newsics.com
ನವದೆಹಲಿ: ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ನ (ಯುಪಿಐ) ತ್ವರಿತ ಬೆಳವಣಿಗೆಯಿಂದಾಗಿ ಭಾರತದಲ್ಲಿ ಈಗ ಇತರ ದೇಶಗಳಿಗಿಂತ ಅತಿ ವೇಗವಾಗಿ ಡಿಜಿಟಲ್ ಹಣಪಾವತಿ ಸಾಧ್ಯವಾಗಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ವರದಿ ತಿಳಿಸಿದೆ.
ಯುಪಿಐ ಪರಿಣಾಮವಾಗಿ ಭಾರತದಲ್ಲಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳಂತಹ ಇತರ ಸಾಧನಗಳ ಬಳಕೆಯೂ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ.
ಮೊಬೈಲ್ ಫೋನ್ ಮೂಲಕವೇ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ವಹಿವಾಟು ನಡೆಸುತ್ತಿದ್ದಾರೆ ಎಂದು ಐಎಂಎಫ್ನ ‘ಗ್ರೋಯಿಂಗ್ ರಿಟೇಲ್ ಡಿಜಿಟಲ್ ಪೇಮೆಂಟ್ಸ್- ದಿ ವ್ಯಾಲ್ಯೂ ಆಫ್ ಇಂಟರ್ಆಪರೇಬಿಲಿಟಿ’ ಎಂಬ ಫಿನ್ಟೆಕ್ ವರದಿಯಲ್ಲಿ ವಿವರಿಸಲಾಗಿದೆ.
2016ರಲ್ಲಿ ಆರಂಭವಾದ ಯುಪಿಐ ಕಡಿಮೆ ಅವಧಿಯಲ್ಲಿ ಅತ್ಯಂತ ತ್ವರಿತವಾಗಿ ಬೆಳೆದಿದೆ. ನಗದು ಬಳಕೆ ತನ್ನಿಂತಾನೇ ನೇಪಥ್ಯಕ್ಕೆ ಸರಿದಿದೆ. ಯುಪಿಐ ಈಗ ತಿಂಗಳಿಗೆ 18 ಶತಕೋಟಿಗಿಂತ ಹೆಚ್ಚು ವಹಿವಾಟುಗಳನ್ನು ನಡೆಸುತ್ತಿದೆ ಎಂದು ಅಲೆಕ್ಸಾಂಡರ್ ಕೋಪ್ಸ್ಟೇಕ್, ದಿವ್ಯಾ ಕೀರ್ತಿ ಮತ್ತು ಮಾರಿಯಾ ಸೊಲೆಡಾಡ್ ಮಾರ್ಟಿನೆಜ್ ಪೆರಿಯಾ ಅವರು ತಯಾರಿಸಿರುವ ಈ ವರದಿಯಲ್ಲಿ ಹೇಳಲಾಗಿದೆ.
ಮಾವಿನ ಹಣ್ಣೆಂದು ಬೈಕ್ ಮೇಲೆ ಮಹಿಳೆಯ ಶವ ಸಾಗಾಟ : ವೈರಲ್ ವಿಡಿಯೋ ನೋಡಿ