ಪ್ಯಾನ್ ಕಾರ್ಡ್ ಕೂಡ ಪತ್ತೆಯಾಗಿದೆ. ಒಂದು ಬ್ಯಾಗ್ ಕೂಡ ಪತ್ತೆಯಾಗಿರುವ ಬಗ್ಗೆ ಎಸ್‌ಐಟಿಯ ಮೂಲಗಳು ಹೇಳಿವೆ.
ಸೈಟ್ ನಂ.1ರಲ್ಲಿ ಇಷ್ಟೆಲ್ಲಾ ವಸ್ತುಗಳು ಪತ್ತೆಯಾಗಿರುವುದನ್ನು ಎಸ್‌ಐಟಿ ಕೂಡ ದೃಢಪಡಿಸಿದೆ. ಆ ಮೂಲಕ ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಂತಾಗಿದೆಯಾದರೂ ಅಂತಿಮ ನಿರ್ಧಾರಕ್ಕೆ ಬರಲು ಇನ್ನೂ ಸಾಧ್ಯವಾಗಿಲ್ಲ.