newsics.com
ಮರಾಠಿ ವಾಹಿನಿ ಸ್ಟಾರ್ ಪ್ರವಾಹ್ ಚಾನೆಲ್‌ನಲ್ಲಿ ಹಲಾದ್ ರುಸಾಲಿ ಕುಂಕು ಹಸ್ಲಾಂ’ ಧಾರಾವಾಹಿ ಪ್ರಸಾರವಾಗುತ್ತಿದೆ. ಈ ಧಾರವಾಹಿ ಪ್ರೇಕ್ಷಕರ ಮನಸ್ಸನ್ನು ಗೆದ್ದಿದೆ. ಈ ಸೀರಿಯಲ್‌ನ ಚಿತ್ರೀಕರಣದ ವೇಳೆ ನಟಿ ಬಾವಿಗೆ ಹಾರುವ ದೃಶ್ಯವಿದೆ. ಯಾವುದೇ ಡೂಪ್ ಇಲ್ಲದೆ ಈ ದೃಶ್ಯವನ್ನು ಶೂಟ್ ಮಾಡಲಾಯಿತು.
ಈ ಬಗ್ಗೆ ನಟಿ ಸಮೃದ್ಧಿ ಕೆಲ್ಕರ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ.ನನಗೆ ಈಜು ಬರುತ್ತೆ, ಆದರೆ ನಾನು ಎಂದಿಗೂ ಆಳವಾದ ನೀರಿನಲ್ಲಿ ಧುಮುಕಿರಲಿಲ್ಲ. ಈ ದೃಶ್ಯದ ಬಗ್ಗೆ ತಿಳಿದ ತಕ್ಷಣ, ಅದನ್ನು ಹೇಗೆ ಚಿತ್ರೀಕರಿಸಲಾಗುತ್ತದೆ ಎಂಬ ಕುತೂಹಲ ನನಗಿತ್ತು. ಕೊಲ್ಲಾಪುರದ ಹೊಲವೊಂದರಲ್ಲಿ 40 ಅಡಿ ಆಳದ ಬಾವಿಗೆ ಹಾರುವ ದೃಶ್ಯವಿತ್ತು. ಈ ದೃಶ್ಯವನ್ನು ಒಂದೇ ಟೇಕ್‌ನಲ್ಲಿ ಪೂರ್ಣಗೊಳಿಸುವುದು ಅತ್ಯಂತ ಮುಖ್ಯವಾದ ವಿಷಯವಾಗಿತ್ತು. ಯಾವುದೇ ಬಾಡಿ ಡಬಲ್ ಅನ್ನು ಬಳಸದೆ ಈ ದೃಶ್ಯವನ್ನು ಮಾಡಲು ನಾನು ನಿರ್ಧರಿಸಿದ್ದೆ.
ನಾನು ನನ್ನನ್ನು ಸಿದ್ಧಪಡಿಸಿಕೊಂಡು ಬಾವಿಗೆ ಹಾರಿದೆ. ಈ ಅನುಭವವನ್ನು ನಾನು ಎಂದಿಗೂ ಮರೆಯುವುದಿಲ್ಲ. ಸರಣಿಯ ಇಡೀ ತಂಡ ಇದಕ್ಕಾಗಿ ಶ್ರಮಿಸಿತು ಮತ್ತು ನನ್ನನ್ನು ನೋಡಿಕೊಂಡಿತು. ಬಾವಿಯಲ್ಲಿ ನನ್ನ ಸಹಾಯಕ್ಕಾಗಿ ಕೆಲವು ಜನರು ಇದ್ದರು. ನಾನು ಯಾವಾಗಲೂ ಧೈರ್ಯಶಾಲಿ ಪ್ರಯೋಗಗಳನ್ನು ಮಾಡಲು ಇಷ್ಟಪಡುತ್ತೇನೆ. ಈ ದೃಶ್ಯದ ನಂತರ ನನ್ನ ಆತ್ಮವಿಶ್ವಾಸ ಹೆಚ್ಚಾಗಿದೆ ಎಂದು ನಟಿ ಹೇಳಿದರು.
https://www.instagram.com/reel/DL2gHnSz4NV/?igsh=MThuMzI5bGc1YnlhOQ==