newsics.com
ಶಾಪಿಂಗ್ ಕಾಂಪ್ಲೆಕ್ಸ್ನಲ್ಲಿ ಶಾಪಿಂಗ್ ಮಾಡ್ತಿದ್ದವರ ಮೇಲೆ ಏಕಾಏಕಿ ಅಟ್ಯಾಕ್ ಮಾಡಿ, 11 ಜನರ ಮೇಲೆ ಚಾಕು ಇರಿದಿರುವ ಘಟನೆ ಅಮೆರಿಕಾದ ಮಿಚಿಗನ್‌ನ ಟ್ರಾವರ್ಸ್ ಸಿಟಿಯಲ್ಲಿರುವ ವಾಲ್‌ಮಾರ್ಟ್‌ನಲ್ಲಿ ನಡೆದಿದೆ.
ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಘಟನೆಯಲ್ಲಿ ಒಬ್ಬ ಶಂಕಿತನನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಕೆಂಪು ಶರ್ಟ್ ಧರಿಸಿದ ಶಂಕಿತ ವ್ಯಕ್ತಿಯೊಬ್ಬ ದಿನಸಿ ವಿಭಾಗದಲ್ಲಿ ಖರೀದಿ ಮಾಡ್ತಿದ್ದವರ ಮೇಲೆ ಏಕಾಏಕಿ ಅಟ್ಯಾಕ್ ಮಾಡಿದ್ದಾನೆ. ಈ ವೇಳೆ ಮತ್ತೊಬ್ಬ ಗ್ರಾಹಕ ಶಂಕಿತನಿಗೆ ಹೊಡೆದು ಅವನನ್ನು ನಿಶ್ಯಸ್ತ್ರಗೊಳಿಸಲು ಪ್ರಯತ್ನಿಸಿದ್ದಾನೆ. ಈ ಘಟನೆಯಲ್ಲಿ ವೃದ್ಧೆಯೊಬ್ಬರು ಮತ್ತು ಮಗುವೊಂದು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ.