Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ತಿರುಪತಿ ತಿಮ್ಮಪ್ಪನಿಗೆ 3 ಕೋಟಿ ಮೌಲ್ಯದ ಮನೆ, 66 ಲಕ್ಷ ರೂ. ಹಸ್ತಾಂತರ ಮಾಡಿದ ನಿವೃತ್ತ ಅಧಿಕಾರಿ!
ದೇಶ

ತಿರುಪತಿ ತಿಮ್ಮಪ್ಪನಿಗೆ 3 ಕೋಟಿ ಮೌಲ್ಯದ ಮನೆ, 66 ಲಕ್ಷ ರೂ. ಹಸ್ತಾಂತರ ಮಾಡಿದ ನಿವೃತ್ತ ಅಧಿಕಾರಿ!

Share
2 Min Read
SHARE
newsics.com
ತಿರುಪತಿ ತಿಮ್ಮಪ್ಪನಿಗೆ ಭಕ್ತರು ಭಾರೀ ಕಾಣಿಕೆಯನ್ನು ಆರ್ಪಿಸಿದ್ದಾರೆ. ಹೈದರಾಬಾದ್ ಮೂಲದ ಟ್ರಿನಿಟಿ ಕಂಬೈನ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆ ಬರೋಬ್ಬರಿ ಎರಡು ಕೋಟಿ ರೂಪಾಯಿ ಕಾಣಿಕೆ ನೀಡಿದೆ.

ಟಿಟಿಡಿ (TTD) ಶ್ರೀ ವೆಂಕಟೇಶ್ವರ ಅನ್ನ ಪ್ರಸಾದ ಟ್ರಸ್ಟ್ ಗೆ ಕಾಣಿಕೆಯನ್ನು ಸಲ್ಲಿಸಿದೆ. ತಿರುಮಲದಲ್ಲಿರುವ ರಂಗನಾಯಕುಲ ಮಂಡಪದಲ್ಲಿ ಸಂಸ್ಥೆಯ ಪ್ರತಿನಿಧಿಗಳು ಟಿಟಿಡಿ ಹೆಚ್ಚು ಇವೋ ಸಿಎಚ್ ವೆಂಕಯ್ಯ ಚೌಧರಿ ಅವರಿಗೆ ಎರಡು ಕೋಟಿ ರೂಪಾಯಿ ಮೌಲ್ಯದ ಡಿಡಿಯನ್ನು ಹಸ್ತಾಂತರ ಮಾಡಿದ್ದಾರೆ.

ಹೈದರಾಬಾದ್ ಮೂಲದ ಐಆರ್‌ಎಸ್ ಅಧಿಕಾರಿ ದಿವಂಗತ ವೈವಿಎಸ್ಎಸ್ ಭಾಸ್ಕರ್ ರಾವ್ ಅವರು ತಮ್ಮ ಆಸ್ತಿಯನ್ನು ತಿರುಮಲ ತಿಮ್ಮಪ್ಪನಿಗೆ ಕಾಣಿಕೆಯಾಗಿ ನೀಡಿದ್ದಾರೆ.

