newsics.com
ಬಿಗ್ ಬಾಸ್ ತೆಲುಗು ಸೀಸನ್ 9 ರಿಯಾಲಿಟಿ ಶೋ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಈ ಬಾರಿಯೂ ಅಕ್ಕಿನೇನಿ ನಾಗಾರ್ಜುನ ಬಿಗ್ ಬಾಸ್ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಇದೀಗ ತೆಲುಗು ಬಿಗ್ ಬಾಸ್‌ಗೆ ಈ ಬಾರಿ ಸಹ ಕನ್ನಡದ ನಟಿಯೊಬ್ಬರು ಹೋಗಲಿದ್ದಾರೆ.
ವರದಿಗಳ ಪ್ರಕಾರ, ಕನ್ನಡದಲ್ಲಿ ನಟಿಸಿ ತನ್ನದೇ ಛಾಪು ಮೂಡಿಸಿರುವ ಯುವ ನಟಿ ಕಾವ್ಯಾ ಶೆಟ್ಟಿ ಈ ಬಾರಿ ಬಿಗ್ ಬಾಸ್ ತೆಲುಗು ಸೀಸನ್ 9ರ ಮನೆಗೆ ಪ್ರವೇಶಿಸಲು ಸಜ್ಜಾಗಿದ್ದಾರೆ. ಇನ್ನೂ ಬಿಗ್ ಬಾಸ್ ತೆಲುಗು 9ರ ಅಧಿಕೃತ ಸ್ಪರ್ಧಿಗಳ ಪಟ್ಟಿ ಬಿಡುಗಡೆ ಮಾಡಲಾಗಿಲ್ಲ. ಬಿಗ್ ಬಾಸ್ ಸೀಸನ್ 9 ತೆಲುಗು ಆಗಸ್ಟ್ ಅಂತ್ಯ ಅಥವಾ ಸೆಪ್ಟೆಂಬರ್ ವೇಳೆಗೆ ಆರಂಭವಾಗಲಿದೆ.
ಕನ್ನಡದಲ್ಲಿ ಕಾವ್ಯಾ ಶೆಟ್ಟಿ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ತೆಲುಗಿನಲ್ಲಿ ಒಂದು ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ತಮ್ಮ ಗ್ಲಾಮರಸ್ ಲುಕ್‌ನಿಂದ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಜನಪ್ರಿಯರಾಗಿದ್ದಾರೆ. ಕಳೆದ ಬಾರಿ ಕನ್ನಡ ಬ್ಯೂಟಿ ಶೋಭಾ ಶೆಟ್ಟಿ ಬಿಗ್ ಬಾಸ್ 7ರಲ್ಲಿ ಭಾಗವಹಿಸಿ ರಂಜಿಸಿದ್ದರು.