newsics.com
ಮೈಸೂರು: ಶ್ರೀ ಚಾಮರಾಜೇಂದ್ರ ಮೃಗಾಲಯ ಹಾಗೂ ಕಾರಂಜಿಕೆರೆ ಪ್ರಕೃತಿ ಉದ್ಯಾನವನ ಪ್ರವೇಶ ಶುಲ್ಕದ (Fee) ದರ ಹೆಚ್ಚಳ ಮಾಡಲಾಗಿದ್ದು, ಆಗಸ್ಟ್ 1ರಿಂದ ಹೊಸ ದರ ಪ್ರವಾಸಿಗರು ಹಾಗೂ ಸ್ಥಳೀಯರಿಗೆ ನಿಗದಿಯಾಗಲಿದೆ.
ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯ ಹಾಗೂ ಕಾರಂಜಿಕೆರೆಯ ಪ್ರವೇಶ/ಇನ್ನಿತೆರೆ ಟಿಕೆಟ್ ದರಗಳನ್ನು ಸರಾಸರಿ 3 ರಿಂದ 4 ವರ್ಷಗಳ ಹಿಂದೆ ನಿಗದಿಪಡಿಸಿದ ದರಗಳಾಗಿದ್ದು. ಪ್ರಸ್ತುತ ಮೃಗಾಲಯದ ದೈನಂದಿನ ನಿರ್ವಹಣೆಯ ವೆಚ್ಚಗಳು ಹೆಚ್ಚಾಗಿವೆ.
ಅಲ್ಲದೇ ಇತ್ತೀಚಿನ ದಿನಗಳಲ್ಲಿ ವಿದೇಶಿ ಮೃಗಾಲಯದಿಂದ ವಿದೇಶಿ ಪ್ರಾಣಿಗಳಾದ ಗೊರಿಲ್ಲಾ, ಜಾಗ್ವಾರ್, ಆಫ್ರಿಕಾದ ಬೇಟೆ ಚಿರತೆ, ಇತ್ಯಾದಿ ಪ್ರಾಣಿಗಳು ಮೃಗಾಲಯದ ಪ್ರಾಣಿ ಸಂಗ್ರಹಣೆಗೆ ಸೇರ್ಪಡೆಗೊಂಡಿರುವುದರಿಂದ ಈ ಎಲ್ಲಾ ಪ್ರಾಣಿಗಳ ನಿರ್ವಹಣೆ ವೆಚ್ಚವು ಸಹ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮೃಗಾಲಯ ಹಾಗೂ ಕಾರಂಜಿಕೆರೆಯ ಪ್ರವೇಶ ಶುಲ್ಕದ ದರಗಳನ್ನು ಪರಿಷ್ಕರಣೆ ಮಾಡುವುದು ಸೂಕ್ತವೆಂಬ ಅಭಿಪ್ರಾಯವು ವ್ಯಕ್ತವಾಗಿರುವುದರಿಂದ ಜುಲೈ 10ರಂದು ನಡೆದ ಕರ್ನಾಟಕ ಮೃಗಾಲಯ ಪ್ರಾಧಿಕಾರದ 159ನೇ ಆಡಳಿತ ಮಂಡಳಿ ಸಭೆಯಲ್ಲಿ ಶೇ 20%ರಷ್ಟು ಹೆಚ್ಚಳ ಮಾಡಿ ದರಗಳನ್ನು ಪರಿಷ್ಕರಣೆ ಮಾಡಲು ಅನುಮೋದನೆ ನೀಡಲಾಗಿದೆ.
ಆಗಸ್ಟ್ 1 ರಿಂದ ಹೊಸ ದರ
ಈ ಹಿನ್ನೆಲೆಯಲ್ಲಿ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಸದಸ್ಯ ಕಾರ್ಯದರ್ಶಿಗಳು, ಕರ್ನಾಟಕ ಮೃಗಾಲಯ ಪ್ರಾಧಿಕಾರವು ಜು.10ರಂದು ನಡೆದ ಕರ್ನಾಟಕ ಮೃಗಾಲಯ ಪ್ರಾಧಿಕಾರದ 159ನೇ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಣಯಿಸಿರುವಂತೆ ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯ ಹಾಗೂ ಕಾರಂಜಿಕೆರೆ ಪ್ರಕೃತಿ ಉದ್ಯಾನವನದ ಪ್ರವೇಶಶುಲ್ಕ/ಇನ್ನಿತರೆ ದರಗಳನ್ನು ಆಗಸ್ಟ್ 1ರಿಂದ ಜಾರಿಗೆ ಬರುವಂತೆ ಈ ಪರಿಷ್ಕರಿಸಿ ಆದೇಶ ಹೊರಡಿಸಲಾಗಿದೆ
ವಯಸ್ಕರಿಗೆ – 120/-
ಮಕ್ಕಳಿಗೆ (5ರಿಂದ 12 ವರ್ಷ )-60/-
ಮೃಗಾಲಯ ಹಾಗೂ ಕಾರಂಜಿ ಕೆರೆ ಕಾಂಬೋ ವಯಸ್ಕರಿಗೆ – 150/-
ಮೃಗಾಲಯ ಹಾಗೂ ಕಾರಂಜಿಕೆರೆ ಕಾಂಬೋ ಮಕ್ಕಳಿಗೆ – 80/-
ಕಾರಂಜಿ ಕೆರೆಯ ವಯಸ್ಕರಿಗೆ – 60/-
ಕಾರಂಜಿ ಕೆರೆಯ ಮಕ್ಕಳಿಗೆ 5 ರಿಂದ 12 ವರ್ಷ -30/-
ಶಾಲೆ ಕಾಲೇಜು ವಿದ್ಯಾರ್ಥಿಗಳಿಗೆ ಈ ರೀತಿಯ ದರ
1) ಎಲ್ಕೆಜಿ ಯುಕೆಜಿ ಮಕ್ಕಳಿಗೆ ಉಚಿತ
2) ಒಂದರಿಂದ ಏಳನೇ ತರಗತಿಯ ವಿದ್ಯಾರ್ಥಿಗಳಿಗೆ -40/-
3) ಎಂಟರಿಂದ ಹನ್ನೆರಡನೇ ತರಗತಿಯ ವಿದ್ಯಾರ್ಥಿಗಳಿಗೆ – 50/-
4) 50 ವಿದ್ಯಾರ್ಥಿಗಳ ತಂಡ ಹಾಗೂ ಇಬ್ಬರು ಶಿಕ್ಷಕರಿಗೆ – 50/-
ಬ್ಯಾಟರಿ ಚಾಲಿತ ವಾಹನದ ಟಿಕೆಟ್ ದರ
1) ವಯಸ್ಕರಿಗೆ :-240/-
2) ಮಕ್ಕಳಿಗೆ (ಐದರಿಂದ 12 ವರ್ಷ ) ಹಾಗೂ ಹಿರಿಯ ನಾಗರಿಕರಿಗೆ – 180/
ನಟ ದರ್ಶನ್ ಫ್ಯಾನ್ಸ್ ಅಶ್ಲೀಲ ಮೆಸೇಜ್: ಬೆಂಗಳೂರು ಕಮಿಷನರ್‌ಗೆ ದೂರು ಕೊಟ್ಟ ನಟಿ ರಮ್ಯಾ