newsics.com
ಲಂಡನ್: ಅಹದಾಬಾದ್ ವಿಮಾನ ಅಪಘಾತ ಮಾದರಿಯಲ್ಲೇ ಲಂಡನ್ನಲ್ಲಿ ಇನ್ನೊಂದು ಮಿನಿ ವಿಮಾನ (ಬ್ಯುಸಿನೆಸ್ ವಿಮಾನ) ಟೇಕ್ ಆಫ್ ಆದ ಕೆಲವೇ ನಿಮಿಷದಲ್ಲಿ ಅಪಘಾತವಾಗಿರುವ ಘಟನೆ ವರದಿಯಾಗಿದೆ.
ಪೂರ್ವ ಲಂಡನ್ನಿಂದ 72 ಕಿಮೀ ದೂರದಲ್ಲಿ ಈ ದುರಂತ ಸಂಭವಿಸಿದ್ದು, 12 ಮೀಟರ್ ಉದ್ದದ ಬೀಚ್ ಬಿ 200 ಏರ್ ಕಿಂಗ್ ಸೂಪರ್ ವಿಮಾನ ಅಪಘಾತಕ್ಕೀಡಾಗಿದೆ.
ಭಾನುವಾರ (ಜುಲೈ 13) ಲಂಡನ್ ಸೌತೆಂಡ್ ವಿಮಾನ ನಿಲ್ದಾಣದಲ್ಲಿ ಸುಮಾರು ಸಂಜೆ 4 ಗಂಟೆಗೆ ಒಂದು ಸಣ್ಣ ವಿಮಾನವು ಟೇಕ್ಆಫ್ ಸಂದರ್ಭದಲ್ಲಿ ಅಪಘಾತಕ್ಕೀಡಾಗಿದೆ.
ಈ ಸಮಯದಲ್ಲಿ ಭಾರೀ ಬೆಂಕಿಯ ಜ್ವಾಲೆ ಆವರಿಸಿಕೊಂಡು ಸ್ಫೋಟಗೊಂಡಿರುವ ಘಟನೆ ನಡೆದಿದೆ.
ಈ ಘಟನೆಯ ಬಳಿಕ ವಿಮಾನ ನಿಲ್ದಾಣದಲ್ಲಿ ಎಲ್ಲಾ ವಿಮಾನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಎಸೆಕ್ಸ್ ಪೊಲೀಸ್ ಪಡೆಯು ಈ ಘಟನೆಯನ್ನು ಗಂಭೀರ ಘಟನೆ ಎಂದು ಪರಿಗಣಿಸಿ, ತುರ್ತು ಸೇವೆ ಪಡೆಗಳು ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ನೀಡಿದೆ.
ಮಾಹಿತಿಯ ಪ್ರಕಾರ, ಈ ವಿಮಾನವು ಬೀಚ್ B200 ಸೂಪರ್ ಕಿಂಗ್ ಏರ್ ಆಗಿರಬಹುದು ಎಂದು ಊಹಿಸಲಾಗಿದೆ. ಇದು ಸೌತೆಂಡ್ನಿಂದ ನೆದರ್ಲ್ಯಾಂಡ್ನ ಲೆಲಿಸ್ಟಾಡ್ಗೆ ಹೊರಟಿತ್ತು. ಸಾವು ನೋವಿನ ಬಗ್ಗೆ ಯಾವುದೇ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ.
ತಿಂಗಳ ಹಿಂದೆ ಅಹಮದಾಬಾದ್ನಲ್ಲಿ ಲಂಡನ್ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವೊಂದು ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ನೆಲಕ್ಕೆ ಅಪ್ಪಳಿಸಿ ಹೊತ್ತಿ ಉರಿದ ಘಟನೆ ನಡೆದಿತ್ತು. ಇದರಲ್ಲಿದ್ದ ಸುಮಾರು 242 ಪ್ರಯಾಣಿಕರು ಹಾಗೂ ನೆಲದ ಮೇಲಿದ್ದ 17 ಮಂದಿ ಪ್ರಾಣ ಕಳೆದುಕೊಂಡಿದ್ದರು.
https://twitter.com/i/status/1944433065402503610
ಕನ್ನಡಿಗರಿಗಿಂತ ನಾಯಿಗಳು ಉತ್ತಮ ಜೀವನ ನಡೆಸುತ್ತವೆ: ಪೋಸ್ಟ್ ಹಾಕಿ ಕನ್ನಡಿಗರನ್ನ ಕೆಣಕಿದ ನಾರ್ಥಿಗಳು!
Relationship ಗಂಡ-ಹೆಂಡತಿ ನಡುವೆ ಅಂತರ ಏಕೆ?; ದಾಂಪತ್ಯದಲ್ಲಿ ಭಿನ್ನಾಭಿಪ್ರಾಯವಾಗಲು ಇವುಗಳೇ ಕಾರಣ!
ಲೈಂಗಿಕ ದೌರ್ಜನ್ಯ: ಕಾಲೇಜು ಆವರಣದಲ್ಲೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಸಂತ್ರಸ್ತೆ