newsics.com
ಮಳೆಗಾಲದಲ್ಲಿ ಬೇಯಿಸಿದ ತಾಜಾ ಆಹಾರ, ಸಮತೋಲಿತ ಆಹಾರ ಹಾಗೂ ಸರಳವಾಗಿ ಜೀರ್ಣವಾಗಲು ನೆರವಾಗುವ ಆಹಾರ ಸೇವನೆಯತ್ತ ಹೆಚ್ಚು ಗಮನ ಹರಿಸಬೇಕು. ಈ ಋತುಮಾನದಲ್ಲಿ ಸಿಗುವ ತರಕಾರಿ ಹಾಗೂ ಹಣ್ಣುಗಳನ್ನು ಹೆಚ್ಚು ಹೆಚ್ಚು ಸೇವಿಸಬೇಕು. ಹಾಗಾದರೆ ಮಾನ್ಸೂನ್‌ನಲ್ಲಿ ಆರೋಗ್ಯ ಹಿನ್ನೆಲೆಯಲ್ಲಿ ಯಾವೆಲ್ಲಾ ಆಹಾರಗಳು ಸೇವಿಸಲು ಯೋಗ್ಯ ನೋಡಿ.
ಇರುವ ತರಕಾರಿಗಳಲ್ಲೇ ಅತಿ ಹೆಚ್ಚಿನ ನೀರಿನ ಅಂಶವನ್ನು ಹೊಂದಿರುವ ತರಕಾರಿ ಎಂದರೆ ಅದು ಸೋರೆಕಾಯಿ. ಎಲ್ಲಾ ಸಮಯದಲ್ಲೂ ಲಭ್ಯವಿದ್ದರೂ ಮಳೆಗಾಲದಲ್ಲಿ ಮಾರುಕಟ್ಟೆಗಳಲ್ಲಿ ಸಾಕಷ್ಟು ದೊರೆಯುತ್ತದೆ. ವೈದ್ಯರ ಪ್ರಕಾರ ಮಳೆಗಾಲದಲ್ಲಿ ನಮ್ಮ ಆರೋಗ್ಯಕ್ಕೆ ಅತ್ಯಂತ ಸೂಕ್ತವಾದ ಮತ್ತು ಅಷ್ಟೇ ಆರೋಗ್ಯಕರವಾದ ತರಕಾರಿ ಇದು ಎಂದು ಹೇಳಬಹುದು.
ಸೋರೆಕಾಯಿಯಲ್ಲಿ ಯಥೇಚ್ಛವಾದ ಕರಗುವ ಮತ್ತು ಕರಗದಿರುವ ನಾರಿನ ಅಂಶಗಳು ಲಭ್ಯವಿದ್ದು, ಆರೋಗ್ಯಕರ ಜೀರ್ಣ ವ್ಯವಸ್ಥೆಯನ್ನು ನಿರ್ವಹಣೆ ಮಾಡುವ ಅದ್ಭುತ ಗುಣ ಲಕ್ಷಣ ಸೋರೆಕಾಯಿಯಲ್ಲಿದೆ.
ಹಾಗಲಕಾಯಿ ಎಷ್ಟು ಕಹಿ ಇರುತ್ತದೆ ಅಷ್ಟು ಕೂಡ ನಮ್ಮ ದೇಹಕ್ಕೆ ಆರೋಗ್ಯಕರ ಎಂದು ಆಹಾರ ತಜ್ಞರು ಹೇಳುತ್ತಾರೆ.
ಹಾಗಲಕಾಯಿಯಲ್ಲಿ ಕಂಡು ಬರುವ ವಿಟಮಿನ್ ‘ ಸಿ ‘ ಅಂಶ ನಮ್ಮ ರೋಗ – ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಮಳೆಗಾಲದಲ್ಲಿ ನಮ್ಮನ್ನು ಯಾವುದೇ ಬ್ಯಾಕ್ಟೀರಿಯಾ ಮತ್ತು ವೈರಸ್ ಸೋಂಕುಗಳಿಗೆ ಆವಾಹನೆ ಆಗದಂತೆ ನಮ್ಮ ಆರೋಗ್ಯವನ್ನು ಕಾಪಾಡುತ್ತದೆ.
ಇದನ್ನು ಮಿನಿ ಸೌತೆಕಾಯಿ ಎಂದು ಕರೆಯುತ್ತಾರೆ. ಏಕೆಂದರೆ ನೋಡಲು ಥೇಟ್ ಸೌತೆಕಾಯಿ ರೀತಿ ಇದ್ದು, ಒಳಗಿನ ಬೀಜಗಳು ಕೂಡ ಸೌತೆಕಾಯಿ ಬೀಜಗಳನ್ನು ಹೋಲುತ್ತವೆಇದರಲ್ಲಿರುವ ಯಥೇಚ್ಛವಾದ ನೀರಿನ ಅಂಶದಿಂದ ನಮಗೆ ಎದುರಾಗುವ ಅಜೀರ್ಣತೆ, ಮಲಬದ್ಧತೆ, ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್ ಮತ್ತು ಎದೆಯುರಿ ರೀತಿಯ ಆರೋಗ್ಯದ ಅಸ್ವಸ್ಥತೆಗಳನ್ನು ದೂರ ಮಾಡಿ ನಮ್ಮ ದೇಹದ ಜೀರ್ಣ ಪ್ರಕ್ರಿಯೆಯನ್ನು ಸರಾಗಗೊಳಿಸುತ್ತದೆ.
ಆಡು ಭಾಷೆಯಲ್ಲಿ ಇದನ್ನು ಸಿಹಿ ಗೆಣಸು ಎಂದು ಕೂಡ ಕರೆಯುತ್ತಾರೆ. ಕೆಲವರು ಸಿಹಿ ಗೆಣಸು ದೇಹಕ್ಕೆ ತುಂಬಾ ತಂಪು ಎನ್ನುವ ಕಾರಣಕ್ಕೆ ಮಳೆಗಾಲದಲ್ಲಿ ದೂರ ಇಡುತ್ತಾರೆ. ಆದರೆ ಸೋಂಕುಗಳ ವಿರುದ್ಧ ಹೋರಾಡುವಂತಹ ರೋಗ ನಿರೋಧಕ ಶಕ್ತಿಯನ್ನು ಸಿಹಿ ಆಲೂಗಡ್ಡೆ ಅಥವಾ ಸಿಹಿ ಗೆಣಸು ನಮ್ಮ ದೇಹಕ್ಕೆ ಒದಗಿಸುತ್ತದೆ.
ಮಳೆಗಾಲದಲ್ಲಿ ಮಾರುಕಟ್ಟೆಗಳಲ್ಲಿ ಹೆಚ್ಚಾಗಿ ಕಂಡು ಬರುವ ಸಿಹಿ ಗೆಣಸಿನ ಉಪಯೋಗ ನಿಮ್ಮದಾಗಿಸಿ ಕೊಂಡು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ
https://www.newsics.com/2025/07/27/bomb-threat-to-kempegowda-airport-dcm-dk-shivakumars-office/