newsics.com
ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಹಕಾರಿ ಕಾರ್ಮಿಕರ ಸಂವಾದಲ್ಲಿ ತಮ್ಮ ರಾಜಕೀಯ ನಿವೃತ್ತಿ ನಂತರದ ಜೀವನದ ಬಗ್ಗೆ ಮಾತನಾಡಿದ್ದಾರೆ.
ಅಮಿತ್ ಶಾ ಎಲ್ಲಿ ಎಂಟ್ರಿಕೊಡ್ತಾರೋ, ಅಲ್ಲಿ ಪ್ರತಿಪಕ್ಷದ ಸ್ಪರ್ಧಿಗಳಿಗೆ ನಡುಕ ಶುರು ಅಂತಲೇ ಅರ್ಥ. ಇತ್ತ ಅಧಿಕಾರದಲ್ಲೂ ಅಮಿತ್ ಶಕ್ತಿ ಪ್ರದರ್ಶನ ನಡೆದಿದೆ. ಚಂಡಮಾರುತವನ್ನ ಎದುರಿಸವಷ್ಟು ಸವಾಲಿದ್ರೂ ಆರ್ಟಿಕಲ್ 370 ರದ್ಧತಿಯನ್ನ ಯಶಸ್ವಿಯಾಗಿಸಿದ್ದು, ಶಾ ನಾಯಕತ್ವದಲ್ಲೇ.. ಇದು ಒಂದು ಲೆಕ್ಕವಷ್ಟೇ ಇಂಥಾ ಹಲವಿದೆ. ಅಮಿತ್ ಶಾ ಸಾಧನೆಯನ್ನ ನೆನೆಯುತ್ತಿರೋದಕ್ಕೆ ಕಾರಣ, ಅವರು ರಾಜಕೀಯ ನಿವೃತ್ತಿ ಬಗ್ಗೆ ಮಾತಾಡಿರೋದು.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಮಿತ್ ಶಾ ಅವರು, ತಾವು ರಾಜಕೀಯದಿಂದ ನಿವೃತ್ತಿ ಹೊಂದಿದ ನಂತರ ಏನ್ಮಾಡಬೇಕು ಅಂದ್ಕೊಂಡಿದ್ದೀನಿ ಅನ್ನೋದನ್ನ ಕಾರ್ಯಕ್ರಮದಲ್ಲಿ ನೆರದಿದ್ದವರಿಗೆ ತಿಳಿಸಿದ್ರು. ರಾಜಕೀಯ ನಿವೃತ್ತಿಯ ನಂತರದ ಜೀವನವನ್ನು ವೇದಗಳು, ಉಪನಿಷತ್ತುಗಳು ಮತ್ತು ನೈಸರ್ಗಿಕ ಕೃಷಿಯ ಅಧ್ಯಯನಕ್ಕೆ ಮೀಸಲಿಡಲು ನಿರ್ಧರಿಸಿದ್ದೇನೆ ಎಂದು ಅಮಿತ್ ಶಾ ಹೇಳಿದರು. ನೈಸರ್ಗಿಕ ಕೃಷಿ ಅನ್ನೋದು ವೈಜ್ಞಾನಿಕ ಪ್ರಯೋಗವಿದ್ದಂತೆ.
ರಾಸಾಯನಿಕ ರಸಗೊಬ್ಬರ ಬಳಸಿ ಬೆಳೆದಿರುವ ಗೋಧಿ ಸೇವನೆ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ನೈಸರ್ಗಿಕ ಕೃಷಿ ದೇಹವನ್ನು ರೋಗ ಮುಕ್ತವಾಗಿಡಲು ಸಾಧ್ಯವಾಗುತ್ತದೆ. ಹಾಗಾಗಿ ನೈಸರ್ಗಿಕ ಕೃಷಿ ಅನ್ನೋದು ಪ್ರಯೋಗ. ನೈಸರ್ಗಿಕ ಪದ್ದತಿ ಅಳವಡಿಕೆ ಮಾಡಿಕೊಂಡರೆ ಉತ್ಪಾದನೆ ಪ್ರಮಾಣ ಹೆಚ್ಚಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಹೀಗೆ ಅಮಿತ್ ಶಾ ದಿಢೀರ್ ರಾಜಕೀಯ ನಿವೃತ್ತಿ ಬಗ್ಗೆ ಮಾತಾಡಿರೋದು ಸಾಕಷ್ಟು ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
https://www.newsics.com/2025/07/10/its-not-so-easy-to-make-money-on-youtube-anymore/