Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Rishi Sunak ಬ್ರಿಟನ್ ಮಾಜಿ ಪ್ರಧಾನಿ ಈಗ ಖಾಸಗಿ ಕಂಪನಿ ಉದ್ಯೋಗಿ! ಮತ್ತೆ ಹಳೆ ಕಂಪನಿಯಲ್ಲೇ ಕೆಲಸಕ್ಕೆ ಸೇರಿದ ರಿಷಿ ಸುನಾಕ್
ದೇಶಪ್ರಮುಖವಿದೇಶ

Rishi Sunak ಬ್ರಿಟನ್ ಮಾಜಿ ಪ್ರಧಾನಿ ಈಗ ಖಾಸಗಿ ಕಂಪನಿ ಉದ್ಯೋಗಿ! ಮತ್ತೆ ಹಳೆ ಕಂಪನಿಯಲ್ಲೇ ಕೆಲಸಕ್ಕೆ ಸೇರಿದ ರಿಷಿ ಸುನಾಕ್

Share
2 Min Read
SHARE

newsics.com

ನವದೆಹಲಿ: 2 ವರ್ಷ ಬ್ರಿಟನ್‌ ಪ್ರಧಾನಿಯಾಗಿ ಅಧಿಕಾರ ನಡೆಸಿದ್ದ ಇನ್ಫೋಸಿಸ್‌ ಸಂಸ್ಥಾಪಕ ಅಧ್ಯಕ್ಷ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಾಕ್‌, ಪ್ರತಿಷ್ಠಿತ ಹೂಡಿಕೆ ಬ್ಯಾಂಕಿಂಗ್‌ ಕಂಪನಿ ಗೋಲ್ಡ್‌ಮ್ಯಾನ್‌ ಸ್ಯಾಚ್ಸ್‌ಗೆ ಹಿರಿಯ ಸಲಹೆಗಾರರಾಗಿ ನೇಮಕಗೊಂಡಿದ್ದಾರೆ.

ಈ ಬಗ್ಗೆ ಸ್ವತಃ ಗೋಲ್ಡ್‌ಮ್ಯಾನ್‌ ಸ್ಯಾಚ್ಸ್‌ ಸಂಸ್ಥೆಯೇ ದೃಢಪಡಿಸಿದ್ದು, ಸುನಾಕ್ ತಮ್ಮ ಕಂಪನಿಯ ಜತೆಗೆ ಕೆಲಸ ಮಾಡಿ ಜಾಗತಿಕವಾಗಿ ವಿವಿಧ ವಿಚಾರಗಳ ಬಗ್ಗೆ ಸಲಹೆ ನೀಡಲಿದ್ದಾರೆ ಎಂದಿದೆ.

ಈ ಹಿಂದೆಯೂ ಸುನಾಕ್ ಗೋಲ್ಡ್‌ಮ್ಯಾನ್‌ ಜತೆಗೆ ನಂಟು ಹೊಂದಿದ್ದು, 2000 ನೇ ಇಸವಿಯಲ್ಲಿ ಇಂಟರ್ನ್‌ ಆಗಿ ಕೆಲಸಕ್ಕೆ ಸೇರಿದ್ದರು. ಆ ಬಳಿಕ 2001- 2004 ವಿಶ್ಲೇಷಕರಾಗಿದ್ದರು. ಇದೀಗ ಮತ್ತೊಮ್ಮೆ ತಮ್ಮ ಹಳೆ ಕಂಪನಿಗೆ ರಿಷಿ ಸುನಕ್ ಹಿಂದಿರುಗಿದ್ದಾರೆ. ಗೋಲ್ಡ್‌ಮನ್ ಸ್ಯಾಚ್ಸ್‌ನೊಂದಿಗೆ ಹಳೆಯ ಸಂಬಂಧ
ಇದ್ದು, ಗೋಲ್ಡ್‌ಮನ್ ಸ್ಯಾಚ್ಸ್‌ನಲ್ಲಿ ರಿಷಿ ಸುನಕ್ ಅವರ ಎರಡನೇ ಅವಧಿ.

ಬ್ರಿಟನ್‌ನ ಮಾಜಿ ಪ್ರಧಾನಿ, ರಿಷಿ ಸುನಕ್ ಈಗ ಜಾಗತಿಕ ಹಣಕಾಸು ಕಂಪನಿಯೊಂದರಲ್ಲಿ ಹಿರಿಯ ಸಲಹೆಗಾರರಾಗಿ ಕೆಲಸಕ್ಕೆ ಸೇರಿಕೊಂಡಿದ್ದಾರೆ.

