newsics.com
ಮಕ್ಕಳ ಆರೋಗ್ಯ ಬಗ್ಗೆ ನೀವೆಷ್ಟು ಕಾಳಜಿ ವಹಿಸಿದ್ದೀರಿ? ನಿಮ್ಮ ಮಕ್ಕಳ ಆರೋಗ್ಯ ಬೆಳವಣಿಗೆ ಬಗ್ಗೆ ಅದೆಷ್ಟು ಫಾಲೋ ಮಾಡುತ್ತಿದ್ದೀರಿ? ಹೀಗ್ಯಾಕೆ ಕೇಳುತ್ತಿದ್ದೇವೆ ಅಂದರೆ ಇತ್ತೀಚಿಗೆ ಮಕ್ಕಳಲ್ಲಿ ನಿರಂತರ ಮೊಬೈಲ್ ಬಳಕೆ ನಾನಾ ಅವಾಂತರಕ್ಕೆ ಕಾರಣವಾಗುತ್ತುದೆ. ಕೊರೊನಾ ಬಂದ ಬಳಿಕ ಮಕ್ಕಳ ಕಲಿಕಯ ಜೊತೆ ವರ್ತನೆ ಅಡಿಕ್ಷನ್ ಗಳು ಬದಲಾಗಿ ಹೋಗಿವೆ.
ಮನೆಯವರನ್ನು ಮರಿಬಹುದು, ಆದ್ರೆ ಮೊಬೈಲ್ ಮರೆಯೋಕ್ಕೆ ಚ್ಯಾನ್ಸ್ ಇಲ್ಲ ಎಂಬಂತಾಗಿದೆ ಸದ್ಯ ಮಕ್ಕಳ ಪರಿಸ್ಥಿತಿ. ಅತಿಯಾದ ಮೊಬೈಲ್ ಚಟ ಮಕ್ಕಳ ದೃಷ್ಠಿ ಸಮಸ್ಯೆಗೆ ಕಾರಣವಾಗಿರುವ ಆತಂಕಕಾರಿ ಅಂಶವನ್ನ ಆರೋಗ್ಯ ಇಲಾಖೆ ಹೊರ ಹಾಕಿದೆ.
13 ವರ್ಷಕ್ಕಿಂತ ಮುಂಚೆ ಸ್ಮಾರ್ಟ್ಫೋನ್ ಬಳಸುವ ಮಕ್ಕಳು ಆತ್ಮಹತ್ಯೆಯ ಯೋಚನೆಗಳು, ಕಡಿಮೆ ಸ್ವಾಭಿಮಾನ, ಆಕ್ರಮಣಶೀಲತೆ ಮತ್ತು ವಾಸ್ತವದಿಂದ ದೂರವಾಗುವಂತಹ ತೀವ್ರ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ ಎಂದು ಇತ್ತೀಚಿನ ಅಧ್ಯಯನವೊಂದು ಬಹಿರಂಗಪಡಿಸಿದೆ. ಈ ಅಧ್ಯಯನವು ‘ಜರ್ನಲ್ ಆಫ್ ಹ್ಯೂಮನ್ ಡೆವಲಪ್ಮೆಂಟ್ ಅಂಡ್ ಕ್ಯಾಪಬಿಲಿಟೀಸ್’ನಲ್ಲಿ ಪ್ರಕಟವಾಗಿದೆ.
ಈ ಅಧ್ಯಯನವು 18ರಿಂದ 24 ವರ್ಷದ ವಯಸ್ಸಿನ 100,000 ಯುವಕರ ಮಾನಸಿಕ ಆರೋಗ್ಯ ಪ್ರೊಫೈಲ್ಗಳನ್ನು ಪರಿಶೀಲಿಸಿದ್ದು, ಅದರಲ್ಲಿ 13 ವರ್ಷಕ್ಕಿಂತ ಮುಂಚೆ ಸ್ಮಾರ್ಟ್ಫೋನ್ ಬಳಸಿದವರಲ್ಲಿ ಮಾನಸಿಕ ಒತ್ತಡ, ಸ್ವ-ಹಾನಿ ಮತ್ತು ಆತ್ಮಹತ್ಯೆಯ ಯೋಚನೆಗಳು ಹೆಚ್ಚಿನದಾಗಿರುವುದನ್ನು ಗುರುತಿಸಲಾಗಿದೆ. ಹುಡುಗಿಯರು ಹುಡುಗರಿಗಿಂತ ಹೆಚ್ಚು ಪ್ರಭಾವಿತರಾಗಿದ್ದು, 9.5% ಹುಡುಗಿಯರು ಮತ್ತು 7% ಹುಡುಗರು ತಮ್ಮ ಮಾನಸಿಕ ಆರೋಗ್ಯದಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ.
ಮಕ್ಕಳು 13 ವರ್ಷದವರೆಗೆ ಸ್ಮಾರ್ಟ್ಫೋನ್ಗೆ ಬಳಕೆ ಮಾಡಬಾರದು ಎಂದು ಅಧ್ಯಯನವು ಶಿಫಾರಸು ಮಾಡಿದೆ. ರಾತ್ರಿ ಸಮಯದಲ್ಲಿ ಸ್ಮಾರ್ಟ್ಫೋನ್ ಬಳಕೆಯು ನಿದ್ರೆಗೆ ತೊಡಕು ಮಾಡುವುದರಿಂದ ಖಿನ್ನತೆ, ಹೊರಾಂಗಣ ನಡವಳಿಕೆಗಳು ಮತ್ತು ಸ್ವ-ಅಭಿಮಾನದ ಕಡಿಮೆಯಾಗುವಿಕೆಗೆ ಕಾರಣವಾಗುತ್ತದೆ ಅಧ್ಯಯನವು ತೋರಿಸಿದೆ.