newsics.com
ದಾವಣಗೆರೆ: ಅಳಿಯನೋರ್ವ ಅತ್ತೆಯೊಂದಿಗೆ ಓಡಿಹೋಗಿರುವ ಘಟನೆ ಚನ್ನಗಿರಿ ತಾಲೂಕಿನ ಮುದ್ದೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗಣೇಶ್ ಎನ್ನುವಾತ ಕಟ್ಟಿಕೊಂಡ ಹೆಂಡಿತಿ ಹೇಮಾಳನ್ನ ಚನ್ನಗಿರಿ ಬಸ್ ನಿಲ್ದಾಣದಲ್ಲಿ ಬಿಟ್ಟು ಅತ್ತೆ ಶೋಭಾ ಜೊತೆ ಪರಾರಿಯಾಗಿದ್ದಾನೆ. ಅಳಿಯ ಗಣೇಶ 25 ವರ್ಷ ವಯಸ್ಸಿನವನಾಗಿದ್ದರೆ, ಅತ್ತೆ ಶೋಭಾ ಗಣೇಶನಿಗಿಂತ 30 ವರ್ಷ ಹಿರಿಯವರು ಅಂದರೆ 55 ವರ್ಷ. ಇನ್ನು ಮದುವೆಯಾದ ಎರಡೇ ತಿಂಗಳಿಗೆ ಪತಿ, ತನ್ನ ಅಮ್ಮನ ಜೊತೆ ಪತಿ ಎಸ್ಕೇಪ್ ಆಗಿರುವುದಕ್ಕೆ ಪತ್ನಿ ಕಣ್ಣೀರಿಟ್ಟಿದ್ದಾಳೆ.
ಎರಡು ತಿಂಗಳ ಹಿಂದೆ ಅದ್ದೂರಿಯಾಗಿ ಗಣೇಶನ ಜೊತೆ ಹಿರಿಯ ಮಗಳು ಹೇಮಾಳನ್ನು ಅದ್ಧೂರಿಯಾಗಿ ಮದುವೆ ಮಾಡಲಾಗಿತ್ತು.
ನಾಗರಾಜ್ ಮೊದಲನೇ ಪತ್ನಿಯ ಮಗಳನ್ನು ಚನ್ನಗಿರಿ ತಾಲೂಕಿನ ಮರವಂಜಿ ಗ್ರಾಮದ ಗಣೇಶ್ ಎಂಬಾತನಿಗೆ ಕೊಟ್ಟು ಮಾಡಿಸಿದ್ದ. ಮದುವೆ ಮಾಡಿಕೊಟ್ಟ 15 ದಿನಕ್ಕೆ ಗಣೇಶ್ ಅತ್ತೆ ಜೊತೆ ಅಕ್ರಮ ಸಂಬಂಧ ಹೊಂದಿರೋದು ಬೆಳಕಿಗೆ ಬಂದಿದೆ. ಗಣೇಶ್ ಮೊಬೈಲ್ನಲ್ಲಿ ಅಶ್ಲೀಲ ಮೆಸೇಜ್ ನೋಡಿ ಮಗಳು ಅಪ್ಪನಿಗೆ ತಿಳಿಸಿದ್ದಾಳೆ.
ಈ ಬಗ್ಗೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.