ನ್ಯೂಯಾರ್ಕ್‌ನಲ್ಲಿರುವ ಜಾಗತಿಕ ಬ್ಯಾಂಕಿಂಗ್ ದೈತ್ಯ ಗೋಲ್ಡ್‌ಮನ್ ಸ್ಯಾಚ್ಸ್ ಮಂಗಳವಾರ ಮಾಜಿ ಬ್ರಿಟಿಷ್ ಪ್ರಧಾನಿ ರಿಷಿ ಸುನಾಕ್ ಕಂಪನಿಯಲ್ಲಿ ‘ಹಿರಿಯ ಸಲಹೆಗಾರ’ರಾಗಿ ಮರಳಿರುವುದನ್ನು ದೃಢಪಡಿಸಿದೆ.

ರಿಷಿ ಸುನಾಕ್ ಅಕ್ಟೋಬರ್ 2022 ರಿಂದ ಜುಲೈ 2024 ರವರೆಗೆ ಬ್ರಿಟನ್‌ನ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಇದಕ್ಕೂ ಮೊದಲು ಅವರು ಫೆಬ್ರವರಿ 2020 ರಿಂದ ಜುಲೈ 2022 ರವರೆಗೆ ಹಣಕಾಸು ಮಂತ್ರಿಯಾಗಿದ್ದರು. ರಿಷಿ ಸುನಾಕ್ ಅವರು 2015 ರಲ್ಲಿ ಸಂಸದರಾಗಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದ್ದಾರೆ. ಈಗಲೂ ರಿಚ್‌ಮಂಡ್ ಮತ್ತು ನಾರ್ತ್‌ಆಲರ್ಟನ್‌ನಿಂದ ಸಂಸದರಾಗಿದ್ದಾರೆ. ಆದಾಗ್ಯೂ, 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಕನ್ಸರ್ವೇಟಿವ್ ಪಕ್ಷವು ಇತಿಹಾಸದಲ್ಲಿಯೇ ಅತಿ ದೊಡ್ಡ ಸೋಲನ್ನು ಅನುಭವಿಸಿತು. ಆದರೆ ಸುನಾಕ್ ಮುಂದಿನ ಸಂಸತ್ತಿನ ಪೂರ್ಣ ಅವಧಿಯವರೆಗೆ ಸಂಸದರಾಗಿ ಉಳಿಯುವುದಾಗಿ ಚುನಾವಣೆಯ ಸಮಯದಲ್ಲಿ ಭರವಸೆ ನೀಡಿದ್ದರು.

ರಿಷಿ ಸುನಾಕ್, ಭಾರತದ ಪ್ರಸಿದ್ಧ ಉದ್ಯಮಿ ಮತ್ತು ತಂತ್ರಜ್ಞ ನಾರಾಯಣಮೂರ್ತಿ ಮತ್ತು ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಅವರ ಅಳಿಯ. ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಅವರ ಪುತ್ರಿ ಅಕ್ಷತಾ ಅವರನ್ನು ಸುನಾಕ್ ವಿವಾಹವಾಗಿದ್ದಾರೆ.

ಈಗ ರಿಷಿ ಸುನಕ್ ಏನು ಮಾಡುತ್ತಾರೆ?

ಈಗ ಸುನಾಕ್ ಕೋರ್ ಹಣಕಾಸು ಕಾರ್ಯತಂತ್ರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಜಾಗತಿಕ ಗ್ರಾಹಕರಿಗೆ ಮಾರ್ಗದರ್ಶನ ನೀಡುತ್ತಾರೆ. ವಿಶೇಷವಾಗಿ, ಅವರು ಪ್ರಸ್ತುತ ಭೂ-ರಾಜಕೀಯ ಉದ್ವಿಗ್ನತೆ (ಉದಾ. ರಷ್ಯಾ-ಉಕ್ರೇನ್, ಚೀನಾ-ತೈವಾನ್, ಬ್ರಿಕ್ಸ್ vs ಅಮೇರಿಕಾ), ಮ್ಯಾಕ್ರೋ ಎಕನಾಮಿಕ್ ಅಸ್ಥಿರತೆ (ಉದಾ. ಜಾಗತಿಕ ಹಣದುಬ್ಬರ, ಬಡ್ಡಿದರಗಳ ನೀತಿ), ಬ್ರೆಕ್ಸಿಟ್ ನಂತರದ ಬ್ರಿಟನ್‌ನ ಆರ್ಥಿಕ ಪಾತ್ರ ಮುಂತಾದ ವಿಷಯಗಳ ಕುರಿತು ಗೋಲ್ಡ್‌ಮನ್ ಸ್ಯಾಚ್ಸ್‌ಗೆ ಕಾರ್ಯತಂತ್ರವನ್ನು ರೂಪಿಸಲು ಸಹಾಯ ಮಾಡುತ್ತಾರೆ.

ಪತಿ ಜೊತೆ ಜಗಳವಾಡಿ ಕೆರೆಗೆ ಹಾರಿ ರಕ್ಷಿಸುವಂತೆ ದೇವರನ್ನ ಪ್ರಾರ್ಥಿಸಿದ ಮಹಿಳೆ: ಆಮೇಲೆ ಆಗಿದ್ದೇನು?

