newsics.com
ಧಾರವಾಡ: ಯುಪಿಎಸ್‌ಸಿ ತಯಾರಿಯಲ್ಲಿದ್ದ ಯುವತಿ ಹೃದಯಾಘಾತದಿಂದ ಸಾವು ಕಂಡಿರುವ ಘಟನೆ ಧಾರವಾಡ ನಗರದ ಪುರೋಹಿತ್ ನಗರದಲ್ಲಿ ನಡೆದಿದೆ.
26 ವರ್ಷದ ಜೀವಿತಾ ಕುಸಗೂರ ಹೃದಯಾಘಾತದಿಂದ ಸಾವು ಕಂಡಿದ್ದಾರೆ. ಮಂಗಳವಾರ ಬೆಳಗ್ಗೆ ಮನೆಯಲ್ಲಿ ತಲೆ ಸುತ್ತು ಬರುತ್ತಿದೆ ಎಂದು ಜೀವಿತಾ ಸುಸ್ತಾಗಿ ಕುಳಿತಿದ್ದರು. ತಕ್ಷಣವೇ ಕುಟುಂಬದವರು ಆಕೆಯನ್ನು ಖಾಸಗಿ ಆಸ್ಪತ್ರೆಗೆ ರವಾನೆ ಮಾಡಿದ್ದರು ಎನ್ನಲಾಗಿದೆ.
ಆದರೆ ಜೀವಿತಾ ಮಾರ್ಗ ಮದ್ಯದಲ್ಲೇ ಸಾವು ಕಂಡಿದ್ದಾರೆ. ಆಸ್ಪತ್ರೆಗೆ ಹೋಗಿ ವೈದ್ಯರಿಗೆ ತೋರಿಸಿದಾಗ ಹೃದಯಾಘಾತದಿಂದ ಸಾವಾಗಿದೆ ಎಂದು ತಿಳಿಸಿದ್ದಾರೆ. ಎಂಎಸ್ಸಿ ಅಗ್ರಿ ಮಾಡಿದ್ದ ಯುವತಿ, ಐಎಎಸ್ ಅಧಿಕಾರಿಯಾಗುವ ಕನಸು ಕಂಡು ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ಮಾಡುತ್ತಿದ್ದರು.
ಜೀವಿತಾ ಅವರ ತಂದೆ ಪ್ರಾಥಮಿಕ ಶಾಲೆ ಶಿಕ್ಷಕರಾಗಿದ್ದು, ಮಗಳು ಯುಪಿಎಸ‌್‌ಸಿ ಪರೀಕ್ಷೆ ಪಾಸ್ ಆಗಲಿ ಎಂದು ಕನಸು ಕಂಡು ತಯಾರಿ ಮಾಡಿಸುತ್ತಿದ್ದರು. ಆದರೆ ಹೃದಯಾಘಾತದಿಂದ ಯುವತಿ ಇಹಲೋಕ ತ್ಯಜಿಸಿದ್ದಾಳೆ.
ದಾವಣಗೆರೆಯಲ್ಲಿ ಕುಸಿದು ಬಿದ್ದು ಯುವಕ ಸಾವು
ಇತ್ತ ದಾವಣಗೆರೆಯಲ್ಲಿಯೂ ಹೃದಯಾಘಾತ ಮರಣ ಮೃದಂಗ ಮುಂದುವರಿದಿದೆ. 22 ವರ್ಷದ ಕಾಲೇಜು ಯುವಕ ಹೃದಯಘಾತಕ್ಕೆ ಬಲಿಯಾಗಿದ್ದಾನೆ. ಇದ್ದಕ್ಕಿದ್ದಂತೆ ಮನೆಯಲ್ಲಿಯೇ ಕುಸಿದು ಬಿದ್ದಿದ್ದ ಯುವಕನನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಕೆಲವೇ ಹೊತ್ತಲ್ಲಿ ಆತ ಸಾವು ಕಂಡಿದ್ದಾನೆ. ಅಕ್ಷಯ್, ಉದ್ಯಮಿ ರೇಖಾ ಮುರುಗೇಶ್ ಅವರ ಪುತ್ರ. ದಾವಣಗೆರೆ ನಗರದ ಜಯನಗರ ಮನೆಯಲ್ಲಿ ಯುವಕ ಕುಸಿದು ಬಿದ್ದಿದ್ದ. ಆಸ್ಪತ್ರೆಗೆ ದಾಖಲಾದ ಕೆಲವೇ ಕ್ಷಣದಲ್ಲಿ ಯುವಕ ಸಾವು ಕಂಡಿದ್ದಾನೆ.
HEART ATTACK : ಹಾಸನದ ಹೃದಯಾಘಾತ ಕೇಸ್; ನಾಳೆ ಸರ್ಕಾರದ ಕೈಸೇರಲಿದೆ ವೈದ್ಯರ ವರದಿ!