newsics.com
ಆನೆಯೊಂದು ಮರಿಗೆ ಜನ್ಮ ನೀಡುವುದನ್ನು ನೋಡಿದ ಚಾಲಕ 2 ಗಂಟೆ ಕಾಲ ರೈಲು ಅನ್ನು ನಿಲ್ಲಿಸಿದ ಘಟನೆ ಜಾರ್ಖಂಡ್ ರಾಜ್ಯದ ಹಜಾರಿಭಾಗ್ ರೈಲ್ವೇ ನಿಲ್ದಾಣ- ಬರಖಾಖಾನಾ ಮಧ್ಯೆ ಇರುವ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ತಾಯಿ ಆನೆ ಮರಿಗೆ ಜನ್ಮ ನೀಡುವಾಗ ರೈಲ್ವೇ ಹಳಿಯ ಮೇಲೆ ಬಂದು ನಿಂತಿತ್ತು. ತಾಯಿ ಆನೆಗೆ ಯಾವುದೇ ತೊಂದರೆ ನೀಡಬಾರದು ಎಂದು ಮಧ್ಯರಾತ್ರಿ 3 ಗಂಟೆಯ ಸಮಯದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ರೈಲ್ವೇ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ, ಕೆಲ ಗಂಟೆ ಕಾಲ ರೈಲುಗಳ ಓಡಾಟವನ್ನು ನಿಲ್ಲಿಸುವಂತೆ ಮನವಿ ಮಾಡಿಕೊಂಡಿದ್ದರು.
ತಕ್ಷಣವೇ ರೈಲು ನಿಲ್ದಾಣದಿಂದ ಗೂಡ್ಸ್ ರೈಲಿನ ಲೋಕೋ ಪೈಲಟ್ಗೆ ಈ ಬಗ್ಗೆ ಆಲರ್ಟ್ ನೀಡಲಾಗಿತ್ತು. ಹೀಗಾಗಿ ಲೋಕೋ ಪೈಲಟ್, ಆಲರ್ಟ್ ಆಗಿ ತಾಯಿ ಆನೆ ಹಾಗೂ ಮರಿಯಾನೆಗೆ ಯಾವುದೇ ತೊಂದರೆಯಾಗದಂತೆ 2 ಗಂಟೆ ಕಾಲ ರೈಲು ನಿಲ್ಲಿಸಿದ್ದರು.
ಈ ಮಾರ್ಗದಲ್ಲಿ ಸಂಚರಿಸುವ ಎಲ್ಲ ರೈಲುಗಳನ್ನು ನಿಲ್ಲಿಸಲು ಮನವಿ ಮಾಡಿಕೊಂಡರು. ನಾನು ತಕ್ಷಣವೇ ಬರಖಾಖಾನಾದ ರೈಲ್ವೇ ಕಂಟ್ರೋಲ್ ರೂಂಗೆ ಸಂಪರ್ಕ ಮಾಡಿದೆ. ಎಲ್ಲ ರೈಲುಗಳನ್ನು ನಿಲ್ಲಿಸುವಂತೆ ಮನವಿ ಮಾಡಿಕೊಂಡೆ. ಅದರಂತೆ ರೈಲುಗಳ ಸಂಚಾರವನ್ನು ನಿಲ್ಲಿಸಲಾಯಿತು. ರೈಲ್ವೇ ಹಳಿಯ ಮೇಲೆಯೇ ಆನೆ, ಮರಿಗೆ ಜನ್ಮ ನೀಡಿದೆ.
https://www.newsics.com/2025/07/09/what-is-the-significance-of-guru-purnima/