ಭಾಸ್ಕರ್ ರಾವ್ ಅವರು ಮೂರು ಕೋಟಿ ರೂಪಾಯಿ ಮೌಲ್ಯದ ತಮ್ಮ ನಿವಾಸ ಹಾಗೂ 66 ಲಕ್ಷ ರೂಪಾಯಿ ನಗದು ಹಣವನ್ನು ಟಿಟಿಡಿಗೆ ಹಸ್ತಾಂತರ ಮಾಡಿದ್ದಾರೆ. ಆ ಮೂಲಕ ತಮ್ಮ ಮರಣದ ನಂತರವೂ ಶ್ರೀವೆಂಕಟೇಶ್ವರ ಸ್ವಾಮಿ ಮೇಲಿರುವ ಭಕ್ತಿಯನ್ನು ತೋರಿಸಿದ್ದಾರೆ.
ಭಾಸ್ಕರ್ ಅವರಿಗೆ ಹೈದರಾಬಾದ್ ನ ವನಸ್ಥಲಿಪುರಂ ಬಳಿ ಆನಂದ ನಿಲಯ ಎಂಬ ನಿವಾಸ ಇದ್ದು, 3500 ಚದರ ಅಡಿಯ ನಿವಾಸವನ್ನು ಆಧ್ಯಾತ್ಮಿಕ ಕಾರ್ಯಕ್ರಮಗಳಿಗೆ ಉಪಯೋಗವಾಗುವಂತೆ ಬಳಸಿಕೊಳ್ಳಲು ಅವರು ಮನವಿ ಮಾಡಿದ್ದಾರೆ. ಈ ಮಾಹಿತಿಯನ್ನು ಮೃತರು ತಮ್ಮ ವಿಲ್ ನಲ್ಲಿ ಬರೆದು ತಿಳಿಸಿದ್ದಾರೆ. ಅಷ್ಟೇ ಅಲ್ಲ, ತಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಟ್ರಸ್ಟ್ ಗೆ ದೇಣಿಗೆಯಾಗಿ ನೀಡಬೇಕು ಎಂದು ನಿರ್ಣಯ ಮಾಡಿ, ಶ್ರೀ ವೆಂಕಟೇಶ್ವರ ಅನ್ನಪ್ರಸಾದಂ ಟ್ರಸ್ಟ್ ಗೆ 36 ಲಕ್ಷ ರೂಪಾಯಿ, ಶ್ರೀ ವೆಂಕಟೇಶ್ವರ ಸರ್ವ ಶ್ರೇಯಾಸ್ ಟ್ರಸ್ಟ್ ಗೆ 6 ಲಕ್ಷ ರೂಪಾಯಿ, ಶ್ರೀ ವೆಂಕಟೇಶ್ವರ ವಿದ್ಯಾದಾನ ಟ್ರಸ್ಟ್ ಗೆ 6 ಲಕ್ಷ ರೂಪಾಯಿ, ಶ್ರೀ ವಾಣಿ ಟ್ರಸ್ಟ್ ಗೆ 6 ಲಕ್ಷ ರೂಪಾಯಿಗಳನ್ನು ದೇಣಿಯಾಗಿ ನೀಡುವಂತೆ ವಿಲ್ ನಲ್ಲಿ ತಿಳಿಸಿದ್ದಾರೆ.
ಭಾಸ್ಕರ್ ರಾವ್ ಅವರು ಶ್ರೀ ವೆಂಕಟೇಶ್ವರ ಸ್ವಾಮಿಯ ಸೇವೆಯನ್ನು ಮಾಡಲು ಮನವಿ ಮಾಡಿದ್ದು, ತಿರುಮಲ ಶ್ರೀವಾರಿ ಆಲಯದ ರಂಗನಾಯಕುಲ ಮಂಡಪದಲ್ಲಿ, ರಾವ್ ಅವರ ಕೋರಿಕೆಯಂತೆ ಟ್ರಸ್ಟಿ ಎಂ ದೇವರಾಜ್ ರೆಡ್ಡಿ, ಸತ್ಯನಾರಾಯಣ, ಬಿ ಲೋಕನಾಥ್ ಅವರು ಆಸ್ತಿ ಪತ್ರಗಳನ್ನು ಟಿಟಿಡಿಯ ಇವೋ ಸಿಎಚ್ ವೆಂಕಯ್ಯ ಚೌಧರಿ ಅವರಿಗೆ ಹಸ್ತಾಂತರ ಮಾಡಿದ್ದಾರೆ. ಇದೇ ವೇಳೆ ಟಿಟಿಡಿಯ ಇವೋ ಅವರು ಭಾಸ್ಕರ್ ರಾವ್ ಅವರು ಟ್ರಸ್ಟ್ ಸದಸ್ಯರನ್ನು ಸನ್ಮಾನ ಮಾಡಿ ಗೌರವಿಸಿದ್ದಾರೆ.
ಅಲ್ಲದೆ, ತಿರುಪತಿ ಮೂಲದ ಎಲ್ವಿ ಲಾಜಿಸ್ಟಿಕ್ಸ್ ಪ್ರೇವೆಟ್ ಲಿಮಿಟೆಡ್ ಸಂಸ್ಥೆ ಅಧ್ಯಕ್ಷರಾದ ಪಿಸಿ ರಾಯಲ್ ಅವರು ಶ್ರೀ ವೆಂಕಟೇಶ್ವರ ಅನ್ನ ಪ್ರಸಾದಕ್ಕೆ 10 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ಬೆಂಗಳೂರು ಮೂಲದ ಸುಕುಮಾರ್ ಅವರು ಶ್ರೀ ಬಾಲಾಜಿ ಆರೋಗ್ಯ ವರ ಪ್ರಸಾದ ಯೋಜನೆಗೆ 10 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ದೇಣಿಗೆ ನೀಡಿದ ಭಕ್ತರನ್ನು ಟಿಟಿಡಿ ಇವೋ ಅವರು ಸನ್ಮಾನ ಮಾಡಿ ಗೌರವಿಸಿದ್ದಾರೆ.