Baby doll Archie became famous overnight! ರಾತ್ರೋರಾತ್ರಿ ಫೇಮಸ್ ಆದ ಬೇಬಿ ಡಾಲ್ ಆರ್ಚಿ! ಹಾಲಿವುಡ್‌ನಿಂದ್ಲೂ ಬಂತು ಆಫರ್, ಇದೆಲ್ಲ ಹೇಗಾಯ್ತು…?

Indian nurse Nimisha Priya sentenced to death ಜುಲೈ 16ರಂದು ಭಾರತೀಯ ನರ್ಸ್‌ ನಿಮಿಷಾ ಪ್ರಿಯಾಗೆ ಮರಣದಂಡನೆ

TAGGED:Rishi Sunak joins private company again
Share This Article
Facebook Twitter Copy Link Print
Previous Article HEART ATTACK ಹೃದಯಾಘಾತಕ್ಕೆ ಐಎಎಸ್‌ ಕನಸು ಕಂಡ ಯುವತಿ ಬಲಿ!
Next Article ಹೃದಯಾಘಾತ ಇಫೆಕ್ಟ್: ಜಯದೇವ ಆಸ್ಪತ್ರೆಯಲ್ಲಿ ರೋಗಿಗಳ ದಂಡು, ಒಪಿಡಿ ಫುಲ್!

Popular Posts

ಟೆಲಿಗ್ರಾಂ ಉಗ್ರವಾದ, ಸೈಬರ್ ಅಪರಾಧಗಳಿಗೆ ಅಡ್ಡೆ; ಹೈಕೋರ್ಟ್‌ಗೆ ಕೇಂದ್ರ ಸರ್ಕಾರದ ಗಂಭೀರ ಮಾಹಿತಿ

2 Min Read

Parishat election ಪರಿಷತ್ ಚುನಾವಣೆ ವೇಳೆ ಯತ್ನಾಳ್ ಮತದಾನಕ್ಕೆ ಟ್ವಿಸ್ಟ್: ‘ಬಿಜೆಪಿ ಅಭ್ಯರ್ಥಿಗೆ ಮತ ಹಾಕುತ್ತೇನೆ ಎಂದು ಮೊದಲೇ ಹೇಳಿದ್ದೆ’

1 Min Read

ಸುಳ್ಳು ಸಾವಿನ ಸುದ್ದಿ ವೈರಲ್: ಕಿಡಿಗೇಡಿಗಳ ವಿರುದ್ಧ ದೂರು ದಾಖಲಿಸಿದ ನಟ ದೊಡ್ಡಣ್ಣ

1 Min Read

‘ಸ್ಮಾರ್ಟ್ ಆಗಿ ಪ್ಯಾಕ್ ಮಾಡಿ, ಸುರಕ್ಷಿತವಾಗಿ ಊಟ ಮಾಡಿ’: ಆರೋಗ್ಯಕರ ಲಂಚ್‌ಬಾಕ್ಸ್‌ಗೆ FSSAI ಸಲಹೆಗಳು

1 Min Read

You Might Also Like

ಪ್ರಮುಖ

ಆರ್‌ಎಸ್‌ಎಸ್ ವಿರುದ್ಧ ಕ್ರಮ ಕೈಗೊಳ್ಳಲು ಪ್ರಿಯಾಂಕ್ ಖರ್ಗೆಗೆ ಅಧಿಕಾರವಿದೆಯೇ? ಮಹೇಶ್ ಜೇಠ್ಮಲಾನಿ ಕಾನೂನು ವಿವರಣೆ

2 Min Read
ಪ್ರಮುಖದೇಶ

Ex CM mamata ಮಮತಾ ಬ್ಯಾನರ್ಜಿ ಭದ್ರತಾ ಸಿಬ್ಬಂದಿ ಬದಲಿಸಿದ ಸುವೇಂದು ಸರ್ಕಾರ: ರಾಜಕೀಯ ಉದ್ದೇಶದ ನಡೆ ಎಂದ ಟಿಎಂಸಿ

1 Min Read
ವಿದೇಶ

ಪಶ್ಚಿಮ ಏಷ್ಯಾ ಯುದ್ಧಕ್ಕೆ ಅಂತ್ಯ? ಟ್ರಂಪ್–ಇರಾನ್ ಅಧ್ಯಕ್ಷರ ಐತಿಹಾಸಿಕ ಒಪ್ಪಂದ

1 Min Read
ಪ್ರಮುಖ

ಮುಂಗಾರಿಗೆ ಗ್ರಹಣ? ಉಪಗ್ರಹ ಚಿತ್ರಗಳಲ್ಲಿ ಆತಂಕಕಾರಿ ಸುಳಿವು; ಭಾರತದ ಆಕಾಶದಲ್ಲಿ ದಟ್ಟ ಮೋಡಗಳೇ ಕಾಣೆಯಾದವು.

1 Min Read

Social Networks

Facebook-f Instagram Twitter
Welcome Back!

Sign in to your account

Lost your password?