ತಾಂತ್ರಿಕ ದೋಷ – ಜಮ್ಮುವಿಗೆ ಹೊರಟಿದ್ದ ಏರ್‌ಇಂಡಿಯಾ ವಿಮಾನ ದೆಹಲಿಗೆ ವಾಪಸ್

newsics.com ನವದೆಹಲಿ: ದೆಹಲಿಯಿಂದ ಜಮ್ಮುವಿಗೆ  ಹೊರಟಿದ್ದ ಏರ್ ಇಂಡಿಯಾ  ವಿಮಾನ ತಾಂತ್ರಿಕ ದೋಷದಿಂದಾಗಿ ದೆಹಲಿಗೆ ವಾಪಸಾಗಿದೆ. ಏರ್ ಇಇಂಡಿಯಾ ವಿಮಾನ IX-2564 ಇಂದು ಮಧ್ಯಾಹ್ನ ಶ್ರೀನಗರಕ್ಕೆ ಹೊರಡುವ ಮುನ್ನ ಜಮ್ಮುವಿನಲ್ಲಿ ಲ್ಯಾಂಡ್ ಆದಬೇಕಿತ್ತು. ಆದರೆ ಅದರ ಪೈಲಟ್ ವಿಮನ ಇಳಿಸದೆ ದೆಹಲಿಗೆ ಹಿಂತಿರುಗಲು ನಿರ್ಧರಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವರದಿಗಳ ಪ್ರಕಾರ, ಇಳಿಯಲು ರನ್‌ವೇ ಸ್ಪಷ್ಟವಾಗಿತ್ತು. ಆದರೆ ಪೈಲಟ್ ವಿಮಾನ ಲ್ಯಾಂಡ್ ಆಗುವುದಿಲ್ಲ ಮತ್ತು ಬದಲಾಗಿ ದೆಹಲಿಗೆ ಹಿಂತಿರುಗುತ್ತಿದೆ ಎಂದು ಘೋಷಿಸಿದರು.