ಬೆಂಗಳೂರು: ಕನ್ನಡದ ಹಿರಿಯ ನಟಿ ಬಿ.ಸರೋಜಾದೇವಿ ಅವರು ನಿಧನರಾಗಿದ್ದಾರೆ. ಅವರಿಗೆ 87 ವರ್ಷಗಳಾಗಿತ್ತು. ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ, ಸರೋಜಾದೇವಿ ಮಲ್ಲೇಶ್ವರಂನಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ಸರೋಜಾ ದೇವಿ 1938ರ ಜನವರಿ 7ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಬೈರಪ್ಪ ಅವರು ಪೊಲೀಸ್ ಅಧಿಕಾರಿಯಾಗಿದ್ದರು. ತಾಯಿ ರುದ್ರಮ್ಮಾ. ಸರೋಜಾ ಬಳಿ ಭೈರಪ್ಪ ಅವರು ಡ್ಯಾನ್ಸ್ ಕಲಿಯುವಂತೆ ಪ್ರೋತ್ಸಾಹಿಸಿದರು. ಅವರು ಚಿತ್ರರಂಗಕ್ಕೆ ಬರಲು ತಂದೆಯಿಂದಲೇ ಬೆಂಬಲ ಸಿಕ್ಕಿತ್ತು.
ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಅವರು ತಮ್ಮ ಮೊದಲ ಚಿತ್ರದಲ್ಲೇ ರಾಷ್ಟ್ರ ಪ್ರಶಸ್ತಿಯನ್ನು ಗೆದ್ದಿರುವ ಕೀರ್ತಿ ಹೊಂದಿದ್ದಾರೆ. ಸರೋಜಾ ಅವರು, 1956 ರಲ್ಲಿ ಬಿಡುಗಡೆಯಾದ ‘ತಿರುಮನಂ’ ಚಿತ್ರದ ಮೂಲಕ ತಮಿಳಿನ ಮೂಲಕ ನಟಿಯಾಗಿ ಪಾದಾರ್ಪಣೆ ಮಾಡಿದರು.
ಇದೀಗ ಅವರು ಸಾಯವುದಕ್ಕೂ ಮೊದಲು ಏನಾಗಿತ್ತು ಎಂಬುದರ ಮಾಹಿತಿ ರಿವೀಲ್ ಆಗಿದೆ. ಹಾಗಿದ್ರೆ, ಕೊನೆ ಕ್ಷಣದಲ್ಲಿ ಏನಾಗಿತ್ತು ಎಂದು ನೋಡೋಣ ಬನ್ನಿ.
ಬಿ.ಸರೋಜಾ ದೇವಿ ಅವರು ಬೆಂಗಳೂರಿನ ಮನೆಯಲ್ಲಿದ್ದರು. ಬೆಳಗ್ಗೆ ಏಳುತ್ತಿದ್ದಂತೆಯೇ ಏಕಾಏಕಿ ತಲೆಸುತ್ತು ಬಂದು ನೆಲಕ್ಕೆ ಬಿದ್ದಿದ್ದಾರೆ. ಇದನ್ನು ನೋಡಿ ಮನೆಯವರು ಗಾಬರಿಯಾಗಿದ್ದಾರೆ.ಮನೆಯವರು ಅವರನ್ನು ತಕ್ಷಣ ಹತ್ತಿರದ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.ಅಷ್ಟರಲ್ಲೇ ಸರೋಜಾ ದೇವಿ ನಿಧನ ಹೊಂದಿದ್ದರು. ಅವರು ಮೃತಪಡುವಾಗ ಸಮಯ ಬೆಳಗ್ಗೆ 8.30 ಆಗಿತ್ತು. 9.30ಕ್ಕೆ ಮನೆಗೆ ಪಾರ್ಥಿವ ಶರೀರ ರವಾನೆ ಮಾಡಲಾಯಿತು.