newsics.com
ಮಂಡ್ಯ: ಬಗರ್‌ಹುಕುಂನಲ್ಲಿ ಅರ್ಜಿ ಹಾಕಿರೋ ಸಾಬ್ರಿಗೆ (ಮುಸ್ಲಿಂ ಸಮುದಾಯದವರಿಗೆ) ಖಾತೆ ಮಾಡಬೇಡಿ. ಸರ್ಕಾರಿ ಜಮೀನು ಸರ್ಕಾರದ್ದಾಗಿಯೇ ಇರಬೇಕು. ಯಾರಾದರೂ ಅದನ್ನು ಸಾಬ್ರ ಹೆಸರಿನಲ್ಲಿ ಪರಭಾರೆ ಮಾಡಿದರೆ ನೇಣಿಗೆ ಹಾಕುವುದು ಗ್ಯಾರಂಟಿ’ ಎಂದು ಶಾಸಕ ರಮೇಶ್ ಬಂಡಿಸಿದ್ದೇಗೌಡ ಅಧಿಕಾರಿಗಳಿಗೆ ಧಮ್ಕಿ ಹಾಕಿರುವ ವಿಡಿಯೋ ಭಾರೀ ವೈರಲ್ ಆಗುತ್ತಿದೆ.
ಸರ್ಕಾರಿ ಜಮೀನಿನ ಮೇಲಿನ ಪರಭಾರೆ ವಿವಾದದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರು ಮಹದೇವಪುರದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಅಧಿಕಾರಿಗಳಿಗೆ ಧಮ್ಕಿ ಹಾಕಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.
ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರು ಬಹಿರಂಗ ಧಮ್ಕಿ ಹಾಕಿದ ವಿಡಿಯೋ ಇದೀಗ ಜನಮನ ಸೆಳೆಯುತ್ತಿದೆ. ಜನರ ಸಮ್ಮುಖದಲ್ಲೇ ನಡೆದ ಈ ಘಟನೆಯಲ್ಲಿ ಶಾಸಕರು, ‘ಸಾಬ್ರ ಹೆಸರಿನಲ್ಲಿ ಯಾವುದೇ ನೋಂದಣಿ ಅಥವಾ ಜಮೀನು ಹಸ್ತಾಂತರ ಮಾಡಿದರೆ ನಾನೇ ನೋಡಿಕೊಳ್ಳುತ್ತೇನೆ, ಅದಕ್ಕೆ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.
ಈ ಧಮ್ಕಿಯ ಹಿಂದಿನ ನಿಖರ ಹಿನ್ನೆಲೆ ಹಾಗೂ ವಿವಾದಿತ ಬಗರ್ ಹುಕುಂನ ಜಮೀನಿನ ದಾಖಲೆಗಳು ಮತ್ತು ಶಾಸಕರ ಹೇಳಿಕೆಗೆ ಸಂಬಂಧಿಸಿದ ನೈಜ ವಿಷಯಗಳು ಇನ್ನೂ ದೃಢವಾಗಿ ಬಹಿರಂಗವಾಗಿಲ್ಲ. ಆದರೆ ಶಾಸಕರ ಹೇಳಿಕೆ ಕುರಿತು ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.
MLA Raju Kage ಸಿದ್ದು ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಸಕ ರಾಜು ಕಾಗೆ ಗರಂ
ತಾಂತ್ರಿಕ ದೋಷ – ಜಮ್ಮುವಿಗೆ ಹೊರಟಿದ್ದ ಏರ್‌ಇಂಡಿಯಾ ವಿಮಾನ ದೆಹಲಿಗೆ ವಾಪಸ್