https://www.newsics.com/2025/07/28/firoz-chuttipara-a-famous-vlogger-says-goodbye-to-youtube-despite-earning-lakhs-of-rupees-what-is-the-reason/

TAGGED:Retired employee hands over house worth Rs 3 crore to Tirumala Thimmappa
Share This Article
Facebook Twitter Copy Link Print
Previous Article ಸೀರೆಯುಟ್ಟು ಪೊಲೀಸ್ ಅಧಿಕಾರಿ ಎದುರು ಯುವಕನ ಅಶ್ಲೀಲ ನೃತ್ಯ; ವೈರಲ್ ವಿಡಿಯೋ ನೋಡಿ
Next Article ಕೆಟ್ಟ ಕಮೆಂಟ್ ಮಾಡ್ತಾರೆಂದು 30 ಲಕ್ಷ ಜನರನ್ನು ಬ್ಲಾಕ್ ಮಾಡಿದ್ರಂತೆ ಈ ನಟಿ! ಟ್ರೋಲ್ ಆಗಿದ್ದೇಕೆ?

Popular Posts

Rain Rain ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ವ್ಯಾಪಕ ಮಳೆ: ಈ ಜಿಲ್ಲೆಯಲ್ಲಿಂದು ಶಾಲಾ ಕಾಲೇಜಿಗೆ ರಜೆ ಘೋಷಣೆ

2 Min Read

AI and Agri ಹೊಲ- ಗದ್ದೆಗಳಲ್ಲೂ ರೋಬೋಟ್‌ಗಳದ್ದೇ ದರ್ಬಾರಾಗುತ್ತಾ? ಎಕ್ಸ್‌ನಲ್ಲಿ ಟ್ರೆಂಡ್ ಆಗ್ತಿದೆ ಎಐ ಕೃಷಿ ಯಂತ್ರ!

1 Min Read

Ind vs Zim ಟೀಮ್ ಇಂಡಿಯಾದಲ್ಲಿ ಭಾರೀ ಸರ್ಜರಿ! 6 ಮಂದಿ ಔಟ್‌, ಯಾರೆಲ್ಲ ಸೇರಿದ್ರು?

2 Min Read

Relationship- Personal Health ಗಂಡಸರಲ್ಲಿ ಪುರುಷತ್ವ ತೀವ್ರ ಕುಸಿತ! ಟೆಸ್ಟೋಸ್ಟೆರಾನ್ ಥೆರಪಿಗೆ ಹೆಚ್ಚುತ್ತಿದೆ ಬೇಡಿಕೆ, ಯಾಕೆ ಹೀಗೆ?

3 Min Read

You Might Also Like

ಪ್ರಮುಖದೇಶ

Smriti Mandhana ಎಲ್‌ಎಸ್‌ಜಿ ಜರ್ಸಿಯಲ್ಲಿ ಆರ್‌ಸಿಬಿ ನಾಯಕಿ? ಸ್ಮೃತಿ ಮಂದಾನಾ ಹೊಸ ಫೋಟೋ ವೈರಲ್‌

1 Min Read
ಪ್ರಮುಖದೇಶಮನರಂಜನೆ

Spider-Man: Brand New Day ಅಡ್ವಾನ್ಸ್ ಬುಕ್ಕಿಂಗ್‌ನಲ್ಲಿ ಹೊಸ ದಾಖಲೆ ಬರೆದ ‘ಸ್ಪೈಡರ್‌ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’

1 Min Read
ಕರ್ನಾಟಕದೇಶಪ್ರಮುಖ

Malvan launched ಕಾರವಾರದಲ್ಲಿ ಐಎನ್‌ಎಸ್ ಮಾಲ್ವಣ್ ಲೋಕಾರ್ಪಣೆ, ಹೇಗಿದೆ ಯುದ್ಧನೌಕೆ?

1 Min Read
ಪ್ರಮುಖದೇಶ

DMRC Alert 16 ಪ್ರಮುಖ ಮೆಟ್ರೋ ನಿಲ್ದಾಣಗಳು ಮುಂದಿನ ಆದೇಶದವರೆಗೆ ಬಂದ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?