newsics.com
ಬಾಹ್ಯಾಕಾಶಕ್ಕೆ ಹಾರಿದ್ದ ಭಾರತದ ಶುಭಾಂಶು ಶುಕ್ಲಾ ಸೇರಿ ನಾಲ್ವರು ಗಗನಯಾತ್ರಿಗಳು ಸುರಕ್ಷಿತವಾಗಿ ಭೂಮಿಗೆ ಲ್ಯಾಂಡ್ ಆಗಿದ್ದಾರೆ. ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಕ್ಯಾಲಿಫೋರ್ನಿಯಾದ ಕರಾವಳಿಗೆ ಸ್ಪ್ಲ್ಯಾಶ್ಡೌನ್ (ಆಗಿದ್ದಾರೆ.
ಶುಭಾಂಶು ಶುಕ್ಲಾ, ಅಮೆರಿಕದ ಪೆಗ್ಗಿ ವಿಟ್ಸನ್, ಪೋಲೆಂಡ್‌ನ ಉಜಾಂನ್ಸಿ, ಹಂಗೇರಿಯ ಟಿಬೊರ್ ಕಾಪುಗೆ ಅವರು ಆಕ್ಸಿಯೋಂ-4 ಮಿಷನ್ ಭಾಗವಾಗಿ ಐಎಸ್ಎಸ್ ತೆರಳಿದ್ದರು. ಆಕ್ಸಿಯಮ್-4 ಮಿಷನ್ ಜೂನ್ 25, 2025ರಂದು ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗಿ, ಜೂನ್ 26ರಂದು ISSನೊಂದಿಗೆ ಯಶಸ್ವಿಯಾಗಿ ಡಾಕ್ ಆಗಿತ್ತು.
ಈ ಮಿಷನ್‌ನಲ್ಲಿ 60ಕ್ಕೂ ಹೆಚ್ಚು ವೈಜ್ಞಾನಿಕ ಪ್ರಯೋಗಗಳನ್ನು ನಡೆಸಲಾಗಿದ್ದು, ಬಯೋಮೆಡಿಕಲ್ ವಿಜ್ಞಾನ, ಸುಧಾರಿತ ವಸ್ತುಗಳು, ನರವಿಜ್ಞಾನ, ಕೃಷಿ, ಮತ್ತು ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರಗಳಿಗೆ ಸಂಬಂಧಿಸಿದ ಸಂಶೋಧನೆಗಳು ಇದರಲ್ಲಿ ಸೇರಿವೆ. ಇದು ಆಕ್ಸಿಯಮ್ ಸ್ಪೇಸ್‌ನ ಖಾಸಗಿ ಗಗನಯಾತ್ರಿ ಕಾರ್ಯಾಚರಣೆಯಲ್ಲಿ ಇದುವರೆಗಿನ ಅತಿದೊಡ್ಡ ವೈಜ್ಞಾನಿಕ ಸಾಧನೆಯಾಗಿದೆ.
https://x.com/ANI/status/1945055117755011268?ref_src=twsrc%5Etfw%7Ctwcamp%5Etweetembed%7Ctwterm%5E1945055117755011268%7Ctwgr%5E7fcaf476ec316809484ce1ddffbcc39f21909fc0%7Ctwcon%5Es1_c10&ref_url=https%3A%2F%2Fd-5336691794158767772.ampproject.net%2F2506252055000%2Fframe.html
https://www.newsics.com/2025/07/15/dowry-harassment-woman-commits-suicide-after-killing-child/