newsics.com
ಬೆಂಗಳೂರು/ ನವದೆಹಲಿ: ಕರ್ನಾಟಕ ಮತ್ತು ಮಧ್ಯಪ್ರದೇಶದ ನಡುವೆ ನೇರ ರೈಲು ಸಂಪರ್ಕವನ್ನು ಹೆಚ್ಚಿಸುವ ಉದ್ದೇಶದಿಂದ ಬೆಂಗಳೂರು – ಗ್ವಾಲಿಯರ್ ನಡುವೆ ಹೊಸ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಆರಂಭಿಸಲಾಗಿದೆ.
ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಮಧ್ಯಪ್ರದೇಶದ ಗ್ವಾಲಿಯರ್ ನಿಲ್ದಾಣಗಳ ನಡುವೆ ಹೊಸ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ರೈಲ್ವೆ ಮಂಡಳಿ ಘೋಷಿಸಿದೆ.
ರೈಲು ಸಂಖ್ಯೆ 11085 / 11086 ಎಸ್‌ಎಂವಿಟಿ ಬೆಂಗಳೂರು – ಗ್ವಾಲಿಯರ್ – ಎಸ್‌ಎಂವಿಟಿ ಬೆಂಗಳೂರು ಸಾಪ್ತಾಹಿಕ ಎಕ್ಸ್‌ಪ್ರೆಸ್ ಆಗಿ ಕಾರ್ಯ ನಿರ್ವಹಿಸಲಿದೆ. ರೈಲು ಸಂಖ್ಯೆ 11085 ಎಸ್‌ಎಂವಿಟಿ ಬೆಂಗಳೂರು – ಗ್ವಾಲಿಯರ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ಜೂನ್ 29 ರಿಂದ ಪ್ರತಿ ಭಾನುವಾರ ಮಧ್ಯಾಹ್ನ 3:50 ಕ್ಕೆ ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಹೊರಟು ಮಂಗಳವಾರ ಬೆಳಗ್ಗೆ 10:25 ಕ್ಕೆ ಗ್ವಾಲಿಯರ್ ಜಂಕ್ಷನ್ ತಲುಪಲಿದೆ.
ರೈಲು ಸಂಖ್ಯೆ 11086 ಗ್ವಾಲಿಯರ್ – ಎಸ್‌ಎಂವಿಟಿ ಬೆಂಗಳೂರು ಸಾಪ್ತಾಹಿಕ ಎಕ್ಸ್‌ಪ್ರೆಸ್ ಜುಲೈ 4, 2025 ರಿಂದ ಪ್ರತಿ ಶುಕ್ರವಾರ ಮಧ್ಯಾಹ್ನ 3:00ಕ್ಕೆ ಗ್ವಾಲಿಯರ್‌ನಿಂದ ಹೊರಟು ಭಾನುವಾರ ಬೆಳಗ್ಗೆ 07:35ಕ್ಕೆ ಬೆಂಗಳೂರಿನ ಎಸ್‌ಎಂವಿಟಿಗೆ ಆಗಮಿಸಲಿದೆ.
ಈ ರೈಲು ಸೇವೆಯು 22 ಆಧುನಿಕ ಎಲ್‌ಎಚ್‌ಬಿ ಬೋಗಿಗಳನ್ನು ಒಳಗೊಂಡಿರಲಿದೆ. ಇವುಗಳಲ್ಲಿ 2 ಎಸಿ ಟು ಟೈರ್, 4 ಎಸಿ ತ್ರೀ ಟೈರ್, 3 ಎಸಿ ತ್ರೀ ಟೈರ್ ಎಕಾನಮಿ, 7 ಸ್ಲೀಪರ್ ಕ್ಲಾಸ್, 4 ಜನರಲ್ ಸೆಕೆಂಡ್ ಕ್ಲಾಸ್, 1 ಸೆಕೆಂಡ್ ಕ್ಲಾಸ್ ಲಗೇಜ್ ಕಮ್ ಅಂಗವಿಕಲ ಸ್ನೇಹಿ ಕಂಪಾರ್ಟ್‌ಮೆಂಟ್ ಮತ್ತು 1 ಲಗೇಜ್, ಜನರೇಟರ್ ಮತ್ತು ಬ್ರೇಕ್ ವ್ಯಾನ್ ಕೋಚ್ ಸೇರಿವೆ.
– ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ ಪ್ರಯಾಣಿಕರಿಗೆ ಅನುಕೂಲ.
ಈ ಹೊಸ ರೈಲು ಸೇವೆಯು ದಕ್ಷಿಣ ಮತ್ತು ಮಧ್ಯ ಭಾರತದ ನಡುವೆ ಪ್ರಯಾಣದ ಅನುಕೂಲತೆಯನ್ನು ಗಣನೀಯವಾಗಿ ಸುಧಾರಿಸಲಿದೆ.
24 ನಿಲ್ದಾಣಗಳಲ್ಲಿ ನಿಲುಗಡೆಯಿರುವುದರಿಂದ ಪ್ರಾದೇಶಿಕ ಸಂಚಾರಕ್ಕೆ ಅನುಕೂಲ.
ಬೆಂಗಳೂರಿನಿಂದ ಹೈದರಾಬಾದ್, ನಾಗಪುರ್, ಗ್ವಾಲಿಯಾರ್‌ಗೆ ತೆರಳುವವರಿಗೆ ಅನುಕೂಲ.
Marriage betrayal ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ: ಬಿಜೆಪಿ ಮುಖಂಡನ ಪುತ್ರನ ವಿರುದ್ಧ ದೂರು ದಾಖಲು
Hevay Rain ರಾಜ್ಯದ ಹಲವೆಡೆ ಭಾರೀ ಮಳೆ: ಈ ಜಿಲ್ಲೆಗಳ ಶಾಲೆಗಳಿಗೆ ಶುಕ್ರವಾರ ರಜೆ