newsics.com
ಬಾಲಾಪುರ: ಮಹರಾಷ್ಟ್ರದಾದ್ಯಂತ ನಿರಂತರವಾಗಿ ಮಳೆಯಾಗುತ್ತಿದ್ದು, ಧಾರಾಕಾರ ಮಳೆಯಿಂದಾಗಿ ಅಕೋಲಾ ಜಿಲ್ಲೆಯ ಬಾಲಾಪುರದ ಬಳಿ ಇರುವ ಐತಿಹಾಸಿಕ ಕೋಟೆ ಕುಸಿದುಬಿದ್ದಿದೆ.
ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಐತಿಹಾಸಿಕ ಕೋಟೆ ನಿರ್ವಹಣೆ ಇಲ್ಲದ ಪರಿಣಾಮ ಹಾಗೂ ಭಾರಿ ಮಳೆಯಿಂದಾಗಿ ಶಿಥಿಲಾವಸ್ಥೆಯಲ್ಲಿದ್ದ ಕೋಟೆ ಕುಸಿದು ಬಿದ್ದಿದೆ.
ಈ ಕೋಟೆ ರಾಜಾ ಜಯಸಿಂಗ್ ಆಳ್ವಿಕೆಯಲ್ಲಿ ನಿರ್ಮಿಸಿದ್ದು ಎನ್ನಲಾಗಿದೆ. ಮಹಾರಾಷ್ಟ್ರದ ವಾಸ್ತುಶಿಲ್ಪ ಹಾಗೂ ಸಾಂಸ್ಕೃತಿಕ ಪರಂಪರೆಯ ಪ್ರಮುಖ ಭಾಗವಾಗಿದೆ.