newsics.com
ಕಮಲ್ ಹಾಸನ್ ನೀಡಿದ ಹೇಳಿಕೆಯ ಕಾರಣಕ್ಕೆ ಕರ್ನಾಟಕದಲ್ಲಿ ಬಿಡುಗಡೆಯಿಂದ ವಂಚಿತಗೊಂಡು ಚಿತ್ರತಂಡದ ಲೆಕ್ಕದ ಪ್ರಕಾರ ಸುಮಾರು 30 ಕೋಟಿ ನಷ್ಟ ಅನುಭವಿಸಿದೆ. ಸಿನಿಮಾ ಬಾಕ್ಸ್ ಆಫೀಸ್ನಲ್ಲಿಯೂ ಸಹ ತೀರಾ ಧಾರುಣವಾಗಿ ಸೋಲು ಕಂಡಿದೆ ಇದೀಗ ಸಿನಿಮಾದ ವಿರುದ್ಧ 25 ಲಕ್ಷ ರೂಪಾಯಿ ದಂಡ ಹೇರಲಾಗಿದೆ.
ಥಗ್ ಲೈಫ್’ ಸಿನಿಮಾ ಚಿತ್ರಮಂದಿರಗಳಲ್ಲಿ ಹೀನಾಯ ಪ್ರದರ್ಶನ ಕಂಡ ಹಿನ್ನಲೆ ಒಟಿಟಿಗೆ ಬೇಗ ಬಿಡುಗಡೆ ಮಾಡುವ ನಿರ್ಧಾರ ಮಾಡಲಾಗಿದೆ. ಸಿನಿಮಾ ಬಿಡುಗಡೆ ಆದ ನಾಲ್ಕೇ ವಾರಕ್ಕೆ ಸಿನಿಮಾ ಅನ್ನು ಒಟಿಟಿಗೆ ಬಿಡುಗಡೆ ಮಾಡಲು ಚಿತ್ರತಂಡ ಒಪ್ಪಿತ್ತು. ಆದರೆ ಇದು ಮಲ್ಟಿಪ್ಲೆಕ್ಸ್ಗಳನ್ನು ಕೆರಳಿಸಿದೆ.
ಯಾವುದೇ ಸಿನಿಮಾ ಚಿತ್ರಮಂದಿರಗಳಲ್ಲಿ 8 ವಾರ ಪ್ರದರ್ಶನ ಕಂಡ ಬಳಿಕ ಓಟಿಟಿಗೆ ಬರುತ್ತವೆ. ಮಲ್ಟಿಪ್ಲೆಕ್ಸ್ ಚೈನ್‌ಗಳು ಕೂಡ ಇದನ್ನೇ ಹೇಳುತ್ತಾ ಬರುತ್ತಿವೆ. ಆದರೆ ನಾಲ್ಕು ವಾರಕ್ಕೆ ‘ಥಗ್ ಲೈಫ್’ ಸಿನಿಮಾ ಓಟಿಟಿಗೆ ಬರುತ್ತದೆ ಎನ್ನುವ ಚರ್ಚೆ ಶುರುವಾಗಿದೆ. ಪರಿಣಾಮ 25 ಲಕ್ಷ ರೂ. ದಂಡ ಕಟ್ಟಬೇಕಾಗಿದೆ ಎಂದು ಪಿಂಕ್ ವಿಲ್ಲಾ ವೆಬ್‌ಸೈಟ್ ವರದಿ ಮಾಡಿದೆ.
8 ವಾರ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಆಗಲೇಬೇಕು ಎನ್ನುವ ನಿಯಮ ಉತ್ತರ ಭಾರತಲ್ಲಿದೆ. ‘ಥಗ್ ಲೈಫ್’ ಸಿನಿಮಾ ಆ ನಿಯಮ ಮೀರಿದರೆ ಮಲ್ಟಿಪ್ಲೆಕ್ಸ್ ಚೈನ್‌ಗಳು ನಿರ್ಮಾಪಕರ ಮೇಲೆ ದಂಡ ವಿಧಿಸುತ್ತವೆ. ಅಂದರೆ ನಿರ್ಮಾಪಕರು ಮತ್ತು ವಿತರಕರು ಹಿಂದಿ ಆವೃತ್ತಿಯಿಂದ ತಮ್ಮ 25 ಲಕ್ಷ ರೂ. ಪಾಲನ್ನು ಬಿಟ್ಟುಕೊಡಬೇಕು ಎನ್ನಲಾಗ್ತಿದೆ.